ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಳಗನಾಥರ ಜನ್ಮದಿನ ಇಂದು

Last Updated 5 ಜನವರಿ 2012, 8:20 IST
ಅಕ್ಷರ ಗಾತ್ರ

ಗುತ್ತಲ: ಕನ್ನಡಿಗರಲ್ಲಿ ವಾಚನಾಭಿ ರುಚಿ ಹೆಚ್ಚಿಸಲು, ಕನ್ನಡದ ಬಗ್ಗೆ ಉದಾತ್ತ ಭಾವನೆಗಳನ್ನು ಮೂಡಿಸಬೇಕೆಂಬ ಮಹದಾಸೆಯಿಂದ ಕಾದಂಬರಿ ಬರೆದು, ಕನ್ನಡ ಸಾಹಿತ್ಯದ ಅಭ್ಯುದಯಕ್ಕೆ ತನ್ನದೇ ಆದ ಕೊಡುಗೆ ನೀಡಿದ ಕಾದಂಬರಿ ಪಿತಾಮಹ ಗಳಗನಾಥರ 143ನೇ ಜನ್ಮದಿನಾಚರಣೆ ಗುರುವಾರ (ತಾ.5ರಂದು) ಗುತ್ತಲದಲ್ಲಿ ನಡೆಯಲಿದೆ. ತಾವು ಕಷ್ಟದಲ್ಲಿದ್ದರೂ ಕನ್ನಡ ಸಾಹಿತ್ಯದ ಮೂಲಕ ಭಾಷಾಭಿಮಾನ ಮೂಡುವಂತೆ ಮಾಡಿದ ಹಾಗೂ ಶತಮಾನ ಕಂಡ ಮಾಸಪತ್ರಿಕೆ `ಸದ್ಬೋಧ ಚಂದ್ರಿಕೆ~ ಸಂಸ್ಥಾಪಕ ಗಳಗನಾಥರು ಗುತ್ತಲ ಸಮೀಪವಿರುವ ಗಳಗನಾಥ ಗ್ರಾಮದವರು.

ಗಳಗನಾಥರು (ವೆಂಕಟೇಶ ತಿರಕೋ ಕುಲಕರ್ಣಿ) ಹಾವೇರಿ ಜಿಲ್ಲೆಯ ಹಾವನೂರಿನಲ್ಲಿ 1869ರ ಜನವರಿ 5ರಂದು ಹುಟ್ಟಿದರು. ತಾಯಿ ಏಣೂಬಾಯಿ, ತಂದೆ ತಿರಕೋ(ತ್ರಿವಿಕ್ರಮಭಟ್ಟ).

ಶಿಕ್ಷಕರಾಗಿ ಸೇವೆ ಸಲ್ಲಿದ ಇವರ ಕೃತಿಗಳು ಅವರ ಸಾಹಿತ್ಯದ ಪ್ರೌಢಿಮೆಯನ್ನು ತಿಳಿಸುತ್ತವೆ. ತಾವೇ ರಚಿಸಿದ ಕೃತಿಗಳನ್ನು ತಲೆಯ ಮೇಲೆ ಹೊತ್ತು ಮಾರಿದ ಧೀಮಂತ ವ್ಯಕ್ತಿ.

ಗಳಗನಾಥರ ಸ್ಮಾರಕ ಪುರುಜ್ಜೀವನಗೊಳಿಸುವ ಕಾರ್ಯಕ್ಕೆ ಗಳಗನಾಥರ ಅಭಿಮಾನಿಗಳು ಜನ್ಮದಿನದಂದೇ ಚಾಲನೆ ನೀಡಲಿದ್ದಾರೆ. ಗುರುವಾರ ಮಧ್ಯಾಹ್ನ ಇಲ್ಲಿನ ಕನ್ನಡ ಶಾಲೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT