ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಶ್ವಾನ ಪ್ರದರ್ಶನ

Last Updated 21 ಡಿಸೆಂಬರ್ 2013, 6:41 IST
ಅಕ್ಷರ ಗಾತ್ರ

ಬೀದರ್: ಸಹಜ ಶಿವಯೋಗ ಹಾಗೂ ಶರಣ ಸಂಸ್ಕೃತಿ ಉತ್ಸವದ ಪ್ರಯುಕ್ತ ನಗರದ ಮನ್ನಳ್ಳಿ ರಸ್ತೆಯಲ್ಲಿನ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ಶ್ವಾನಗಳ ಪ್ರದರ್ಶನ ಗಮನ ಸೆಳೆಯಿತು.

ಡಾಬರ್‌ಮನ್‌, ಜರ್ಮನ್‌ ಶೆಫರ್ಡ್‌, ಡಗ್‌, ಲ್ಯಾಬ್ರಡಾರ್, ಗೋಲ್ಡನ್‌ ರಿಟ್ರೀವರ್, ಪಗ್‌, ಡ್ಯಾಶ್‌ ಹೊಂಡ್‌ ಸೇರಿದಂತೆ 10 ತಳಿಗಳ ಸುಮಾರು 49 ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಡಾಬರ್‌ಮನ್ ತಳಿಯ ಶ್ವಾನ ಪ್ರಥಮ, ಪಗ್‌ ತಳಿ ದ್ವಿತೀಯ ಮತ್ತು ಡ್ಯಾಶ್‌ ಹೊಂಡ್‌ ತಳಿಯ ಶ್ವಾನ ತೃತೀಯ ಬಹುಮಾನಕ್ಕೆ ಪಾತ್ರವಾದವು. ಕ್ರಮವಾಗಿ ಇವುಗಳ ಮಾಲೀಕರಾದ ನಿಖಿಲ್‌ಕುಮಾರ್, ಸಂಜುಕುಮಾರ್ ಹಾಗೂ ಪ್ರಸನ್ನಕುಮಾರ್‌ ಬಹುಮಾನ ಸ್ವೀಕರಿಸಿದರು.

ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾ. ಎಂ.ಎಸ್. ಉಸ್ತುರ್ಗೆ ಪ್ರದರ್ಶನಕ್ಕೆ ಚಾಲನೆ ನೀಡಿದರು. ಡಾ. ಸಿದ್ದಲಿಂಗಯ್ಯ ಹಿರೇಮಠ, ಡಾ. ವಿವೇಕ ಎಂ ಪಾಟೀಲ್‌, ಡಾ. ರವೀಂದ್ರ ಭೂರೆ  ಉಪಸ್ಥಿತರಿದ್ದರು.

ಚಿತ್ರಕಲಾ ಸ್ಪರ್ಧೆ: ಉತ್ಸವದ ನಿಮಿತ್ತ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು. ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT