ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸಂಸ್ಕೃತಿ ನಾಶ ಯತ್ನ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರವು 3,174 ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು ಬರುವ ಶೈಕ್ಷಣಿಕ ವರ್ಷದಿಂದ ಮುಚ್ಚುವುದರ ನಿರ್ಧಾರ ಖಂಡನೀಯ..

ವಿವೇಚನೆ ಇಲ್ಲದೆ, ವಿಶ್ಲೇಷಣೆ ಮಾಡದೆ, ಜನಪರ ಚಿಂತನೆ ಇಲ್ಲದೆ ಎಲ್ಲೆಂದರಲ್ಲಿ ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ನೀಡುತ್ತಾ ಮಾತೃಭಾಷೆಗೆ ಮಾತ್ರವಲ್ಲ ನಮ್ಮ ಗ್ರಾಮೀಣ ಪರಿಸರದ ಸಂಸ್ಕೃತಿಯನ್ನು ನಾಶ ಮಾಡಲು ಹೊರಟಂತಿದೆ ಸರ್ಕಾರದ ಈ ಕ್ರಮ.

 ಬಡಜನರ ವಿರೋಧಿಯಾದ ಈ ಅಮಾನವೀಯ ಕ್ರಮವನ್ನು ಎಲ್ಲ ದೇಶಿ ಚಿಂತಕರು ಖಂಡಿಸಬೇಕಿದೆ ಮತ್ತು ಸರ್ಕಾರದ ನೇತ್ಯಾತ್ಮಕ ಕಾರ‌್ಯಕ್ರಮ ಅನುಷ್ಠಾನಗೊಳ್ಳದಂತೆ ಒತ್ತಡ ಹೇರಬೇಕಾಗಿದೆ.
 
ಅಪ್ರಯೋಜಕವಾದ ಕನ್ನಡ ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಒತ್ತಾಯಿಸದೆ ಕನ್ನಡ ನಾಡು-ನುಡಿಯ ಕಳಕಳಿಯುಳ್ಳವರೆಲ್ಲ ರಾಜ್ಯ ಸರ್ಕಾರದ ಈ ಕ್ರಮವನ್ನು ಖಂಡಿಸಬೇಕು ಮತ್ತು ಕನ್ನಡವಾದ ಮಾತೃಭಾಷಾ ಶಿಕ್ಷಣಕ್ಕೆ ಬೆಂಬಲವಾಗಿ ನಿಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT