ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪ್ಯ ಮಾಹಿತಿಯಲ್ಲ

ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ರಾಜೀವ್ ಮಧ್ಯಸ್ಥಿಕೆ
Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): `ಇಂದಿರಾ ಗಾಂಧಿ ಅವರು ಭಾರತದ ಪ್ರಧಾನಿಯಾಗಿದ್ದಾಗ ಸ್ವೀಡನ್ ಕಂಪೆನಿಯಿಂದ ಯುದ್ಧ ವಿಮಾನ ಖರೀದಿಸುವಲ್ಲಿ ರಾಜೀವ್ ಗಾಂಧಿ ಅವರು ಮಧ್ಯಸ್ಥಿಕೆದಾರನ ಪಾತ್ರ ವಹಿಸಿದ್ದರು' ಎಂಬುದು ಗೋಪ್ಯ ಮಾಹಿತಿಯಲ್ಲ ಎಂಬುದು ಈಗ ದೃಢಪಟ್ಟಿದೆ.

ಈ ಯುದ್ಧ ವಿಮಾನ ಖರೀದಿ ಒಪ್ಪಂದದ ವೇಳೆ ಇಂದಿರಾ ಗಾಂಧಿ ಅವರ ಪುತ್ರ ರಾಜೀವ್ ಗಾಂಧಿಯವರು ಮಧ್ಯಸ್ಥಿಕೆ ವಹಿಸಿದ್ದರು ಎಂಬ ವಿಷಯ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆದರೆ,1975ಘೆಉಈಉ14031ಚಿ ಕಡತದ ಈ ಮಾಹಿತಿಯನ್ನು ಅಮೆರಿಕದ ವಿದೇಶಾಂಗ ಇಲಾಖೆಯು 2006ರ ಜುಲೈ 6ರಂದು ಗೋಪ್ಯ ಮಾಹಿತಿ ಪಟ್ಟಿಯಿಂದ ಕೈಬಿಟ್ಟಿತ್ತು. ಹೀಗಾಗಿ ಸರ್ಕಾರದ ನ್ಯಾಷನಲ್ ಆರ್ಕೈವ್ಸ್ ಅಂಡ್ ರೆಕಾರ್ಡ್ಸ್ ಅಡ್‌ಮಿನಿಸ್ಟ್ರೇಷನ್‌ನ (ನಾರಾ) ಡಿಡಿಡಿ. ಚ್ಟ್ಚಜಿಛಿ.ಟ್ಟಜ ವೆಬ್‌ಸೈಟ್‌ನಲ್ಲಿ ನಾಲ್ಕು ವರ್ಷಗಳಿಂದಲೂ ಈ ಮಾಹಿತಿ ಇತ್ತು.

ಅಷ್ಟೇ ಅಲ್ಲದೆ, ವಿಕಿಲೀಕ್ಸ್ ಇದೀಗ ಹೊರಗೆಡವಿರುವ ಅಮೆರಿಕ ರಾಜತಾಂತ್ರಿಕತೆಗೆ ಸಂಬಂಧಿಸಿದ ಮಾಹಿತಿಗಳು ಸೋರಿಕೆ ಮಾಹಿತಿಗಳಲ್ಲ. ಬದಲಾಗಿ ಸರ್ಕಾರದ ಅಂತರ್ಜಾಲದಿಂದ ನಿಯಮಬದ್ಧವಾಗಿಯೇ ಅವನ್ನು ಪಡೆದು ಹರಿಬಿಟ್ಟಿದೆ.

1973-76ರ ನಡುವಿನ ಅವಧಿಯ 17 ಲಕ್ಷ ರಾಜತಾಂತ್ರಿಕ ಮಾಹಿತಿಗಳನ್ನು ವಿಕಿಲೀಕ್ಸ್ ಅಂತರ್ಜಾಲದಲ್ಲಿ ಹಾಕಿದ್ದು, ಇದು `ದಿ ಕಿಸಿಂಜರ್ ಕೇಬಲ್' ಎಂದೇ ಜನರ ನಾಲಿಗೆ ಮೇಲೆ ಹರಿದಾಡುತ್ತಿದೆ.

ವಿಕಿಲೀಕ್ಸ್ ಅಂತರ್ಜಾಲಕ್ಕೆ ಹಾಕಿರುವ ಈ ಮಾಹಿತಿ ಹೊಸದೇನೂ ಅಲ್ಲ. ಅಮೆರಿಕದ ವಿದೇಶಾಂಗ ಇಲಾಖೆಯು 2006ರಲ್ಲೇ ಇವನ್ನು ಗೋಪ್ಯ ಮಾಹಿತಿ ಪಟ್ಟಿಯಿಂದ ಕೈಬಿಟ್ಟಿತ್ತು. ಹೀಗಾಗಿ, ನಾರಾದ ವೆಬ್‌ಸೈಟ್‌ನಲ್ಲಿ ಇವೆಲ್ಲವೂ ಪ್ರಕಟವಾಗಿದ್ದವು.

ಆದರೆ ವಿಕಿಲೀಕ್ಸ್, ಈ ಮಾಹಿತಿಗಳನ್ನು ಅಲ್ಲಿಂದ ಪಡೆದು ಅವಕ್ಕೆ ಸುಧಾರಿತ ರೂಪ ಕೊಟ್ಟು `ಓದುಗ ಸ್ನೇಹಿ'ಯಾಗುವಂತೆ ಮಾಡಿದೆ. ಅಂದರೆ ಇದಕ್ಕಾಗಿ ನಾರಾ ವೆಬ್‌ಸೈಟ್‌ನ 17 ಲಕ್ಷ  ಪಿಡಿಎಫ್ ಫೈಲ್‌ಗಳನ್ನು ಕಲೆಹಾಕಿ, ಅವನ್ನೆಲ್ಲಾ `ಉಲ್ಟಾ ಎಂಜಿನಿಯರಿಂಗ್' ಪ್ರಕ್ರಿಯೆಗೆ ಒಳಪಡಿಸಿ ಸುಧಾರಿತ ರೂಪ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT