ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾ ಪ್ರವಾಹ ಭೀತಿ

Last Updated 1 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಪಟ್ನಾ(ಐಎಎನ್‌ಎಸ್): ಬಿಹಾರದಲ್ಲಿ ಗಂಗಾ ನದಿ ಸೇರಿದಂತೆ ವಿವಿಧ ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಹನ್ನೆರಡಕ್ಕೂ ಹೆಚ್ಚು ಜಿಲ್ಲೆಗಳಲ್ಲಿನ 50 ಲಕ್ಷ ಜನರು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ.

ಪ್ರವಾಹದಿಂದ ಈ ವರ್ಷ 132 ಜನರು ಸಾವಿಗೀಡಾಗಿದ್ದು, ಗಂಗಾ ಸೇರಿದಂತೆ ಸೋನೆ, ಬುಧಿ ಗಂಡಕ್, ಕೋಶಿ ಮತ್ತು ಗಂಡಕ್ ನದಿಗಳಲ್ಲಿ ಈವರೆಗೆ ಪ್ರವಾಹ ಕಡಿಮೆಯಾಗಿಲ್ಲ ಎಂದು ಕೇಂದ್ರ ಜಲ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಪಟ್ನಾದಲ್ಲಿ ಗಂಗಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದರೂ ಪಟ್ನಾ ನಗರ ಪ್ರವಾಹದಿಂದ ಸುರಕ್ಷಿತವಾಗಿದ್ದು, ಜನತೆ ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಮ್ಯಾಜಿಸ್ಟೇಟ್ ಎನ್.ಸರವಣ ಕುಮಾರ್ ತಿಳಿಸಿದ್ದಾರೆ.

ಭಾಗಲಪುರ, ಬಕ್ಸರ್, ಬೇಗುಸಾರೈ, ಮುಂಗರ್ ಮತ್ತು ಖಾಗರಿಯಾ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಗಂಗಾ ನದಿ ಒಂದರಿಂದಲೇ ಸಾವಿರ ಗ್ರಾಮಗಳು ಪ್ರವಾಹಕ್ಕೀಡಾಗಿವೆ ಎಂದು ಸರವಣ್  ಹೇಳಿದ್ದಾರೆ. ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿ ಮುಳುಗಡೆ ಆಗಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT