ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರಿಗೆ ನೇತ್ರ ಶಿಬಿರ

Last Updated 4 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

 2010ರಲ್ಲಿ  ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 44,489 ಜನ ಗಾಯಗೊಂಡಿದ್ದಾರೆ. ಅದರಲ್ಲೂ ಬೆಂಗಳೂರು ನಗರದಲ್ಲಿ ನಡೆದ 762 ಅಪಘಾತಗಳಲ್ಲಿ 803 ಜನರು ಕೊನೆಯುಸಿರೆಳೆದಿದ್ದಾರೆ, 4493 ಜನ ಗಾಯಗೊಂಡಿದ್ದಾರೆ.

ಪಾದಚಾರಿಗಳು, ಶಾಲಾ ಮಕ್ಕಳು, ಚಾಲಕರನ್ನು ಇಂತಹ ಅವಘಡದಿಂದ ರಕ್ಷಿಸುವುದು ಮುಖ್ಯ. ಜತೆಗೆ ಚಾಲಕರ ದೃಷ್ಟಿ ಉತ್ತಮವಾಗಿರುವುದು ಕೂಡ ಸುರಕ್ಷಿತ ಚಾಲನೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಈ ಕಾರಣದಿಂದಲೇ ಶಂಕರ ನೇತ್ರ ಚಿಕಿತ್ಸಾಲಯ ಚಾಲಕರಿಗೆ ಉಚಿತ ಸಮಗ್ರ ನೇತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿತ್ತು. ಸರ್ಕಾರಿ ಹಾಗೂ ಖಾಸಗಿ ವಲಯದ ಕಾರು, ಬಸ್ ಮತ್ತು ಇತರ ವಾಹನಗಳ 370 ಚಾಲಕರ ನೇತ್ರ ತಪಾಸಣೆ ನಡೆಸಲಾಯಿತು. ಶೇ 14ರಷ್ಟು ಚಾಲಕರಿಗೆ ಕನ್ನಡಕ ಅಥವಾ ವಿಸ್ತೃತ ತಪಾಸಣೆಗೆ ಸಲಹೆ ನೀಡಬೇಕಾಯಿತು. ಶೇ 60ರಷ್ಟು ಚಾಲಕರಿಗೆ ಕಣ್ಣಿನ ಆರೋಗ್ಯ ಎಷ್ಟು ಮಹತ್ವ ಎಂಬುದು ಚಾಲಕರಿಗೆ ಶಂಕರ ನೇತ್ರಾಲಯದಲ್ಲಿ ರಿಯಾಯ್ತಿ ದರದಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT