ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲದ ಹೇಳಿಕೆ: ಸಂಸದ ಟೀಕೆ

Last Updated 21 ಫೆಬ್ರುವರಿ 2011, 6:45 IST
ಅಕ್ಷರ ಗಾತ್ರ

ಸಾಗರ: ‘ಸಾಹಿತಿ ಡಾ.ನಾ. ಡಿಸೋಜ ಅವರು ಅಭಿವೃದ್ಧಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಧ್ಯಯನ ಮಾಡದೇ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿ ಹಾದಿ ತಪ್ಪಿಸುತ್ತಿದ್ದಾರೆ. ಸಾಹಿತಿಯಾಗಿ ಕನ್ನಡ ನುಡಿ-ಭಾಷೆಗಳ ಬಗ್ಗೆ ಚರ್ಚೆ, ಹೋರಾಟಗಳ ಬಗ್ಗೆ ಗಮನ ಕೊಡದೇ ಪೂರ್ವಗ್ರಹಪೀಡಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ದೂರಿದ್ದಾರೆ.

ಶಿಕಾರಿಪುರಲ್ಲಿ ಜಾನಪದ ವಿವಿ ಸ್ಥಾಪನೆ ಮಾಡುವ ಬದಲು ಸಾಗರದಲ್ಲೇ ಅದನ್ನು ಸ್ಥಾಪಿಸಬೇಕು ಎಂದು ನಾ. ಡಿಸೋಜ ಅವರು ಈಚೆಗೆ ಪತ್ರಿಕಾಗೋಷ್ಠಿ ಕರೆದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಸಂಸದರು, ಸಾಗರ ತಾಲ್ಲೂಕಿನ ಬಗ್ಗೆ ಮಲತಾಯಿ ಧೋರಣೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.

ಶಿಕಾರಿಪುರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವುದಿಲ್ಲ ಎಂದು ಈಗಾಗಲೇ ನಾನು ಹೇಳಿಕೆ ನೀಡಿದ್ದೇನೆ. ನಕ್ಸಲ್ ನಿಗ್ರಹ ತರಬೇತಿ ಅಕಾಡೆಮಿಯನ್ನು ಸಾಗರ ತಾಲ್ಲೂಕಿನ ಇಕ್ಕೇರಿ ಸಮೀಪ ಆರಂಭಿಸಲು ಮುಂದಾದಾಗ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಈ ಅಕಾಡೆಮಿ ನಕ್ಸಲ್‌ಪೀಡಿತ ಪ್ರದೇಶದಿಂದ ದೂರ ಇರಬೇಕು ಎಂಬ ನಿಯಮವಿದ್ದು, 200 ಎಕರೆ ಜಮೀನು ಅಗತ್ಯ ಇರುವುದರಿಂದ ಶಿಕಾರಿಪುರದಲ್ಲಿ ಸ್ಥಾಪಿಸಲು ಸರ್ಕಾರ ತೀರ್ಮಾನಿಸಿದೆ. ಇದರ ಅರಿವಿಲ್ಲದೇ ಡಿಸೋಜ ಅವರು ಪ್ರಾಥಮಿಕ ಮಾಹಿತಿ ಇಲ್ಲದೇ ಹೇಳಿಕೆ ನೀಡಿದ್ದಾರೆ ಎಂದು ರಾಘವೇಂದ್ರ ಉತ್ತರಿಸಿದ್ದಾರೆ.

ಜಾನಪದ ವಿವಿಯನ್ನು ಶಿಕಾರಿಪುರ ತಾಲ್ಲೂಕಿನಲ್ಲಿ ಸ್ಥಾಪಿಸುವ ಚಿಂತನೆ ರಾಜ್ಯ ಸರ್ಕಾರದ ಮುಂದೆ ಇರುವುದಿಲ್ಲ. ತುಮರಿ ಸೇತುವೆಗೆ ್ಙ ನೂರು ಕೋಟಿ ಬಿಡುಗಡೆಯಾಗಿದ್ದು, ಉಳಿದ ಹಣವನ್ನು ಮುಂದಿನ ಆಯವ್ಯಯದಲ್ಲಿ ಬಿಡುಗಡೆ ಮಾಡಲಾಗುವುದು. ಶೀಘ್ರದಲ್ಲೇ ಸೇತುವೆ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಗರ-ಹೊಸನಗರವನ್ನು ಸಂಪರ್ಕಿಸುವ ಬೆಕ್ಕೋಡಿ ಹಾಗೂ ಪಟಗುಪ್ಪ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಶರಾವತಿ ಹಿನ್ನೀರಿನಿಂದ ಸಾಗರ ನಗರಕ್ಕೆ ನೀರು ತರುವ್ಙ 72 ಕೋಟಿ ವೆಚ್ಚದ ಯೋಜನೆ, ್ಙ 56 ಕೋಟಿ ವೆಚ್ಚದ ಪಟ್ಟಣದ ಒಳಚರಂಡಿ ಯೋಜನೆ ಟೆಂಡರ್ ಹಂತದಲ್ಲಿದೆ. ಶಿವಮೊಗ್ಗ-ತಾಳಗುಪ್ಪ ಬ್ರಾಡ್‌ಗೇಜ್ ರೈಲ್ವೆ ಮಾರ್ಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹಾಗೂ ನಾನು ಸಂಸದನಾದ ನಂತರ ಮಾಡಿದ ಪ್ರಯತ್ನದಿಂದ ಶೀಘ್ರದಲ್ಲೇ ಆರಂಭಗೊಳ್ಳಲಿದೆ.

ಶಿವಮೊಗ್ಗ-ಸಾಗರ ನಡುವೆ ಸುಸಜ್ಜಿತ ರಾಷ್ಟ್ರೀಯ ಹೆದ್ದಾರಿ, ಜೋಗ ಜಲಪಾತದ ಸಮಗ್ರ ಅಭಿವೃದ್ಧಿ, ಸಾಗರ ನಗರದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ವಿಶೇಷ ಅನುದಾನದ ಅಡಿ ್ಙ 22 ಕೋಟಿ ಮಂಜೂರು ಸೇರಿದಂತೆ ಅನೇಕ ಕೆಲಸಗಳು ಪ್ರಗತಿಯಲ್ಲಿದೆ.  ಡಿಸೋಜ ಅವರು ಪತ್ರಿಕಾ ಹೇಳಿಕೆ ನೀಡುವಾಗ ಎಚ್ಚರ ವಹಿಸಿ ಮಾತನಾಡುವುದು ಸೂಕ್ತ ಎಂದು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT