ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ ಓಪನ್: ಸೋಮದೇವ್‌ಗೆ ವೈಲ್ಡ್‌ ಕಾರ್ಡ್‌

Last Updated 18 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಭಾರತದ ಅಗ್ರ ಕ್ರಮಾಂಕದ ಸಿಂಗಲ್ಸ್‌ ಆಟಗಾರ ಸೋಮದೇವ್‌ ದೇವವರ್ಮನ್ ಅವರು ಡಿಸೆಂಬರ್‌ 30ರಿಂದ ಜನವರಿ 5ರವರೆಗೆ ಇಲ್ಲಿ ನಡೆಯಲಿರುವ ಚೆನ್ನೈ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ 90ನೇ ಸ್ಥಾನದಲ್ಲಿರುವ ಸೋಮದೇವ್‌ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅರ್ಹತಾ ಸುತ್ತಿನಲ್ಲಿ ಆಡಬೇಕಿತ್ತು. ಆದರೆ ಬೆನ್ನು ನೋವಿನ ಸಮಸ್ಯೆಯಿಂದಾಗಿ ಎಸ್ತೋನಿಯಾದ ಜರ್ಗನ್‌ ಜಾಪ್‌ ಅವರು ಹಿಂದೆ ಸರಿದ ಕಾರಣ ಸೋಮ್‌ಗೆ ಪ್ರಧಾನ ಹಂತದಲ್ಲಿ ಆಡಲು ನೇರ ಪ್ರವೇಶ ಲಭಿಸಿದೆ.

ಈ ಟೂರ್ನಿಯಲ್ಲಿ ವಿಶ್ವದ ಎಂಟನೇ ರ್‍ಯಾಂಕ್‌ನ ಆಟಗಾರ ಸ್ವಿಟ್ಜರ್ಲೆಂಡ್‌ನ ಸ್ಟಾನಿಸ್‌ಲಾಸ್‌ ವಾರ್ವಿಂಕಾ, ವಿಶ್ವದ 15ನೇ ರ್‍ಯಾಂಕ್‌ನ ಆಟಗಾರ ಮಿಖಾಯಿಲ್‌ ಯೋಜ್ನಿ, ಫ್ಯಾಬಿಯೊ ಫಾಗ್ನಿನಿ ಹಾಗೂ ಹಾಲಿ ಚಾಂಪಿಯನ್‌ ಜಾಂಕೊ ತಪ್ಸಾರೆವಿಕ್‌ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT