ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಹಿಷ್ಕಾರ: ಗ್ರಾಮಸ್ಥರ ಬೆದರಿಕೆ

ಹದಗೆಟ್ಟ ತಚ್ಚಮೆ ರಸ್ತೆ
Last Updated 6 ಏಪ್ರಿಲ್ 2013, 7:01 IST
ಅಕ್ಷರ ಗಾತ್ರ

ವಿಟ್ಲ: ಪೆರುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಚ್ಚಮೆ ರಸ್ತೆಯನ್ನು ಇದುವರೆಗೂ ಡಾಂಬರೀಕರಣ ಮಾಡದ ಕಾರಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರುವ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸುವ  ಸಿದ್ಧತೆಯಲ್ಲಿದ್ದಾರೆ.

ಪೆರುವಾಯಿ ಕೊಲ್ಲತ್ತಡ್ಕ ತಚ್ಚಮೆಯಾಗಿ ಸುಣ್ಣಂಬಳ ಸಾಗುವ ರಸ್ತೆ ನಾಲ್ಕು ದಶಕ ಹಳೆಯ ರಸ್ತೆಯಾಗಿದೆ. ಕೆಲವು ವರ್ಷಗಳಿಂದ ಬೇಸಿಗೆ ವೇಳೆ ದೂಳಿನಿಂದ ಕೂಡಿದ್ದು, ಮಳೆಗಾಲದಲ್ಲಿ ನಡೆದಾಡಲೂ ಸಾಧ್ಯವಾಗದಷ್ಟು   ಕೆಸರು ತುಂಬಿರುತ್ತದೆ. ಎರಡು ವರ್ಷಗಳ ಹಿಂದೆ ಅರ್ಧ ಕಿಲೋಮೀಟರ್ ದೂರ ಡಾಂಬರೀಕರಣ ಮಾಡಲಾಯಿತು. ನಂತರದ 2 ಕಿಲೋಮೀಟರ್ ದೂರ ಕಚ್ಚಾ ರಸ್ತೆಯೇ ಇದೆ. ಕಳೆದ ವರ್ಷ, ಜಿ.ಪಂ.ಅನುದಾನದಿಂದ ಡಾಂಬರೀಕರಣವಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆಡಾಂಬರೀಕರಣ ಮಾಡದೇ ಅನ್ಯಾಯ ಎಸಗಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಸ್ತೆಯು ತಚ್ಚಮೆ ಭಗವತಿ ದೇವಾಲಯವನ್ನು ಸಂಪರ್ಕಿಸುತ್ತಿದ್ದು, ಸುಮಾರು 30ರಿಂದ 35ಕುಟುಂಬಗಳಿಗೆ ನೆರವಾಗಲಿದೆ. ಇದರ ಬಳಿಕ ನಿರ್ಮಾಣವಾದ ರಸ್ತೆಗಳು ಡಾಂಬರೀಕರಣಗೊಂಡಿದೆ. ಆದರೆ ಇದನ್ನು ನೋಡಿಯೂ ನೋಡದಂತೆ ಜನಪ್ರತಿನಿಧಿಗಳು ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ಟೀಕಿಸಿದಾರೆ.ಕೇವಲ ಭರವಸೆ ನೀಡುತ್ತಾ ಬರುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆಯನ್ನು ಸಾಮೂಹಿಕವಾಗಿ ಬಹಿಷ್ಕಾರ ಮಾಡುವುದಾಗಿ ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT