ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಯಥಾಸ್ಥಿತಿಗೆ ಸಲಹೆ

Last Updated 23 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲಡಾಕ್‌ನ ದೌಲತ್ ಬೇಗ್ ಒಲ್ಡಿ (ಡಿಬಿಒ)ಸೆಕ್ಟರ್‌ನಲ್ಲಿ ಈ ಹಿಂದೆ ಇದ್ದ ನಿಯಮವನ್ನೇ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಭಾರತ, ಚೀನಾವನ್ನು ಕೇಳಿದೆ.

ಚೀನಾದ ಸೈನಿಕರು 8 ದಿನಗಳ ಹಿಂದೆ ಭಾರತ ಗಡಿಯನ್ನು ದಾಟಿ 10 ಕಿ.ಮೀ ಒಳಗಿನ ಪ್ರದೇಶವನ್ನು ಅತಿಕ್ರಮಿಸಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಇಲ್ಲಿ ನಡೆದ ಉಭಯ ದೇಶಗಳ ಸೇನಾಧಿಕಾರಿಗಳ ಸಭೆಯಲ್ಲಿ ಈ ವಿಷಯವನ್ನು ಭಾರತ ಪ್ರಸ್ತಾಪಿಸಿದೆ. ಲಡಾಕ್‌ನ ಪಶ್ಚಿಮ ಗಡಿ ಭಾಗದಲ್ಲಿರುವ ಡಿಒಬಿ ಸೆಕ್ಟರ್‌ನಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಚೀನಾವನ್ನು ಕೇಳಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ.

`ವಾಸ್ತವಿಕ ಗಡಿ ನಿಯಂತ್ರಣ ರೇಖೆ ಕುರಿತು ಉಭಯ ರಾಷ್ಟ್ರಗಳ ಗಡಿಭಾಗದ ಸೇನಾಧಿಕಾರಿಗಳಲ್ಲಿ ಭಿನ್ನಾಭಿಪ್ರಾಯಗಳಿದ್ದು, ಚೀನಾ ಸೇನೆ ಗಡಿಯೊಳಗೆ ಅತಿಕ್ರಮಿಸಿರುವುದರಿಂದ ಎರಡೂ ರಾಷ್ಟ್ರಗಳ ಸೇನೆಗಳು ಮುಖಾ-ಮುಖಿಯಾಗಿವೆ. ಈ ಉದ್ವಿಗ್ನ ಸ್ಥಿತಿ ತಪ್ಪಿಸಲು ಚೀನಾ ಯಥಾ ಸ್ಥಿತಿ ಕಾಪಾಡಿಕೊಳ್ಳಲು ಸಲಹೆ ನೀಡಿದೆ.

ಗಡಿ ಅತಿಕ್ರಮಣ-ಚೀನಾ ನಕಾರ:
ಬೀಜಿಂಗ್(ಪಿಟಿಐ
):ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಲಡಾಖ್ ಮೂಲಕ ಭಾರತದ ಗಡಿಯನ್ನು ಅತಿಕ್ರಮಿಸಿದೆ ಎಂಬ ಆರೋಪವನ್ನು ಚೀನಾ  ಮಂಗಳವಾರ ಬಲವಾಗಿ ತಳ್ಳಿ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT