ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜರ್ಮನ್ ಮಹತ್ವದ ನಿರ್ಧಾರ; ಅಣುಶಕ್ತಿ ಸ್ಥಾವರ ಸ್ಥಗಿತ

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಬರ್ಲಿನ್ (ಪಿಟಿಐ): ಮುಂಬರುವ 11 ವರ್ಷಗಳಲ್ಲಿ ಪರಮಾಣು ಶಕ್ತಿಯ ಬಳಕೆಯಿಂದ ಸಂಪೂರ್ಣವಾಗಿ ಮುಕ್ತವಾಗುವ ಮಹತ್ವದ ನಿರ್ಧಾರವನ್ನು ಜರ್ಮನಿ ಕೈಗೊಂಡಿದೆ.

ಮೂರು ತಿಂಗಳ ಹಿಂದೆ ಸಂಭವಿಸಿದ ಭೂಕಂಪ ಮತ್ತು ಸುನಾಮಿ ಅಪ್ಪಳಿಸಿದ ನಂತರ ಜಪಾನ್ ಎದುರಿಸುತ್ತಿರುವ ವಿಕಿರಣ ಸೋರಿಕೆ ಸಮಸ್ಯೆ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಅಣಶಕ್ತಿ ಸ್ಥಾವರ ಸುರಕ್ಷತೆಯ ಕುರಿತು ಎದ್ದಿರುವ ಸಂಶಯಗಳೂ ಜರ್ಮನಿಯ ಈ ಮಹತ್ವದ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

2022ರ ವೇಳೆಗೆ ದೇಶದ ಎಲ್ಲ 17 ಅಣುಶಕ್ತಿ ಸ್ಥಾರಗಳನ್ನು ಸ್ಥಗಿತಗೊಳಿಸಲು ಸರ್ಕಾರದ ನಿರ್ಧರಿಸಿದೆ. ಇದಕ್ಕೆ ಸಂಸತ್ ಬಹುಮತದ ಬೆಂಬಲ ಸೂಚಿಸಿದೆ ಎಂದು ಚಾನ್ಸೆಲರ್ ಆ್ಯಂಜೆಲಾ ಮರ್ಕೆಲ್ ಅವರು ತಿಳಿಸಿದ್ದಾರೆ. 

 ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಎಂತಹ ಅತ್ಯಾಧುನಿಕ ತಂತ್ರಜ್ಞಾನವೂ ವಿಕಿರಣ ಸೋರಿಕೆಯಂತಹ ಭಾರಿ ಅನಾಹುತವನ್ನು ತಡೆಯಲಾಗದು. ಜಪಾನ್ ಕೈ ಚೆಲ್ಲಿರುವುದೇ ಇದಕ್ಕೆ ತಾಜಾ ನಿದರ್ಶನ ಎಂದಿದ್ದಾರೆ.

ಅಣುಶಕ್ತಿ ಸ್ಥಾವರಗಳ ಸುರಕ್ಷತಾ ಕ್ರಮಗಳ ಕುರಿತು ಅಧ್ಯಯನ ನಡೆಸಲು ಸರ್ಕಾರ ಸಮಿತಿಯೊಂದನ್ನು ನೇಮಕ ಮಾಡಿತ್ತು.

ಸಮಿತಿಯ ಶಿಫಾರಸಿನ ಅನ್ವಯ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರಸ್ತುತ ಶೇ 20 ರಷ್ಟು ಅಣು ವಿದ್ಯುತ್ ಬಳಕೆಯಲ್ಲಿದ್ದು ಇದಕ್ಕೆ ಪರ್ಯಾಯವಾಗಿ ಕಲ್ಲಿದ್ದಲು ಬಳಸಿ ಶಾಖೋತ್ಪನ್ನ ವಿದ್ಯುತ್ ಉತ್ಪಾದಿಸಲಾಗುವುದು. ಹೀಗಾಗಿ ಅಣುಶಕ್ತಿ ಸ್ಥಾವರಗಳ ಕಾರ್ಯ ಸ್ಥಗಿತಗೊಂಡರೆ ಯಾವುದೇ ವಿದ್ಯುತ್ ಸಮಸ್ಯೆ ತಲೆದೂರದು ಎಂದು ಮರ್ಕೆಲ್ ಭರವಸೆ ನೀಡಿದ್ದಾರೆ.

ಚಳಗಾಲದಲ್ಲಿ ವಿದ್ಯುತ್ ಸಮಸ್ಯೆ ತಲೆದೂರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಒಂದು ಅಣುಶಕ್ತಿ ಸ್ಥಾವರವನ್ನು ಪುನಃ ಆರಂಭಿಸಲಾಗಿದೆ.

ಜಪಾನ್ ದುರಂತದ ನಂತರ ಸ್ಥಗಿತಗೊಳಿಸಲಾಗಿದ್ದ ದೇಶದ ಎಂಟು ಹಳೆಯ ಅಣುಶಕ್ತಿ ಸ್ಥಾವರಗಳನ್ನು ಸ್ಥಗಿತಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT