ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಅಗ್ನಿ ಅನಾಹುತ: 16 ಮಂದಿ ಸಾವು

Last Updated 11 ಡಿಸೆಂಬರ್ 2013, 9:24 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ): ದಕ್ಷಿಣ ಚೀನಾದ ಶೇಂಝೆನ್ ನಗರದ ಹೋಲ್‌ಸೇಲ್‌ ಮಾರುಕಟ್ಟೆಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ 16 ಮಂದಿ ಸಾವನ್ನಪ್ಪಿ, 5 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ಮಂಗಳವಾರ  ವರದಿ ಮಾಡಿದೆ.

ಹಾಂಕಾಂಗ್ ಗಡಿಯಲ್ಲಿರುವ ಶೇಂಝೆನ್‌ ಪ್ರಾಂತ್ಯದ ಹೊಸ ಜಿಲ್ಲೆ ಗೊಂಗ್ಮಿಂಗ್‌ನಲ್ಲಿರುವ ರೊಂಗಜಿಯಾನ್ ಕೃಷಿ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಮಧ್ಯರಾತ್ರಿ 1 ಗಂಟೆಗೆ (ಸ್ಥಳೀಯ ಕಾಲಮಾನ) ಈ ಅವಘಡ ನಡೆದಿದೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

145 ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ 29 ಅಗ್ನಿಶಾಮಕ ವಾಹನಗಳು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿವೆ. ಒಂದು ಸಾವಿರ ಚದರ ಮೀಟರ್‌ಗಳಷ್ಟು ಪ್ರದೇಶ ಹಾನಿಗೀಡಾಗಿದೆ ಎನ್ನಲಾಗಿದೆ.

ಘಟನೆಗೆ ಕಾರಣ ತಿಳಿದು ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT