ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲುಕ್ಯರ ಸ್ಮಾರಕ ವೀಕ್ಷಿಸಿದ ಕಾರ್ನಾಡ

Last Updated 3 ಜನವರಿ 2011, 10:20 IST
ಅಕ್ಷರ ಗಾತ್ರ

ಬಾದಾಮಿ: ”ಚಾಲುಕ್ಯರ ಶಿಲ್ಪಕಲೆಯನ್ನು ವೀಕ್ಷಿಸಲು ಅನೇಕ ಸಲ ಬಂದಿರುವೆ. ಐಹೊಳೆ ಹಾಗೂ ಪಟ್ಟದಕಲ್ಲಿನ ದೇವಾಲಯಗಳ ಮೂರ್ತಿ ಶಿಲ್ಪವನ್ನು ಎಷ್ಟು ಬಾರಿ ನೋಡಿದರೂ ಇನ್ನೂ ಮೇಲಿಂದ ಮೇಲೆ ನೋಡಬೇಕೆಂಬ ತವಕ ಉಂಟಾಗುತ್ತಿದೆ” ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡ ಹೇಳಿದರು.

ಸ್ನೇಹಿತರೊಂದಿಗೆ ಚಾಲುಕ್ಯರ ಶಿಲ್ಪಕಲೆಯನ್ನು ವೀಕ್ಷಿಸಿದ ಅವರು, ಇಲ್ಲಿನ ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಭಾನುವಾರ ಭೇಟಿ ನೀಡಿದ ಪ್ರಜಾವಾಣಿ ಪ್ರತಿನಿಧಿಯೊಂದಿಗೆ ಚಾಲುಕ್ಯರ ಕಲೆಯ ಕುರಿತು ವಿಚಾರಗಳನ್ನು ಹಂಚಿಕೊಂಡರು. ಚಾಲುಕ್ಯರ ಕಲಾವಿದರು ಗುಹಾಂತರ ದೇವಾಲಯ ಹಾಗೂ ರಾಚನಿಕ ದೇವಾಲಯ
ಗಳ ಸ್ಮಾರಕಗಳಲ್ಲಿ ಸಾಂಪ್ರದಾಯಿಕ ಶಿಲ್ಪಕಲೆಯ ಹಿರಿಮೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಚಾಲುಕ್ಯರ ಇತಿಹಾಸದ ಬಗ್ಗೆ ಇನ್ನೂ ಸಂಶೋಧನೆಯ ಅಗತ್ಯವಿದೆ ಎಂದರು.

ಭಾನುವಾರದ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಅವರ ಆತ್ಮಕಥನ ‘ಆಡಾಡತ ಆಯುಷ್ಯ’ ಪ್ರಕಟವಾಗುವ ಕುರಿತು ಸಂತಸ ವ್ಯಕ್ತಪಡಿಸಿದರು. ಶನಿವಾರ ಐಹೊಳೆ ಹಾಗೂ ಪಟ್ಟದಕಲ್ಲಿನ ದೇವಾಲಯಗಳನ್ನು ವೀಕ್ಷಿಸಿ ಬಾದಾಮಿಗೆ ಆಗಮಿಸಿದ ಅವರು ರಸ್ತೆಗಳೆಲ್ಲ ಹಾಳಾಗಿ ಹೋಗಿವೆ. ವಾಹನಗಳು ಸರಿಯಾಗಿ ಬರಲಿಕ್ಕೆ ಆಗೋದಿಲ್ಲ. ಬಹುಶಃ ಹಿಂದೆ ಚಾಲುಕ್ಯರ ಕಾಲದ ರಸ್ತೆಗಳು ಅಂದವಿದ್ದವೋ ಏನೋ ಎಂದು ನಗುತ್ತ ಹೇಳಿದರು.

ವಿಶ್ವ ಪರಂಪರೆಯ ತಾಣವಾಗಿರುವ ಪಟ್ಟದಕಲ್ಲು ಹಾಗೂ ಐಹೊಳೆ ಸ್ಮಾರಕಗಳಿಗೆ ಹೋಗುವ ರಸ್ತೆಗಳು ಹಾಗೂ ಬಾದಾಮಿ ನಗರದ ಮುಖ್ಯ ರಸ್ತೆಯು ಸುಧಾರಣೆ ಯಾಗಬೇಕಿದೆ. ಎರಡು ವರ್ಷಗಳಿಂದ ಮಳೆಯಾಗಿ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT