ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಕಲಾ ಶಿಕ್ಷಕರ ಕಾರ್ಯಾಗಾರ ಸಮಾರೋಪ

Last Updated 5 ಆಗಸ್ಟ್ 2013, 10:10 IST
ಅಕ್ಷರ ಗಾತ್ರ

ರಾಯಚೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ತಾಲ್ಲೂಕು ಚಿತ್ರಕಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಸಮಾರೋಪ ಕಾರ್ಯಕ್ರಮ ನಗರದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಈಚೆಗೆ ನಡೆಯಿತು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ  ಬೀದರ್ ಜಿಲ್ಲೆ ಹುಡುಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಎ.ಕೆ. ಜೋಶಿ ಪೇಪರ್ ಕ್ರಾಪ್ಟ್‌ನ ವಿವಿಧ ಆಕೃತಿಗಳ ರಚನಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಚಿತ್ರಕಲಾ ಶಿಕ್ಷಕ ರಾಮಣ್ಣ ಮ್ಯಾದಾರ್ ಹಾಗೂ ಬಸವರಾಜ ನವಲಿ `ತರಗತಿಯಲ್ಲಿ ಚಿತ್ರಕಲಾ ಬೋಧನೆ' ಎಂಬ ವಿಷಯ ಕುರಿತು ಹಾಗೂ ಗುಲ್ಬರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕಚೇರಿ ಚಿತ್ರಕಲಾ ಪರಿವೀಕ್ಷ ಟಿ.ದೇವೇಂದ್ರಪ್ಪ ಅವರು `ಮೌಲ್ಯಾಂಕನ ಹಾಗೂ ಪಾಠ ಬೋಧನೆ' ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಚಿತ್ರಕಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ವತಿಯಿಂದ ಚಿತ್ರಕಲಾ ಶಿಕ್ಷಕರಾದ ಆರ್.ಎಚ್ ಮ್ಯಾದಾರ್, ಬಸವರಾಜ ನವಲಿ, ರತ್ನಾ ಓಂಕಾರ. ವಿಜಯ ಕುರವತ್ತಿ ಅವರಿಗೆ ಕಲಾಶ್ರೀ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು.

ಗುಲ್ಬರ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕಚೇರಿ ಚಿತ್ರಕಲಾ ಪರಿವೀಕ್ಷ ಟಿ.ದೇವೇಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಇಲಕಲ್   ಹಳೇಬಸವೇಶ್ವರ ವಿದ್ಯಾವರ್ಧಕ ಸಂಸ್ಥೆ ಮುಖ್ಯಸ್ಥ  ಬಸವರಾಜ ಗವಿಮಠ     ಆಗಮಿಸಿದ್ದರು. ಚಿತ್ರಕಲಾ ಶಿಕ್ಷಕರ ಸಂಘದ  ತಾಲ್ಲೂಕು ಅಧ್ಯಕ್ಷ ಪಿ.ಎನ್ ಕುಮಾರ, ಪದಾಧಿಕಾರಿಗಳಾದ ಎಚ್. ಎಚ್. ಮ್ಯಾದಾರ್, ಕೃಷ್ಣಮೂರ್ತಿ, ದೇವೇಂದ್ರಪ್ಪ, ಕೆ. ಮಲ್ಲಿಕಾರ್ಜುನ, ಕೌಸರ್ ಜಬೀನ್, ವಾಸವಿ ಹಾಗೂ  ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT