ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಒಪ್ಪಂದ ಕೈಬಿಟ್ಟ ಚುನಾವಣಾ ಆಯೋಗ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರದ ಸುರ­ಕ್ಷತೆ ಮತ್ತು ಭದ್ರ­ತೆಯ ದೃಷ್ಟಿಯನ್ನು ಗಮನ­­ದಲ್ಲಿಟ್ಟುಕೊಂಡು  ಕೇಂದ್ರ ಚುನಾ­ವಣಾ ಆಯೋಗ, ಅಮೆರಿಕ ಮೂಲದ ಜಾಗ­­ತಿಕ ಅಂತರ್ಜಾಲ ಸಂಸ್ಥೆ ಗೂಗಲ್‌ ಜತೆಗಿನ ಉದ್ದೇಶಿತ ಒಪ್ಪಂದವನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿದೆ.

ಪ್ರಮುಖ ರಾಜಕೀಯ ಪಕ್ಷಗಳೂ ಸೇರಿ­­­­ದಂತೆ ಅನೇ­ಕರು ಗೂಗಲ್‌ ಜತೆಗಿನ ಒಪ್ಪಂದ ಕುರಿತು ಸಂದೇಹ ವ್ಯಕ್ತಪಡಿಸಿದ ಕಾರಣ ಈ ಕ್ರಮ ಕೈಗೊ­ಳ್ಳ­ಲಾ­ಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮುಂಬರುವ ಲೋಕಸಭಾ ಚುನಾ­ವಣೆ­­­ಯಲ್ಲಿ ಮತದಾರರಿಗೆ ಅಗತ್ಯ ಸೇವಾ ಸೌಲಭ್ಯ  ಮತ್ತು ಪ್ರತಿಕ್ಷಣದ ಮಾಹಿತಿ ಒದಗಿಸುವ ಉದ್ದೇಶದಿಂದ ಗೂಗಲ್‌ ಜತೆ ಒಪ್ಪಂದ ಮಾಡಿ­ಕೊ­ಳ್ಳಲು ಚುನಾ­ವಣಾ ಆಯೋಗ ಮುಂದಾಗಿತ್ತು.

ಚುನಾವಣೆ ವೇಳೆ ತಾನು ಒದಗಿಸುವ ಸೇವಾ ಸೌಲ­­ಭ್ಯಗಳ ಬಗ್ಗೆ ಮಾಹಿತಿ ನೀಡಲು ಗೂಗಲ್‌ ಸಂಸ್ಥೆ ಇತ್ತೀಚೆಗೆ ಆಯೋಗದ ಕಚೇರಿಯಲ್ಲಿ ಪರಿ­ಚಯ ಕಾರ್ಯ­ಕ್ರಮವನ್ನೂ ಹಮ್ಮಿ­ಕೊಂಡಿತ್ತು. ಆದರೆ,  ಈ ಯೋಜನೆಗೆ  ಆಕ್ಷೇಪ  ತೀವ್ರ­­ವಾದ ಹಿನ್ನೆಲೆಯಲ್ಲಿ  ಸಾಧಕ–ಬಾಧ­ಕ­ಗಳ ಕುರಿತು ಚರ್ಚಿ­ಸಲು ಆಯೋಗ ಗುರುವಾರ ಸಭೆ ಕರೆದಿತ್ತು.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌, ಆಯುಕ್ತ­ರಾದ ಎಚ್‌.ಎಸ್‌. ಬ್ರಹ್ಮ ಮತ್ತು ಎಸ್‌ಎನ್‌ಎ ಜೈದಿ  ಉದ್ದೇಶಿತ ಒಪ್ಪಂದ ಕೈಬಿಡುವ ತೀರ್ಮಾನಕ್ಕೆ ಬಂದರು.

ತಾನು ನೀಡುವ ಮಹತ್ವದ ಮಾಹಿತಿ­ಗಳನ್ನು  ಬಹಿರಂಗ ಪಡಿಸದಂತೆ ಆಯೋಗ ಈ ಮೊದಲ ಗೂಗಲ್ ಸಂಸ್ಥೆ ಯ ಜತೆ ಒಪ್ಪಂದವನ್ನೂ ಮಾಡಿ­ಕೊಂಡಿತ್ತು. ಆದರೆ, ಇದುವರೆಗೂ ಆಯೋಗ, ಸಂಸ್ಥೆಗೆ ಯಾವುದೇ ಮಾಹಿತಿ ಅಥವಾ ಅಂಕಿ, ಅಂಶಗಳನ್ನು ಹಸ್ತಾಂತರಿಸಿಲ್ಲ. 

ಗೂಗಲ್‌ ಸರ್ಚ್‌ ಎಂಜಿನ್‌ ಬಳಸಿ ಮತ­ದಾರಿಗೆ ಮಾಹಿತಿ ನೀಡುವ ಉದ್ದೇಶಿತ ಯೋಜನೆಗೆ ಕಾಂಗ್ರೆಸ್‌ ಮತ್ತು ಬಿಜೆಪಿಗಳಲ್ಲದೇ ಸೈಬರ್‌ ತಂತ್ರ­ಜ್ಞರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆ ದೃಷ್ಟಿ­ಯಿಂದ ಒಪ್ಪಂದ ಕೈಬಿಡುವುದು ಲೇಸು ಎಂದು ಕಾಂಗ್ರೆಸ್‌ನ ಕಾನೂನು ಘಟಕ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿತ್ತು. ಸರ್ವಪಕ್ಷಗಳ ಸಭೆ ಕರೆದು  ಒಪ್ಪಿಗೆ ಪಡೆಯುವಂತೆ ಬಿಜೆಪಿ ಸಲಹೆ ನೀಡಿತ್ತು.

ದೇಶದ ಚುನಾವಣೆಗೆ ಸಂಬಂಧಿಸಿದ  ಅಂಕಿ, ಅಂಶಗಳು ಮತ್ತು ಮಹತ್ವದ ದಾಖಲೆ­ಗಳನ್ನು ವಿದೇಶಿ ಸಂಸ್ಥೆಯೊಂದಕ್ಕೆ ಒಪ್ಪಿ­ಸುವುದು ಅಮೆರಿಕದ ಬೇಹು­ಗಾ­ರಿಕಾ ಇಲಾಖೆಗೆ ಒಪ್ಪಿಸಿಂತೆ. ರಾಷ್ಟ್ದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇದು ಸಮ್ಮತವಲ್ಲ ಎಂದು ಸೈಬರ್‌ ತಜ್ಞರು ಸಲಹೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT