ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಸಂಕ್ಷಿಪ್ತ ಸುದ್ದಿಗಳು

Last Updated 12 ಮೇ 2014, 19:30 IST
ಅಕ್ಷರ ಗಾತ್ರ

ಮುಜಫ್ಫರ್‌ನಗರ: ಇಂದು ಮರು ಮತದಾನ
ಮುಜಫ್ಫರ್‌ನಗರ (ಪಿಟಿಐ):
ಮುಜಫ್ಫರ್‌ನಗರ ಜಿಲ್ಲೆಯ ಮೂರು ಮತಗಟ್ಟೆಗಳಲ್ಲಿ ಮಂಗಳವಾರ (ಮೇ 13) ಮರು ಮತದಾನ ನಡೆಯಲಿದೆ.

ಬೆಹ್ಲೋಲ್‌ಪುರ, ರಸೂಲ್‌ಪುರ ಜತ್ತನ್‌ ಮತ್ತು ನೂನಖೆ­ರಾ­ಗಳಲ್ಲಿ ಮೇ 12ರಂದು ಮರುಮತದಾನ ನಡೆಸಲು ಈ ಮೊದಲು ಸೂಚಿಸಿದ್ದ ಚುನಾವಣಾ ಆಯೋಗ, ಈಗ ಅದನ್ನು ಮೇ 13ರಂದು ನಡೆಸುವಂತೆ ನಿರ್ದೇಶನ ನೀಡಿದೆ ಎಂದು ಮುಜಫ್ಫರ್‌­ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಇಂದರ್‌­ಮಣಿ ತ್ರಿಪಾಠಿ ಅವರು ತಿಳಿಸಿದ್ದಾರೆ.

ಈ ಮತಗಟ್ಟೆಗಳಲ್ಲಿ ಏ.10ರಂದು ನಡೆದ ಮತದಾನದಲ್ಲಿ ಅಕ್ರಮ ನಡೆದಿದೆ. ಮತದಾರರಲ್ಲದವರಿಗೂ ಮತಚಲಾಯಿ­ಸಲು ಅವಕಾಶ ನೀಡಲಾಗಿತ್ತು. ಈ ಮೂರು ಮತಗಟ್ಟೆಗಳಲ್ಲಿ ಶೇ 75ಕ್ಕೂ ಹೆಚ್ಚು ಮತದಾನ ನಡೆದಿತ್ತು ಎಂದು ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ಖಾದಿರ್‌ ರಾಣಾ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಪಂಕಜ್‌ ಅಗರ್‌ವಾಲ್‌ ಅವರು ಚುನಾ­ವಣಾ ಆಯೋಗಕ್ಕೆ ದೂರು ನೀಡಿದ್ದರು.

‘ಮಾಧ್ಯಮಗಳನ್ನೇ ಖರೀದಿಸಿದ ಪಕ್ಷಗಳು’
ಕೋಲ್ಕತ್ತ (ಪಿಟಿಐ):
ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಈಡೇ­ರಿ­ಸಿಕೊಳ್ಳಲು ಶ್ರೀಮಂತ ರಾಜಕೀಯ ಪಕ್ಷಗಳು ಕೆಲವು ಮಾಧ್ಯ­ಮ­ಗಳನ್ನು ನಿಯಂತ್ರಣಕ್ಕೆ ಪಡೆದಿವೆ ಎಂದು ತೃಣ­ಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಆಪಾದಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವ­ಣೆ­ಯಲ್ಲಿ ಮಾಧ್ಯಮ­ಗಳು ಪ್ರಮುಖ ಪಾತ್ರ­ವಹಿಸಿ­ದ್ದವು. ಆದರೆ ಕೆಲವು ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳು ಏಕ­ಮುಖ ಮತ್ತು ಪಕ್ಷ­ಪಾತಿ ಧೋರಣೆ ಅನುಸರಿಸಿದ್ದು ತಮಗೆ ಆಘಾತ ತಂದಿದೆ ಎಂದು ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ.

₨ 313 ಕೋಟಿ ಹಣ ಜಪ್ತಿ
ನವದೆಹಲಿ (ಪಿಟಿಐ):
ಸಾರ್ವತ್ರಿಕ ಚುನಾವಣೆ ಘೋಷಣೆ­ಯಾ­ದಾ­ಗಿನಿಂದ ಎರಡು ತಿಂಗಳ ಅವಧಿಯಲ್ಲಿ  ಸುಮಾರು ₨313 ಕೋಟಿ ಅಕ್ರಮ ಹಣವನ್ನು ದೇಶದ ವಿವಿಧ ಭಾಗ­ದಲ್ಲಿ ಚುನಾವಣಾ ಆಯೋಗ ಜಪ್ತಿ ಮಾಡಿದೆ.

ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಅಕ್ರಮ ಹಣ ಮತ್ತು ಮದ್ಯ ಪತ್ತೆಯಾಗಿದೆ. ಚುನಾವಣಾ ಆಯೋಗ ನೇಮಕ ಮಾಡಿರುವ ಕಣ್ಗಾವಲು ಮತ್ತು ಸಂಚಾರಿ ದಳಗಳು ಇಷ್ಟೊಂದು ಹಣ ಮತ್ತು ಮದ್ಯವನ್ನು ವಶಪಡಿಸಿಕೊಂಡಿವೆ.

ಆಂಧ್ರದಲ್ಲಿ ₨153 ಕೋಟಿ ವಶಕ್ಕೆ ಪಡೆದಿದ್ದರೆ ಕರ್ನಾ­ಟಕದಲ್ಲಿ ₨28 ಕೋಟಿ, ಮಹಾರಾಷ್ಟ್ರದಲ್ಲಿ ₨ 25.67 ಕೋಟಿ ಮತ್ತು ತಮಿಳುನಾಡಿನಲ್ಲಿ ₨25.05 ಕೋಟಿ ವಶಕ್ಕೆ ಪಡೆಯಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಸೂಚನೆ
ಮುಂಬೈ (ಪಿಟಿಐ):
ಮತದಾರರ ಪಟ್ಟಿಯನ್ನು ಪರಿಷ್ಕರಿ­ಸ­ಬೇ­ಕೆಂದು  ಬಾಂಬೆ ಹೈಕೋರ್ಟ್‌ ಸೋಮವಾರ ಮಹಾ­ರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಆದರೆ, ಲೋಕಸಭಾ ಚುನಾ­ವಣೆ ಫಲಿತಾಂಶಕ್ಕೆ ತಡೆ ನೀಡಲು ನಿರಾಕರಿಸಿದೆ.

ಮುಂಬೈ ಮತ್ತು ಪುಣೆಯಲ್ಲಿ ಮತದಾರರ ಪಟ್ಟಿಯಿಂದ ಸುಮಾರು 5 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ತೆಗೆದು ಹಾಕಿ­ರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾ­ಸಕ್ತಿ ಅರ್ಜಿಯ (ಪಿಐಎಲ್‌) ವಿಚಾರಣೆ ನಡೆಸಿದ ನ್ಯಾಯ­ಮೂರ್ತಿಗಳಾದ ಅಭಯ್‌ ಒಕಾ ಮತ್ತು ಎಂ.ಎಸ್‌. ಸೋನಕ್‌ ಮೇಲಿನಂತೆ ಆದೇಶ ನೀಡಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವ­ಜನಿ­ಕರ ಸಲಹೆ ಮತ್ತು ಆಕ್ಷೇಪಣೆಗೆ ಮೂರು ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಇದೆ ವೇಳೆ ಸರ್ಕಾರಕ್ಕೆ ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT