ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮಂಡಳಿ ದರ ಪಟ್ಟಿ ಪುಸ್ತಕ ಬಿಡುಗಡೆ

Last Updated 7 ಏಪ್ರಿಲ್ 2013, 20:19 IST
ಅಕ್ಷರ ಗಾತ್ರ

ಬೆಂಗಳೂರು: `ಜಲಮಂಡಳಿ ಪ್ರತಿಭಾವಂತ ಮತ್ತು ತಾಂತ್ರಿಕವಾಗಿ ಹೆಚ್ಚಿನ ನಿಖರತೆ ಇರುವ ಅಧಿಕಾರಿಗಳನ್ನು ಹೊಂದಿದ್ದು, ಇತರ ನಗರಗಳ ಮಂಡಳಿಗಳಿಗಿಂತ ಹೆಚ್ಚಿನ ಮನ್ನಣೆ ದೊರೆಯುವಂತೆ ಮಾಡಿದ್ದಾರೆ' ಎಂದು ಮಂಡಳಿಯ ಅಧ್ಯಕ್ಷ ಗೌರವ್ ಗುಪ್ತ ಪ್ರಶಂಸೆ ವ್ಯಕ್ತಪಡಿಸಿದರು.

ಜಲಮಂಡಳಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಮಂಡಳಿಯ 2013-14ನೇ ಸಾಲಿನ ದರಪಟ್ಟಿ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಆರ್ಥಿಕ ವರ್ಷದ ಆರಂಭಕ್ಕೆ ಮೊದಲೇ  ಪುಸ್ತಕ ಹೊರತಂದಿರುವುದು ಉತ್ತಮ ಬೆಳವಣಿಗೆ. ಇದು ಮಂಡಳಿಯ ನಿರ್ವಹಣಾ ವೆಚ್ಚವನ್ನು  ನಿಯಂತ್ರಣ ಹಾಗೂ ಗುತ್ತಿಗೆದಾರರ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ' ಎಂದರು.

ಜಲಮಂಡಳಿ ಹೆಚ್ಚುವರಿ ಮುಖ್ಯ ಎಂಜಿನಿಯರ್ ಬಾಬು ಕುಮಾರ್, `ಈ ವರ್ಷ ಪುಸ್ತಕದಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಮ್ಯಾನ್‌ಹೋಲ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ನಿರ್ಮಾಣ, ಉನ್ನತ ದರ್ಜೆಯ ಪಾಲಿಥೀನ್ ಮ್ಯಾನ್‌ಹೋಲ್, ಭೂಮಿ ಕಾಮಗಾರಿ, ರಸ್ತೆಗಳ ಪುನರ್ ನಿರ್ಮಾಣ ದರಗಳನ್ನೂ ಸೇರಿಸಲಾಗಿದೆ. ಮನೆಗಳ ನೀರಿನ ಸಂಪರ್ಕಕ್ಕೆ ಸಂಬಂಧಿಸಿದಂತೆ ಕೊಳವೆ ಮಾರ್ಗಗಳಿಗೆ ಮಾಡುವ ರಂದ್ರಕ್ಕೆ ಅಳವಡಿಸುವ ಕ್ಲಾಂಪ್‌ಗಳನ್ನೂ ಸೇರಿಸಲಾಗಿದೆ. ನಿರ್ಮಾಣ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆ, ನಗರಾಭಿವೃದ್ಧಿ ಇಲಾಖೆಗಳ ದರಗಳನ್ನು ಅಳವಡಿಸಿಕೊಳ್ಳಲಾಗಿದೆ' ಎಂದರು

ಮಂಡಳಿಯ ಪ್ರಧಾನ ಎಂಜಿನಿಯರ್ ಟಿ. ವೆಂಕಟರಾಜು ಮಾತನಾಡಿ, ಈ ದರಪಟ್ಟಿ ಪುಸ್ತಕವು ಮಂಡಳಿಯ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT