ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ್ಲಿ ಕ್ರಷರ್ ಬಂದ್ : ಗುಳೆ ಹೊರಟ ಕಾರ್ಮಿಕರು

Last Updated 14 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಕೆರೂರು ಸಮೀಪದ ನರೇನೂರ ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೆ ಇಪ್ಪತ್ತಕ್ಕೂ ಹೆಚ್ಚು ಜಲ್ಲಿ (ಖಡಿ) ಕ್ರಷರ್ ಆರಂಭವಾಗಿದ್ದವು. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಟ್ಟುನಿಟ್ಟಿನ ನಿಯಮ ಪಾಲನೆಯ ಆದೇಶದಿಂದ ವಾರದ ಒಳಗಾಗಿ ಬಹುತೇಕ ಎಲ್ಲ ಘಟಕಗಳು ಕೆಲಸ ನಿಲ್ಲಿಸಿವೆ. ಜಲ್ಲಿ ಉತ್ಪಾದನೆ ಸ್ಥಗಿತಗೊಂಡು ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಕೆಲಸವಿಲ್ಲದೆ ಕಾರ್ಮಿಕರಿಗೆ ಕೂಲಿ ಸಿಗದೆ ಗುಳೆ ಹೊರಟಿದ್ದಾರೆ.

ಜಲ್ಲಿ ಉತ್ಪಾದಿಸುವ ಕ್ರಷರ್‌ಗಳಲ್ಲಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ನೂರಾರು ಕಾರ್ಮಿಕರು ದುಡಿಯುತ್ತಿದ್ದರು. ಟಿಪ್ಪರ್ ಮತ್ತು ಟ್ರಾಕ್ಟರ್ ಚಾಲಕರು, ಬೃಹತ್ ಯಂತ್ರಗಳ ನಿರ್ವಾಹಕರು, ಯಂತ್ರಗಳ ಚಾಲಕರು ಸೇರಿದಂತೆ ಹಲವರು ಕುಟುಂಬಗಳಿಗೆ ಇದೇ ಜೀವನ ಆಧಾರವಾಗಿತ್ತು. ಇದೀಗ ಕಲ್ಲು ಗಣಿ ಉದ್ಯಮ ಸ್ಥಗಿತಗೊಂಡಿದ್ದರಿಂದ ಕಾರ್ಮಿಕರನ್ನು ನಂಬಿರುವ ಕುಟುಂಬಗಳೂ ಕಂಗಾಲಾಗಿವೆ. ಭವಿಷ್ಯದ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ಟ್ರ್ಯಾಕ್ಟರ್ ಚಾಲಕ ಹನಮಂತ.

ವಿದ್ಯುತ್ ಸ್ಥಗಿತ

ಮಾಲಿನ್ಯ ಮಂಡಳಿ ಸೂಚನೆಯಂತೆ ಜಲ್ಲಿ ಕ್ರಷರ್‌ಗಳ ಕೆಲಸ ನಿಲ್ಲಿಸುವ ಮುನ್ನ ಹೆಸ್ಕಾಂ ವಿದ್ಯುತ್ ಸರಬರಾಜನ್ನು ಕಡಿತ ಮಾಡಿತ್ತು. ಗಣಿ ಪ್ರದೇಶದಲ್ಲಿಯೇ ವಾಸವಾಗಿದ್ದ ಕಾರ್ಮಿಕರಿಗೆ ಕುಡಿಯಲು ನೀರು ಇಲ್ಲ. ರಾತ್ರಿ ಕತ್ತಲಲ್ಲೇ ಜೀವನ ಕಳೆಯಬೇಕಾಗಿೆ. 

ಬರದ ಬರೆ
ಜಲ್ಲಿ ಕ್ರಷರ್ ಉದ್ಯಮ ಬಂದ್ ಆಗಿದ್ದು ಒಂದೆಡೆ ಹೊಡೆತವಾದರೆ, ಇನ್ನೊಂದೆಡೆ ಹೊಲದಲ್ಲಿ ಕೆಲಸ ಮಾಡಲು ಮಳೆ ಆಗಿಲ್ಲ. ಮಳೆಯೂ ಆಗದೆ, ಬಿತ್ತನೆಯೂ ಆಗದೆ ಬರದ ಛಾಯೆ ದಟ್ಟವಾಗಿ ಆವರಿಸುತ್ತಿದೆ. ಹೊಟ್ಟೆಪಾಡು ದುಸ್ತರವಾಗುತ್ತಿದೆ. ದುಡಿಯುವ ಕೈಗಳಿಗೆ ಕೆಲಸ ಇಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಜೀವನದ ಅನಿವಾರ್ಯಕ್ಕಾಗಿ ಕೆಲಸ ಹುಡುಕಿ ಪಟ್ಟಣಕ್ಕೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ ಎಂಬುದು ಜಲ್ಲಿ ವಹಿವಾಟು ನಡೆಸುವ ಮಹಾಂತೇಶ.

ಸರಕಾರಕ್ಕೆ ಸೂಚನೆ: ಜಲ್ಲಿ ಉತ್ಪಾದನೆ ಕ್ರಷರ್‌ಗಳಿಂದ ಸುತ್ತಲಿನ ಪರಿಸರಕ್ಕೆ ಹಾನಿಯಾಗುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ಪೂರಕವಾದ ವ್ಯವಸ್ಥೆ ಮಾಡಿಲ್ಲ ಎಂಬ ಸಾರ್ವಜನಿಕ ಹಿತಾಸಕ್ತಿ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಆದೇಶ ನೀಡಿದೆ. ಆದೇಶ ಪಾಲಿಸದಿದ್ದರೆ ಅಧಿಕಾರಿಗಳಿಗೆ ಕುತ್ತು. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಸರ್ಕಾರ ಸಲಹೆ ನೀಡಿದೆ. ಆದರೆ ಇದುವರೆಗೆ ಆ ನಿಟ್ಟಿನಲ್ಲಿ ಯಾವುದೇ ಪ್ರಗತಿ ಆಗಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಏರಿದ ಬೆಲೆ
ಜಲ್ಲಿ ಕ್ರಷರ್ ಚಟುವಟಿಕೆ ಸ್ಥಗಿತದಿಂದ ಜಲ್ಲಿ ಕಲ್ಲಿನ ದರ ಪ್ರತಿದಿನವೂ ಏರುತ್ತಲೇ ಇದೆ. ಇದರಿಂದ ಮನೆ ಕಟ್ಟಡ, ರಸ್ತೆ ಸೇರಿದಂತೆ ಇತರೆ ಕಾಮಗಾರಿಗಳ ಮೇಲೂ ಪರಿಣಾಮ ಬೀರಿದೆ. ಜಲ್ಲಿ ಕಲ್ಲಿನ ಬೆಲೆ ಒಂದೇ ವರ್ಷದಲ್ಲಿ ದುಪ್ಪಟ್ಟು, ಮೂರು ಪಟ್ಟು ಹೆಚ್ಚಾಗಿದ್ದು ಮಧ್ಯಮ ವರ್ಗದ ಜನರ ಮನೆ ನಿರ್ಮಿಸುವ ಕನಸಿಗೆ ದೊಡ್ಡ ಹೊಡೆತ ಬಿದ್ದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT