ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮಹಿಳಾ ಉದ್ಯಮಿಗಳಿಗೆ ಭಾರತ ಅಚ್ಚುವೆುಚ್ಚಿನ ತಾಣ

Last Updated 24 ಜೂನ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಚೀನಾದ ಮಹಿಳಾ ಉದ್ಯಮಿಗಳಿಗೆ ಭಾರತ ಅತ್ಯಂತ ಪ್ರಶಸ್ತವಾದ ಹೂಡಿಕೆ ತಾಣ. ಹೌದು! ಆರ್ಥಿಕ ವೃದ್ಧಿ ದರ ಕುಸಿತ (ಜಿಡಿಪಿ), ರೂಪಾಯಿ ಅಪಮೌಲ್ಯ, ಹಣದುಬ್ಬರ ಒತ್ತಡ ಇತ್ಯಾದಿ ಹಲವು ಸಂಗತಿಗಳಿಂದ ದೇಶದ ಅರ್ಥವ್ಯವಸ್ಥೆ ಬಿಕ್ಕಟ್ಟಿಗೆ ಸಿಲುಕಿದರೂ, ಚೀನಾ ಉದ್ಯಮಿಗಳು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಭಾರತದ ತಯಾರಿಕೆ ವಲಯದಲ್ಲಿರುವ ವಿಪುಲ ಅವಕಾಶಗಳ ಕುರಿತು ಅವರು ಗಮನ ಹರಿಸುತ್ತಿದ್ದಾರೆ.

ಈಗಾಗಲೇ ಚೀನಾದ ಹಲವು ಮಹಿಳಾ ಉದ್ಯಮಿಗಳು ಭಾರತದಲ್ಲಿ ಗೃಹೋಪಕರಣ, ಚಿನ್ನಾಭರಣ ವಿನ್ಯಾಸ, ಎಲೆಕ್ಟ್ರಾನಿಕ್ಸ್ ಸರಕುಗಳು, ಸಾಫ್ಟ್‌ವೇರ್ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸಿದ್ದಾರೆ. `ಹೂಡಿಕೆಯ ದೃಷ್ಟಿಯಿಂದ ಭಾರತ ಅತ್ಯಂತ ಪ್ರಶಸ್ತ ತಾಣ. ಚೀನಾಕ್ಕೆ ಹೋಲಿಸಿದರೆ ಇಲ್ಲಿ ಮಾನವ ಸಂಪನ್ಮೂಲ ಮತ್ತು ತಯಾರಿಕಾ ವೆಚ್ಚ ತುಂಬಾ ಕಡಿಮೆ ಇದೆ. ಸ್ಥಳೀಯ  ಮಾರುಕಟ್ಟೆಯಲ್ಲಿ ತಯಾರಿಕಾ ಉತ್ಪನ್ನಗಳಿಗೆ ಗರಿಷ್ಠ ಬೇಡಿಕೆ ಇದೆ ಎನ್ನುತ್ತಾರೆ ಬೀಜಿಂಗ್ ಮೂಲದ `ರಿಕಾನ್~ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಝಾಂಗ್ ಹಾಂಗ್.

ಉತ್ತಮ ಕೌಶಲವಿರುವ ಮಾನವ ಸಂಪನ್ಮೂಲ, ಮಾಹಿತಿ ತಂತ್ರಜ್ಞಾನ, ಅತ್ಯುತ್ತಮ ನ್ಯಾಯಾಂಗ ಮತ್ತು ಬ್ಯಾಂಕಿಂಗ್ ವ್ಯವಸ್ಥೆ ಭಾರತದಲ್ಲಿ ಹೂಡಿಕೆಯ ಆಕರ್ಷಣೆ ಹೆಚ್ಚುವಂತೆ ಮಾಡಿದೆ ಎನ್ನುತ್ತಾರೆ ಸಾಫ್ಟ್‌ವೇರ್ ಸಂಸ್ಥೆ `ನ್ಯೂ ಟ್ರೆಂಡ್~ನ ಮುಖ್ಯಸ್ಥೆ ಲಿ ಯು ಝಿಂಗ್.

ಭಾರತ ಮತ್ತು ಚೀನಾ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ಅಭಿವೃದ್ಧಿ ದೃಷ್ಟಿಯಿಂದ ಹೂಡಿಕೆಗಳನ್ನು ಉತ್ತೇಜಿಸಬೇಕು ಎನ್ನುತ್ತಾರೆ ಅವರು.ಶಾಂಘೈ ಮೂಲದ `ಕೆಲಾ~ ಎನ್ನುವ ಚಿನ್ನಾಭರಣ ವಿನ್ಯಾಸ ಸಂಸ್ಥೆಯ ಜೆಸ್ಸಿಕಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
 
ಅಂತರ್ಜಾಲ ಮತ್ತು ಸಾಮಾಜಿಕ ಸಂವಹನ ತಾಣಗಳ ಮೂಲಕ  ಭಾರತೀಯ ಹೊಸ ತಲೆಮಾರಿನ ಗ್ರಾಹಕರನ್ನು ತಲುಪಲು ಯೋಜನೆ ರೂಪಿಸಿದ್ದೇವೆ ಎನ್ನುವ ವಿವರಣೆ ಅವರದು.ಭಾರತ ಮುಂದಿನ 4-5 ವರ್ಷಗಳಲ್ಲಿ ಚೀನಾದಿಂದ ಮೂಲಸೌಕರ್ಯ ವಲಯದಲ್ಲಿ ಹೆಚ್ಚಿನ ಹೂಡಿಕೆ ನಿರೀಕ್ಷಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT