ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರಕ್ಕೆ ಬಂದ ಪುಟಾಣಿ ಅತಿಥಿಗಳು

Last Updated 28 ಡಿಸೆಂಬರ್ 2012, 9:04 IST
ಅಕ್ಷರ ಗಾತ್ರ

 ಚಿಕ್ಕಬಳ್ಳಾಪುರ: ನಗರಕ್ಕೆ ಶನಿವಾರ ನೂತನ ಅತಿಥಿಗಳು ಆಗಮನವಾಗಿತ್ತು. ದೂರದ ಉತ್ತರಪ್ರದೇಶದಿಂದ ಬಂದಿದ್ದ ಅತಿಥಿಗಳು ನಗರದಾದ್ಯಂತ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟವು. ಹಿಡಿಯಲೆತ್ನಿಸಿದಾಗ ಸರಸರನೆ ಓಡುತ್ತಿದ್ದ ಈ ಅತಿಥಿಗಳು ಮುನಿಸಿಕೊಳ್ಳುತ್ತಿರಲಿಲ್ಲ. ಪುಟ್ಟ ಮಕ್ಕಳಂತೆ ಕೈಗೆ ಸಿಗದೆ ಒಂದು ಮೂಲೆ ಯಿಂದ ಮತ್ತೊಂದು ಮೂಲೆಗೆ, ಆ ಬದಿಯಿಂದ ಇನ್ನೊಂದು ಬದಿಗೆ ಜೋರಾಗಿ ಓಡಾಡುತ್ತಿದ್ದವು. ಕೆಲ ವೊಮ್ಮೆ ಛಂಗನೆ ಹಾರಿ ಬೆರಗು ಮೂಡಿಸುತ್ತಿದ್ದವು.  

ಆ ಹಕ್ಕಿಗಳಿಗೆ ಇರುವ ಚೆಂದದ ಹೆಸರು ಟರ್ಕಿ ಕೋಳಿ. ನೂರಾರು ಸಂಖ್ಯೆ ಯಲ್ಲಿದ್ದ ಈ ಕೋಳಿಗಳನ್ನು ನಿಯಂತ್ರಿ ಸುವ ಮತ್ತು ಸಾಕುವ ಹರಸಾಹಸದ ನಡುವೆಯೇ ಉತ್ತರಪ್ರದೇಶದ ನಿವಾಸಿಗಳು ಅವುಗಳನ್ನು ನಗರಕ್ಕೆ ತಂದಿದ್ದರು. ಗುಂಪುಗುಂಪಾಗಿ ಓಡುತ್ತಿದ್ದ ಕೋಳಿಗಳನ್ನು ಒಂದೇ ಬದಿಯಲ್ಲಿ ಹೋಗುವಂತೆ ಮಾಡಲು ಅವರು ಶ್ರಮಿಸುತ್ತಿದ್ದರು. ಛಂಗನೆ ಹಾರುತ್ತಿದ್ದ ಕೋಳಿಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದರು. `ಇವು ನಮ್ಮ ಮಕ್ಕಳು ಇದ್ದಂತೆ. ಎಷ್ಟೇ ತುಂಟಾಟ ಮಾಡಿದರೂ ನಮಗೆ ಇಷ್ಟ' ಎಂದು ಅದರ ಮಾಲೀಕರು ಹೇಳಿದರು.

`ಉತ್ತರ ಪ್ರದೇಶದಿಂದ ಟರ್ಕಿ ಕೋಳಿಗಳನ್ನು ತಂದು ಚಿಕ್ಕಬಳ್ಳಾಪುರ ಮತ್ತು ಇತರ ತಾಲ್ಲೂಕುಗಳಲ್ಲಿ ಮಾರಾಟ ಮಾಡುತ್ತೇವೆ. ಮಕ್ಕಳು ಬೇಡಿಕೆಯಿಟ್ಟಾಗ ಪೋಷಕರು ಈ ಕೋಳಿ ಗಳನ್ನು ಖರೀದಿಸುತ್ತಾರೆ. ಕೋಳಿಗಳ ಮಾರಾಟದಿಂದ ಬರುವ ಹಣದಿಂದಲೇ ಜೀವನ ನಡೆಸುತ್ತೇವೆ' ಎಂದು ಕೋಳಿ ಮಾರಾಟಗಾರ ಶಿವಾ `ಪ್ರಜಾವಾಣಿ'ಗೆ ತಿಳಿಸಿದರು.

`ಹಗಲು ಪೂರ್ತಿ ಊರುಗಳನ್ನು ಸುತ್ತುತ್ತೇವೆ. ರಾತ್ರಿ ವೇಳೆ ಡಾಬಾದಲ್ಲಿ ಊಟ ಮಾಡಿ, ರಸ್ತೆಬದಿ ಟೆಂಟ್ ಹಾಕಿಕೊಂಡು ನಿದ್ದೆ ಮಾಡುತ್ತೇವೆ. ಬೆಳಿಗ್ಗೆ ಎದ್ದು ಮತ್ತೆ ಯಥಾರೀತಿ ದಿನಚರಿ ಮುಂದುವರಿಯುತ್ತದೆ. ಒಂದು ಜೋಡಿ ಕೋಳಿಯನ್ನು ರೂ. 400ಕ್ಕೆ ಮಾರುತ್ತೇವೆ. ಹಿಂದಿ ಬಳಕೆಯಿಲ್ಲದ ಪ್ರದೇಶದಲ್ಲಿ ವಹಿವಾಟು ಕಷ್ಟ. ಆದರೂ ಅಲ್ಪಸ್ವಲ್ಪ ಕನ್ನಡ, ಇಂಗ್ಲಿಷ್ ಕಲಿತು ಕೋಳಿ ಮಾರಾಟ ಮಾಡುತ್ತೇವೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT