ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಾರ, 13-12-1962

Last Updated 12 ಡಿಸೆಂಬರ್ 2012, 19:50 IST
ಅಕ್ಷರ ಗಾತ್ರ

`ಕೊಲಂಬೋ ಸಲಹೆ
ಭಾರತ - ಚೀಣ ನೇರ
ಸಂಧಾನಕ್ಕೆ ನಾಂದಿ'

ಕೊಲಂಬೋ, ಡಿ. 12 - ಯುದ್ಧ ಸ್ತಂಭನದ ಸಂಘಟನೆಗೆ ಮತ್ತು ಭಾರತ - ಚೀಣಾ ನಡುವಣ ಗಡಿ ವಿವಾದ ಪರಿಹಾರ ಕ್ಕೆ ಸಂಧಾನ ನಡೆಸಲು ಉಭಯ ರಾಷ್ಟ್ರ ಗಳನ್ನು ಒಟ್ಟುಗೂಡಿಸುವ ಸರ‌್ವಾನುಮತ ಸಲಹೆಯೊಂದನ್ನು ಏಷ್ಯಾ, ಆಫ್ರಿಕಾ ತಟಸ್ಥ ರಾಷ್ಟ್ರಗಳ ಸಮ್ಮೇಳನ ಇಲ್ಲಿ ಇಂದು ರೂಪಿಸಿತು.
ಕೊಲಂಬೋದಲ್ಲಿ `ಚೀಣ - ಭಾರತ ಗಡಿ ವಿವಾದದ ಬಗ್ಗೆ ಪರಿಶೀಲನೆ ನಡೆಸಲು ಸಮಾವೇಶಗೊಂಡಿದ್ದ 6 ರಾಷ್ಟ್ರಗಳ ಮೂರು ದಿನಗಳ ಸಭೆ ಇಂದು ಮುಕ್ತಾಯವಾದ ನಂತರ ಸಂಕ್ಷಿಪ್ತ ಪ್ರಕಟಣೆಯೊಂದನ್ನು ಹೊರಡಿಸಿತು.

ಕದನ ವಿರಾಮಕ್ಕೆ ಭಾರತದ
ಅಡ್ಡಿಯಿಲ್ಲ: ಆದರೆ ಮುಂದಿನ
ಕ್ರಮ ಪರಿಸ್ಥಿತಿಗನುಗುಣವಾಗಿ

ನವದೆಹಲಿ, ಡಿ. 12 - `ಚೀಣ ಕದನ ವಿರಾಮ ಜಾರಿಗೆ ತರುವುದಕ್ಕೆ ಅಡ್ಡಿ ಮಾಡುವ ಇಚ್ಛೆ ಭಾರತ ಸರ್ಕಾರಕ್ಕಿಲ್ಲ. ಆದರೆ ಭವಿಷ್ಯದ ಬಗ್ಗೆ ಚೀಣಕ್ಕೆ ಆಶ್ವಾಸನೆ ನೀಡಿಲ್ಲ' ಎಂದು ಪ್ರಧಾನಿ ನೆಹರೂ ಇಂದು ರಾಜ್ಯ ಸಭೆಯಲ್ಲಿ ತಿಳಿಸಿದರು.
ನೆಹ್ರೂ ಮುಂದುವರೆದು, `ಮುಂದೆ ಸಂಭವಿಸಬಹುದಾದ ಪರಿಸ್ಥಿತಿ, ಘಟನೆಗಳ ಬೆಳವಣಿಗೆ ಅನುಸರಿಸಿ ಕ್ರಮ ಕೈಗೊಳ್ಳಲಾಗುವುದು' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT