ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ವಾಲೆಟ್ ಇದೆಯಲ್ಲ?!

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಮ್ಮ ಪರ್ಸ್‌ನೊಳಗೆ ಕೈ ಹಾಕಲು ಎಷ್ಟೋ ಕಂಪೆನಿಗಳು ಹಾತೊರೆಯುತ್ತಲೇ ಇರುತ್ತವೆ! ಆದರೆ, `ಗೂಗಲ್~ ಇನ್ನೊಂದು ಹೆಜ್ಜೆ ಮುಂದೆ ಹೋಗಬಯಸಿದೆ.  ಅದೇ ನಮ್ಮ ಪರ್ಸ್ ಆಗಿ ಪರಿವರ್ತನೆಯಾಗಲಿದೆ. ಅದರ ಹೊಸ ಮೊಬೈಲ್ ಸಾಫ್ಟ್‌ವೇರ್ `ಗೂಗಲ್ ವಾಲೆಟ್~, ನಮ್ಮ ಪರ್ಸ್‌ನಲ್ಲಿರುವ ಕ್ರೆಡಿಟ್ ಕಾರ್ಡ್‌ಗಳನ್ನು ಬದಲಾಯಿಸಲಿದೆ.

ಕೇಳಲು ಇದು ಕುತೂಹಲ ಮೂಡಿಸುತ್ತದೆ, ಅಲ್ಲವೇ? ಪರ್ಸ್‌ನಲ್ಲಿ ಕಾರ್ಡ್‌ಗಳಿಲ್ಲ; ಪೇಪರ್ (ರಶೀದಿ) ತುಂಡುಗಳಿಲ್ಲ; ಸಹಿ ಇಲ್ಲ. ಸುರಕ್ಷಿತ ಹಾಗೂ ತತ್‌ಕ್ಷಣದ ಅನುಕೂಲಕರ ಸೌಲಭ್ಯಗಳೆಲ್ಲ ಮೊಬೈಲಿನ ಬಟನ್‌ಗಳಿಂದಲೇ ಸಿಗುವ ದಿನ ದೂರವಿಲ್ಲ.ಯೂರೋಪಿಯನ್ ದೇಶಗಳಲ್ಲಿ ಈ ತೆರನಾದ ಸೌಲಭ್ಯ ಈಗಾಗಲೇ ಚಾಲ್ತಿಗೆ ಬಂದಿದೆ. ಇನ್ನೇನು ಅಮೆರಿಕದಲ್ಲೂ ಇದು ಗ್ರಾಹಕರಿಗೆ ಲಭ್ಯವಾಗಲಿದೆ.

ಗೂಗಲ್‌ನ ಆಂಡ್ರಾಯ್ಡ ಸಾಫ್ಟ್‌ವೇರ್ ಅನ್ನು ಅನುಸ್ಥಾಪಿಸಿದ ಏಕೈಕ ಮಾದರಿಯಾದ ಸ್ಪ್ರಿಂಟ್‌ನ ಗೂಗಲ್ ನೆಕ್ಸಸ್-ಎಸ್ ಮೊಬೈಲ್‌ನಲ್ಲಿ ಪ್ರಸ್ತುತ ಈ ಹೊಸ ಉಚಿತ ಸಾಫ್ಟ್‌ವೇರ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ.

ಏಕೆಂದರೆ `ಗೂಗಲ್ ವ್ಯಾಲೆಟ್~ಗೆ ವಿಶೇಷ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಶನ್) ಚಿಪ್ ಅಗತ್ಯವಾಗಿದ್ದು, `ನೆಕ್ಸಸ್-ಎಸ್~ ಇಂಥ ಸೌಲಭ್ಯ ಹೊಂದಿದ ಕೆಲವೇ ಮೊಬೈಲುಗಳಲ್ಲಿ ಒಂದಾಗಿದೆ.

`ಹಲವು ಮೊಬೈಲ್ ಕಂಪೆನಿಗಳ ಜತೆ ಈಗಾಗಲೇ ಮಾತುಕತೆ ನಡೆಸಿದ್ದೇವೆ. ಮುಂದಿನ ಕೆಲವು ದಿನಗಳಲ್ಲಿ ಇನ್ನಷ್ಟು ಮೊಬೈಲುಗಳು `ಎನ್‌ಎಫ್‌ಸಿ ಚಿಪ್~ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ~ ಎಂದು ಗೂಗಲ್ ಕಂಪೆನಿಯ ಮಾರುಕಟ್ಟೆ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಬಳಕೆ ಎಲ್ಲಿ? ಹೇಗೆ?
ಮುಂದಿನ ಪ್ರಶ್ನೆ ಎಂದರೆ- ಗೂಗಲ್ ವಾಲೆಟ್ ಅನ್ನು ಎಲ್ಲಿ ಬಳಸಬಹುದು?
ಮಾಸ್ಟರ್‌ಕಾರ್ಡ್ ಜತೆಗೆ ಒಪ್ಪಂದ ಮಾಡಿಕೊಳ್ಳುವ ಯೋಚನೆ ಗೂಗಲ್‌ನದ್ದು. ಇದರೊಂದಿಗೆ ಮಾಸ್ಟರ್‌ಕಾರ್ಡ್ ಸ್ವೀಕರಿಸುವ ಅಮೆರಿಕದ 1.5 ಲಕ್ಷ ಹಾಗೂ ಹೊರದೇಶಗಳ 2.3 ಲಕ್ಷ ವ್ಯಾಪಾರಿ ಕಂಪೆನಿಗಳ ಮೂಲಕ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ.

1.5 ಲಕ್ಷ ವ್ಯಾಪಾರಿ ಕಂಪೆನಿಗಳ ಒಟ್ಟು ಮಳಿಗೆಗಳೆಂದರೆ ಅದು ಸಾಕಷ್ಟು ದೊಡ್ಡ ಸಂಖ್ಯೆಯೇ ಆಗಲಿದೆ. ಸದ್ಯ ಸಿ.ವಿ.ಎಸ್., ಡಾನ್ ರೀಡ್, ರೇಡಿಯೊ  ಶಾಕ್, ಸೊನೊಕೊ, ಸ್ಪೋರ್ಟ್ಸ್ ಅಥಾರಿಟಿ, ಫುಟ್ ಲಾಕರ್ ಹಾಗೂ ನ್ಯೂಯಾರ್ಕ್ ಸಿಟಿ ಟ್ಯಾಕ್ಸಿ ಈ ಕಂಪೆನಿಗಳಲ್ಲಿ ಸೇರಿವೆ.
 
ಮುಂದಿನ ದಿನಗಳಲ್ಲಿ ಸಬ್‌ವೇ, ಮೆಕಿಸ್, ವಾಲ್‌ಗ್ರೀನ್ಸ್ ಹಾಗೂ ಬ್ಲೂಮಿಂಗ್‌ಡೇಲ್ಸ್ ಸೇರಿದಂತೆ ಇನ್ನಷ್ಟು ಕಂಪೆನಿಗಳನ್ನು ಇದಕ್ಕೆ ಒಳಪಡಿಸುವ ಯೋಚನೆಯಿದೆ. `ಗೂಗಲ್ ವಾಲೆಟ್~ ಬಳಸುವ ಗ್ರಾಹಕರಿಗೆಂದೇ ಸಾಕಷ್ಟು ಕಡೆಗಳಲ್ಲಿ ಮಳಿಗೆ, ಶಾಪಿಂಗ್ ಕಾಂಪ್ಲೆಕ್ಸ್‌ಗಳಲ್ಲಿ `ರೀಡರ್~ಗಳನ್ನು ಬಳಸುವ ಉದ್ದೇಶವಿದೆ.

ಕ್ರೆಡಿಟ್ ಕಾರ್ಡ್‌ನ ತದ್ರೂಪಿ ಎಂಬಂತಿರುವ `ಗೂಗಲ್ ವಾಲೆಟ್~ ಬಳಸುವುದೇ ರೋಮಾಂಚಕ ಅನುಭವ. ಕ್ರೆಡಿಟ್ ಕಾ   ರ್ಡ್‌ಗಳನ್ನು ಎಲ್ಲೆಲ್ಲಿ ಬಳಸಬಹುದೋ ಅಲ್ಲೆಲ್ಲ ಮೊಬೈಲ್ ಫೋನ್ ಬಳಸಬಹುದು! ಮಾಸ್ಟರ್‌ಕಾರ್ಡ್ ಹೊಂದಿರುವ ಗ್ರಾಕರು ಈ ಮೊಬೈಲ್ ಅನ್ನೇ ತಮ್ಮ  ಕ್ರೆಡಿಟ್ ಕಾರ್ಡ್‌ನಂತೆ ಉಪಯೋಗಿಸಬಹು.

ಎಲ್ಲ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ಗಳನ್ನು `ಗೂಗಲ್ ವಾಲೆಟ್~ ಮೂಲಕ ಬಳಸುವ ದಿನಗಳು ದೂರವಿಲ್ಲ.`ಈಗ ನಾವು ಅಭಿವೃದ್ಧಿಪಡಿಸಿರುವುದು ಪ್ರಾಥಮಿಕ ಹಂತದ ಹಾಗೂ ಒಂದೇ ಮೊಬೈಲ್‌ನಲ್ಲಿ ಒಬ್ಬ ಗ್ರಾಹಕ ಒಂದು ಕ್ರೆಡಿಟ್ ಕಾರ್ಡ್ ನೆರವಿನೊಂದಿಗೆ ಬಳಸಬಹುದಾದ ಸಾಫ್ಟ್‌ವೇರ್. ಮುಂದಿನ ದಿನದಲ್ಲಿ ಇದನ್ನು ಇನ್ನಷ್ಟು `ಗ್ರಾಹಕ ಸ್ನೇಹಿ~ಯಾಗಿ ರೂಪಿಸಲಿದ್ದೇವೆ ` ಎಂದು ಗೂಗಲ್ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರೊಬ್ಬರು ಹೇಳುತ್ತಾರೆ.

ಸುರಕ್ಷತೆ

ಈ ಅಪ್ಲಿಕೇಶನ್ ಬಳಸುವಾಗ ಸುರಕ್ಷತೆ ಬಗ್ಗೆ ಸಂದೇಹ ಬರುವುದು ಸಹಜ. `ಚಿಂತಿಸಬೇಕಿಲ್ಲ; ಆರಂಭದ ಹಂತದಿಂದಲೇ ನಾವು ಇದರ ಬಗ್ಗೆ ಗಮನ ಹರಿಸಿದ್ದೇವೆ~ ಎಂದು ಹೇಳುತ್ತದೆ ಗೂಗಲ್. ಮೊಬೈಲಿನ ಸ್ಕ್ರೀನ್ ಬಂದ್ ಆಗುತ್ತಲೇ, ಫೋನ್‌ನಲ್ಲಿರುವ `ಎನ್‌ಎಫ್‌ಸಿ ಚಿಪ್~ ಕೂಡ ತನ್ನಿಂತಾನೇ ಸ್ಥಗಿತಗೊಳ್ಳುತ್ತದೆ.ಈ ಫೋನ್ ಕಳುವಾದರೂ ಇದರಿಂದ ಖರೀದಿ ನಡೆಸಿ ವಂಚನೆ ಎಸಗುವ ಸಾಧ್ಯತೆಗಳು ಕಡಿಮೆ.
 
ಏಕೆಂದರೆ `ವಾಲೆಟ್~ ಮೂಲಕ ಖರೀದಿ ನಡೆಸಲು ಅಗತ್ಯವಾಗಿ ಬೇಕಾಗಿರುವುದು ರಹಸ್ಯ (ಕೋಡ್) ಸಂಖ್ಯೆ. ಹಾಗಾಗಿ ಫೋನ್ ಕದ್ದವರು ಇದರಿಂದ `ಲಾಭ~ ಪಡೆಯಲು ಆಗದು. ಒಂದು ವೇಳೆ ರಹಸ್ಯ ಕೋಡ್ ಸಂಖ್ಯೆಯನ್ನು ಐದು ಸಲ ಒತ್ತಿ, ಪ್ರಯತ್ನಿಸಿದರೆ `ವಾಲೆಟ್~ ಸಂಪೂರ್ಣ ನಿಷ್ಕ್ರಿಯಗೊಂಡು ಬಿಡುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT