ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್: ವಿಜ್ಞಾನ ಮೇಳ

Last Updated 12 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಚಿಣ್ಣರು ಮತ್ತು ಯುವ ಜನಾಂಗದಲ್ಲಿ  ವಿಜ್ಞಾನದಲ್ಲಿ ಇನ್ನಷ್ಟು ಆಸಕ್ತಿ ಮೂಡಿಸಲು ಇಂಟರ್‌ನೆಟ್‌ನ ಜನಪ್ರಿಯ ಮಾಹಿತಿ ಶೋಧ ತಾಣವಾಗಿರುವ ಗೂಗಲ್ ಮುಂದಾಗಿದೆ. ಗೂಗಲ್ ಎಂದರೆ ಮಾಹಿತಿ ಶೋಧದ ತಾಣ ಎನ್ನುವ ಅನ್ವರ್ಥನಾಮ ಇದೆ. ಈಗ ಈ ಖ್ಯಾತಿಯನ್ನು ವಿಜ್ಞಾನಕ್ಕೂ ಅನ್ವಯಿಸಲು ಗೂಗಲ್ ಮುಂದಾಗಿದೆ. ಈ ಕಾರಣಕ್ಕೆ ಇದೇ ಮೊದಲ ಬಾರಿಗೆ ಸಂಸ್ಥೆಯು ತನ್ನ ನ್ಯೂಯಾರ್ಕ್ ಕಚೇರಿಯಲ್ಲಿ ವಿಜ್ಞಾನ ಮೇಳ ಆಯೋಜಿಸಿತ್ತು. ಮಕ್ಕಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ  ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿತ್ತು.

ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ವಿಜ್ಞಾನ, ಬಾಹ್ಯಾಕಾಶ ಮತ್ತು ವೈದ್ಯಕೀಯ ತಂತ್ರಜ್ಞಾನ ರಂಗದಲ್ಲಿ ಇನ್ನಷ್ಟು ಆಸಕ್ತಿ ಮೂಡಿಸಿ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ಮೇಳದ ಅಂಗವಾಗಿ ಜಾಗತಿಕ ಸ್ಪರ್ಧೆ ಏರ್ಪಡಿಸಿತ್ತು. ಈ ವಿಜ್ಞಾನ ಮೇಳವು ಇಂಟೆಲ್ ಅಥವಾ ಸೀಮೆನ್ಸ್ ಏರ್ಪಡಿಸುವ ವಿಜ್ಞಾನ ಮೇಳಕ್ಕಿಂತ ಭಿನ್ನವಾಗಿತ್ತು.

ಯುವ ವಿಜ್ಞಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗಗಳನ್ನು ನಡೆಸಲು ನೆರವಾಗುವ ಮೂಲಕ ಅವರ ಬದುಕಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಗೂಗಲ್ ಮುಂದಾಗಿದೆ.

ಹೊಸ ಹೊಸ ಪ್ರಯೋಗಗಳನ್ನು ಮಾಡಲು ಯುವ ಪೀಳಿಗೆಯನ್ನು ಉತ್ತೇಜಿಸುವ, ಗೂಗಲ್ ಉತ್ಪನ್ನಗಳ ನೆರವು ಪಡೆಯುವಂತೆ ಮಾಡುವ ಮೂಲಕ ವಿಜ್ಞಾನ ಜನಪ್ರಿಯಗೊಳಿಸಲು ಮತ್ತು ಭವಿಷ್ಯದ ವಿಜ್ಞಾನಿಗಳಲ್ಲಿ ತನ್ನ ಅಸ್ತಿತ್ವ ಬಲಪಡಿಸಲು ಗೂಗಲ್ ಉದ್ದೇಶಿಸಿದೆ.
ವಿದ್ಯಾರ್ಥಿಗಳು ತಮ್ಮ ಸಂಶೋಧನೆ, ಪ್ರಬಂಧ ಮತ್ತು ಯೋಜನೆಗಳನ್ನು ಜಿ-ಮೇಲ್, ಯೂಟ್ಯೂಬ್ ಮೂಲಕವೇ  ಮಂಡಿಸಲು ಈ ಮೇಳ ಅವಕಾಶ ಕಲ್ಪಿಸಿತ್ತು.

ಗೂಗಲ್‌ನ ಆನ್‌ಲೈನ್ ಸಾಧನಗಳು ಭವಿಷ್ಯದ ವಿಜ್ಞಾನಕ್ಕೆ ನೆರವಾಗುವಂತೆ ಮಾಡುವುದು, ಕಲಿಕೆಯಲ್ಲಿಯೂ ಈ ಸಾಧನಗಳು ಬಳಕೆಯಾಗುವಂತೆ ಮಾಡುವುದರ ಮೂಲಕ ಅವುಗಳು ಮಕ್ಕಳ ಮತ್ತು ಅವರ ಭವಿಷ್ಯದ ಬದುಕಿನ ಭಾಗವಾಗುವಂತೆ ಮಾಡುವುದು ಈ ಮೇಳದ ಉದ್ದೇಶವಾಗಿದೆ.

ಸದ್ಯಕ್ಕೆ ಕಚೇರಿ ಕೆಲಸಗಳಲ್ಲಿ ಮೈಕ್ರೊಸಾಫ್ಟ್‌ನ ತಂತ್ರಜ್ಞಾನದ ಬಳಕೆ ಗಮನಾರ್ಹ ಪ್ರಮಾಣದಲ್ಲಿ ಇದೆ. ಮಕ್ಕಳಲ್ಲಿ ಈಗಿನಿಂದಲೇ ಗೂಗಲ್ ಉತ್ಪನ್ನ, ತಂತ್ರಜ್ಞಾನದ ಬಳಕೆ ಬಗ್ಗೆ ಅರಿವು ಮೂಡಿಸಿದರೆ ಭವಿಷ್ಯದಲ್ಲಿ ಗೂಗಲ್ ಉತ್ಪನ್ನಗಳ ಬಳಕೆ ಹೆಚ್ಚಬಹುದು ಎನ್ನುವ ಆಲೋಚನೆಯನ್ನೂ ಗೂಗಲ್ ಹೊಂದಿದೆ. ಶಿಕ್ಷಕರಿಗೆ ಗೂಗಲ್ ವಿಜ್ಞಾನ ಕಾರ್ಯಾಗಾರಗಳನ್ನೂ ಏರ್ಪಡಿಸುವುದು, ವಿದ್ಯಾರ್ಥಿಗಳನ್ನು ತನ್ನ ಕ್ಯಾಂಪಸ್ ಪ್ರಚಾರ ರಾಯಭಾರಿಗಳಂತೆ ಬಳಸಿಕೊಳ್ಳುವ ಮೂಲಕ ಗೂಗಲ್ ಯುವ ವಿಜ್ಞಾನಿಗಳ ಹೃದಯ ಗೆಲ್ಲಲು ಹೊರಟಿದೆ.

ಯುಟ್ಯೂಬ್: ಬದಲಾವಣೆಗೆ ಸಜ್ಜು
ಇಂಟರ್‌ನೆಟ್‌ನ ಅತ್ಯಂತ ಜನಪ್ರಿಯ ವಿಡಿಯೊ ತಾಣ ಯುಟ್ಯೂಬ್, ಈಗ ಹೊಸ ದಿಕ್ಕಿನಲ್ಲಿ ಆಲೋಚಿಸುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಟೆಲಿವಿಷನ್ ಕಾರ್ಯಕ್ರಮಗಳು ಮತ್ತು ಚಾನೆಲ್‌ಗಳ ವೀಕ್ಷಣೆ ಸೌಲಭ್ಯ ಒದಗಿಸುವ ಮೂಲಕ  ತನ್ನ ಸ್ವರೂಪದಲ್ಲಿ ವ್ಯಾಪಕ ಬದಲಾವಣೆ ತರಲು ಸಜ್ಜಾಗಿದೆ.
ಪ್ರಮುಖ ಟೆಲಿವಿಷನ್ ಕಾರ್ಯಕ್ರಮಗಳು ಈ ಇಂಟರ್‌ನೆಟ್ ತಾಣದಲ್ಲಿಯೇ ವೀಕ್ಷಿಸಲು ಅವಕಾಶ ಕಲ್ಪಿಸುವ ಮೂಲಕ, ಬಳಕೆದಾರರು ಈ ತಾಣವನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬಳಸಲು ಉತ್ತೇಜಿಸುವುದು ಈ ...

ಈ ಅಂತರ್‌ಜಾಲ ತಾಣಕ್ಕೆ ಸೀಮಿತವಾದ ಟೆಲಿವಿಷನ್ ಕಾರ್ಯಕ್ರಮಗಳನ್ನು ಸಿದ್ಧಪಡಿಸಲು 10 ಕೋಟಿ ಡಾಲರ್ ವೆಚ್ಚ ಮಾಡಲಾಗುತ್ತಿದೆ.
ವಿಡಿಯೊ ಸೌಲಭ್ಯಗಳ ನೇರ ಪ್ರಸಾರವು , ಇಂಟರ್‌ನೆಟ್ ಬಳಕೆದಾರರಿಗೆ ಟೆಲಿವಿಷ ನ್ ಕಾರ್ಯಕ್ರಮಗಳ ನೇರ ಪ್ರಸಾರ ವೀಕ್ಷಣೆಯ ಅನುಭವ ಒದಗಿಸುವಂತೆ ಮಾಡಲಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT