ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂದೂರ, ಐಚಂಡ ತಂಡಗಳಿಗೆ ಜಯ

Last Updated 25 ಏಪ್ರಿಲ್ 2013, 6:05 IST
ಅಕ್ಷರ ಗಾತ್ರ

ವಿರಾಜಪೇಟೆ: ಚೆಂದೂರ ಮತ್ತು ಐಚಂಡ ತಂಡಗಳು ಬಾಳುಗೋಡಿನಲ್ಲಿ ನಡೆಯುತ್ತಿರುವ ಮಾದಂಡ ಕಪ್ -2013 ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಬುಧವಾರ ಜಯಭೇರಿ ಬಾರಿಸಿದವು.

ಬೆಳಿಗ್ಗೆ ನಡೆದ ಪಂದ್ಯದಲ್ಲಿ ಚೆಂದೂರ ತಂಡವು 3-0 ಗೋಲುಗಳಿಂದ ಪುಚ್ಚಿಮಂಡ ವಿರುದ್ಧ ಗೆಲುವು ಸಾಧಿಸಿತು. ಚೆಂದೂರ   ತಂಡದ ಪರವಾಗಿ ರಾಜ(4ನೇ ನಿ.) ಬಿಪಿನ್(7ನೇ ನಿ.), ಸುರೇಶ್(40ನೇ ನಿ) ಗೋಲು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಐಚಂಡ ತಂಡವು 5-1 ರಿಂದ ಮರ್ಚಂಡ ವಿರುದ್ಧ ಜಯಿಸಿತು.  ಐಚಂಡ ಪರವಾಗಿ ಪಳಂಗಪ್ಪ (11 ಮತ್ತು 40ನೇ ನಿ.), ತಿಮ್ಮಯ್ಯ(13ನೇ ನಿ.), ನಾಣಯ್ಯ(36ನೇ ನಿ.),ದೇವಯ್ಯ(43ನೇ ನಿ) ಗೋಲುಗಳನ್ನು ಬಾರಿಸಿದರು. ಮರ್ಚಂಡ ತಂಡದ ಪರವಾಗಿ ಸಚಿನ್(38ನೇ ನಿ) ಒಂದು ಗೋಲು ಹೊಡೆದರು.

ಇನ್ನುಳಿದ ಪಂದ್ಯಗಳಲ್ಲಿ;  ಪೊನ್ನೊಳ್‌ತಂಡವು 2-1ರಿಂದ ಬಾಳೆಯಡ ತಂಡದ ವಿರುದ್ಧ ಜಯ ಸಾಧಿಸಿತು. ಪೊನ್ನೊಳ್ ತಂಡದ ಪರವಾಗಿ ಕಾವೇರಪ್ಪ(16 ಮತ್ತು 40ನೇ ನಿ), ಬಾಳೆಯಡ ತಂಡದ ಪರವಾಗಿ ಕವನ್(3ನೇ ನಿ) ಗೋಲು ಹೊಡೆದರು.

ಚೋಯಮಾಡಂಡ ತಂಡವು 4-0ಯಿಂದ ಅಪ್ಪಚ್ಚಿರ  ವಿರುದ್ಧ ಗೆಲುವು ಸಾಧಿಸಿತು. ಚೋಯಮಾಡಂಡ ತಂಡದ ಪರವಾಗಿ ಚಂಗಪ್ಪ(14ನೇ ನಿ), ಸುಬ್ರಮಣಿ(24ನೇ ನಿ), ಚಿಣ್ಣಪ್ಪ(38 ಮತ್ತು 42ನೇ ನಿ), ಗೋಲು ಹೊಡೆದರು.

ತಂಬುಕುಟ್ಟೀರ ತಂಡವು, ಮುಕ್ಕಾಟಿರ ತಂಡದ ವಿರುದ್ದ 2-0 ಗೋಲುಗಳ ಅಂತರದಿಂದ ಜಯ ಸಾಧಿಸಿತು. ತಂಬುಕುಟ್ಟೀರದ ಉದಯ್ ಉತ್ತಯ್ಯ(17ನೇ ನಿ), ದೀಪು ಚಂಗಪ್ಪ(34ನೇ ನಿ.) ತಲಾ ಒಂದು ಗೋಲು ದಾಖಲಿಸಿದರು.  ಚೇಂದಂಡ ತಂಡವು, ಚಿಂಡಮಾಡ ತಂಡದ ವಿರುದ್ದ 3-0 ಗೋಲುಗಳಿಂದ ಗೆದ್ದಿತು. ಚೇಂದಂಡ ತಂಡದ ಪರವಾಗಿ ಮೋಕ್ಷಿತ್(5ನೇ ನಿ), ಸುಬ್ಬಯ್ಯ(35ನೇ ನಿ) ಹಾಗೂ ಚಿರಾಗ್(39ನೇ ನಿ) ಗೋಲು ಗಳಿಸಿದರು.

ಇದೇ ಅವಧಿಯಲ್ಲಿ ನಡೆದ ಪಂದ್ಯಾಟದಲ್ಲಿ ಕಾಂಡಂಡ ತಂಡವು, ಕಾಂಡೇರ ತಂಡದ ವಿರುದ್ಧ 4-1 ಗೋಲುಗಳಿಂದ ಜಯಿಸಿತು. ಕಾಂಡಂಡ ತಂಡದ ಪರವಾಗಿ ಬೋಪಯ್ಯ(15ನೇ ನಿ),ಚಂಗಪ್ಪ 2(18 ಮತ್ತು 47ನೇ ನಿ),ಮಾದಯ್ಯ(49ನೇ ನಿ), ಹಾಗೂ ಕಾಂಡೇರ ತಂಡದ ಪರವಾಗಿ ತಿಮ್ಮಯ್ಯ(40ನೇ ನಿ) ಗೋಲು ಗಳಿಸಿದರು.

ಮೂಡೇರ ತಂಡವು, ಗಂಡಂಗಡ ತಂಡದ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಮೂಡೇರ ತಂಡದ ಪರವಾಗಿ ಮಂಜು(16 ಮತ್ತು 20ನೇ ನಿ), ಹರೀಶ್(22ನೇ ನಿ), ಡಾನ್(35ನೇ ನಿ) ಗೋಲು ಬಾರಿಸಿದರು.

ಚೌರೀರ ತಂಡವು 1-0ಯಿಂದ ನಂಬುಡುಮಾಡ ವಿರುದ್ಧ ಜಯ ಸಾಧಿಸಿತು. ಚೌರೀರ ಪರವಾಗಿ ಧನು ನಾಣಯ್ಯ (36ನೇ ನಿ) ಗೆಲುವಿನ ಗೋಲು ಬಾರಿಸಿದರು.

ಅಜ್ಜೆಟ್ಟಿರ ತಂಡವು 3-0ಯಿಂದ ನಂಬುಡ್‌ಮಂಡ ತಂಡದ ವಿರುದ್ಧ ಗೆದ್ದಿತು. ಅಜ್ಜೆಟ್ಟಿರ ಪರವಾಗಿ ವಿಕ್ರಮ್ ಉತ್ತಪ್ಪ(14ನೇ ನಿ), ನವೀನ್ ನಾಚಪ್ಪ(32ನೇ ನಿ), ಮೋಹನ್ ಸೋಮಣ್ಣ(40ನೇ ನಿ) ವಿಜಯದ ಗೋಲು ಹೊಡೆದರು.

ಕೇಳೇಟಿರ ತಂಡವು 4-1ರಿಂದ ಬಲ್ಲಚಂಡ ವಿರುದ್ಧ ಗೆದ್ದಿತು. ಕೇಳೇಟಿರ ತಂಡದ ಪರವಾಗಿ ಪುನೀತ್ ಹ್ಯಾಟ್ರಿಕ್ ಗೋಲುಗಳನ್ನು(16,20,24ನೇ ನಿ) ಬಾರಿಸಿದರು. ಕಾರ್ಯಪ್ಪ(47ನೇ ನಿ) ಒಂದು ಗೋಲು, ಹಾಗೂ ಬಲ್ಲಚಂಡ ತಂಡದ ಪರವಾಗಿ ಪೂಣಚ್ಚ(11ನೇ ನಿ) ಒಂದು ಗೋಲನ್ನು ಬಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT