ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನವರಿಯಲ್ಲಿ ನೇರ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ

Last Updated 20 ಡಿಸೆಂಬರ್ 2012, 10:03 IST
ಅಕ್ಷರ ಗಾತ್ರ

ಚಿತ್ರದುರ್ಗ: ತುಮಕೂರಿನಿಂದ ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ ನೇರ ರೈಲು ಮಾರ್ಗ ಕಲ್ಪಿಸುವ ಕಾಮಗಾರಿಗೆ 2013ರ ಜನವರಿ ಮೂರನೇ ವಾರದಲ್ಲಿ ಶಂಕುಸ್ಥಾಪನೆ ನೆರವೇರಿಸಲು ರಾಜ್ಯ ರೈಲ್ವೆ ಖಾತೆ ಸಚಿವ ಕೆ.ಜೆ. ಸೂರ್ಯಪ್ರಕಾಶ್‌ರೆಡ್ಡಿ ಅವರು ಒಪ್ಪಿದ್ದಾರೆ ಎಂದು ಸಂಸತ್ ಸದಸ್ಯರಾದ ಜನಾರ್ದನಸ್ವಾಮಿ ತಿಳಿಸಿದ್ದಾರೆ.

ಬುಧವಾರ ನವದೆಹಲಿಯಲ್ಲಿ ತುಮಕೂರು ಸಂಸತ್ ಸದಸ್ಯರಾದ ಬಸವರಾಜು ಅವರೊಂದಿಗೆ ಸಚಿವರನ್ನು ಭೇಟಿ ಮಾಡಿ ಕಾಮಗಾರಿ ಆರಂಭಿಸಲು ಶಂಕುಸ್ಥಾಪನೆ ನೆರವೇರಿಸಲು ಮನವಿ ಮಾಡಲಾಗಿದೆ. ಸಚಿವರು ಸಹ ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತುಮಕೂರು, ಚಿತ್ರದುರ್ಗ ದಾವಣಗೆರೆ ನೇರ ರೈಲು ಮಾರ್ಗ ನಿರ್ಮಾಣಕ್ಕೆ  ಈಗಾಗಲೇ  ಹಲವಾರು  ಹಂತಗಳನ್ನು  ತಲುಪಿದೆ. ಸರ್ಕಾರ  ಯೋಜನೆಯನ್ನು  ಆಯವ್ಯಯದಲ್ಲಿ  ಸೇರಿಸಿ ಯೋಜನಾ  ಆಯೋಗದ  ಅನುಮೋದನೆ  ಪಡೆದು ಸಚಿವ ಸಂಪುಟದ ಅನುಮೋದನೆ ಪಡೆದು ಸಮೀಕ್ಷೆ  ಕಾರ್ಯಕ್ಕೆ ರೂ ಕೋಟಿ ಹಣ ಬಿಡುಗಡೆಯಾಗಿ ಈಗಾಗಲೇ ಅಂತಿಮ `ಲೊಕೇಷನ್' ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಗತ್ಯವಿರುವ ಸ್ಥಳಗಳಲ್ಲಿ ಭೂ ಸ್ವಾಧೀನ ಮಾಡಿ ಕೊಂಡು ಯೋಜನೆ ಕೆಲಸ ಆರಂಭಿಸಬೇಕು. ಈ ಕಾಮಗಾರಿಗಾಗಿ ಶಂಕು ಸ್ಥಾಪನೆಯನ್ನು ಜನವರಿಯಲ್ಲಿ ನೆರವೇರಿಸಲು ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT