ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಹಾದಿಯಲ್ಲಿ ಪಂಜಾಬ್‌

Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಂಜಾಬ್‌ ತಂಡದವರು ಇಲ್ಲಿ ನಡೆಯುತ್ತಿರುವ ಕೂಚ್‌ ಬೆಹಾರ್ ಟ್ರೋಫಿ 19 ವರ್ಷ ವಯಸ್ಸಿನೊಳಗಿನವರ ಕ್ರಿಕೆಟ್‌ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಇನಿಂಗ್ಸ್‌ ಗೆಲುವಿನ ಕನಸಿನಲ್ಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಮಂಗಳವಾರ ಪಂಜಾಬ್‌ 5 ವಿಕೆಟ್‌ಗೆ 552 ರನ್‌ ಕಲೆಹಾಕಿ ಮೊದಲ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

400 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಕರ್ನಾಟಕ ದಿನದಾಟದ ಅಂತ್ಯಕ್ಕೆ 69 ಓವರ್‌ಗಳಲ್ಲಿ 4 ವಿಕೆಟ್‌ಗೆ 167 ರನ್‌ ಗಳಿಸಿತ್ತು. ಇದೀಗ ಸೋಲು ತಪ್ಪಿಸಲು   ಅಂತಿಮ ದಿನವಿಡೀ ಬ್ಯಾಟ್‌ ಮಾಡಬೇಕಾದ ಸವಾಲು ಕರ್ನಾಟಕದ ಮುಂದಿದೆ.
ಪಂಜಾಬ್‌ ಐದು ವಿಕೆಟ್‌ಗೆ 467 ರನ್‌ಗಳಿಂದ ಮಂಗಳವಾರ ಆಟ ಮುಂದುವರಿಸಿತ್ತು. 19 ಓವರ್‌ಗಳನ್ನು ಆಡಿದ ಬಳಿಕ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ ಮೊದಲ ಇನಿಂಗ್ಸ್‌ 65.4 ಓವರ್‌ಗಳಲ್ಲಿ 152 ಮತ್ತು ಎರಡನೇ ಇನಿಂಗ್ಸ್‌ 69 ಓವರ್‌ಗಳಲ್ಲಿ 4 ವಿಕೆಟ್‌ಗೆ 167 (ಅಭಿಷೇಕ್‌ ಎಂ. ರೆಡ್ಡಿ 56, ರಿಷಬ್‌ ಜಿ.ಎಂ 35, ಅಭಿನವ್‌ ಮನೋಹರ್‌ 34, ಸಿದ್ಧಾರ್ಥ್‌ ಶರ್ಮ 47ಕ್ಕೆ 2)
ಪಂಜಾಬ್‌: ಮೊದಲ ಇನಿಂಗ್ಸ್‌ 134 ಓವರ್‌ಗಳಲ್ಲಿ 5 ವಿಕೆಟ್‌ಗೆ 552 ಡಿಕ್ಲೇರ್ಡ್‌ (ನಿಖಿಲ್‌ ಎಸ್‌. ಚೌಧರಿ 62, ಕರಣ್‌ ಎಸ್‌ ಕಾಲಿಯಾ 64, ಪ್ರಸಿದ್ಧ್‌ ಎಂ. ಕೃಷ್ಣ 84ಕ್ಕೆ 3, ಕೆ.ಎನ್‌. ಭರತ್‌ 99ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT