ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಮೀನಿಗಾಗಿ ಲಂಚ ಪ್ರಕರಣ: ಸೋಮಶೇಖರ ರೆಡ್ಡಿ ಬಂಧನ

Last Updated 6 ಆಗಸ್ಟ್ 2012, 11:35 IST
ಅಕ್ಷರ ಗಾತ್ರ

ಹೈದರಾಬಾದ್ (ಐಎಎನ್‌ಎಸ್): ಗಣಿ ಹಗರಣದಲ್ಲಿ ಬಂಧನಕೊಳ್ಳಗಾಗಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಜಾಮೀನಿಗಾಗಿ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಸೋಮವಾರ ಜನಾರ್ದನ ರೆಡ್ಡಿ ಅವರ ಸಹೋದರ, ಶಾಸಕ ಸೋಮಶೇಖರ ರೆಡ್ಡಿ ಅವರನ್ನು ಬಂಧಿಸಿದೆ.

ವಿಚಾರಣೆಗಾಗಿ ಎಸಿಬಿ ಮುಂದೆ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಹಾಜರಾದ ಸೋಮಶೇಖರ ಅವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದರು.
 
`ಜಾಮೀನಿಗಾಗಿ ಲಂಚ~ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದವರಲ್ಲಿ ಸೋಮಶೇಖರ ಅವರು 11ನೇ ಆರೋಪಿಯಾಗಿದ್ದಾರೆ. ಇದೆ ರೀತಿ ಎಸಿಬಿ ಮುಂದೆ ವಿಚಾರಣೆಗಾಗಿ ಆಗಮಿಸಿದ್ದ ಕಂಪ್ಲಿ ಶಾಸಕ ಸುರೇಶ್ ಬಾಬು ಅವರನ್ನು ಜುಲೈ 31ರಂದು ಬಂಧಿಸಲಾಗಿತ್ತು.

ಎಸಿಬಿ ದಾಖಲಿಸಿಕೊಂಡಿರುವ ಮೊದಲ ಪ್ರಕರಣದಲ್ಲಿ ಅಮಾನತುಗೊಂಡಿರುವ ಸಿಬಿಐ ನ್ಯಾಯಾಧೀಶ ಟಿ. ಪಟ್ಟಾಭಿರಾಮ ರಾವ್ ಮತ್ತು ಅವರ ಪುತ್ರ ರವಿ ಚಂದ್ರ, ನಿವೃತ್ತ ನ್ಯಾಯಾಧೀಶ ಟಿ.ವಿ. ಚಲಪತಿ ರಾವ್, ರೌಡಿ ಪಟ್ಟಿಯಲ್ಲಿರುವ ಯಾದಗಿರಿ ರಾವ್, ವಕೀಲ ಆದಿತ್ಯ, ರೆಡ್ಡಿ ಸೋದರರ ಸಂಬಂಧಿ ದಶರಥರಾಮಿ ರೆಡ್ಡಿ ಹಾಗೂ ಕರ್ನಾಟಕದ ಇಬ್ಬರು ಶಾಸಕರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ. ಇವರ ವಿರುದ್ಧ ಜನಾರ್ದನ ರೆಡ್ಡಿಗೆ ಜಾಮೀನು ದೊರಕಿಸಿಕೊಡಲು ಅಕ್ರಮ ಮಾರ್ಗ ಅನುಸರಿಸಿದ್ದು ಮತ್ತು ಇದಕ್ಕೆ ಸಂಚು ರೂಪಿಸಿದ ಆಪಾದನೆ ಹೊರಿಸಲಾಗಿದೆ.

ಎರಡನೇ ಪ್ರಕರಣದಲ್ಲಿ ಅಮಾನತುಗೊಂಡಿರುವ ನ್ಯಾಯಾಧೀಶರಾದ ಪ್ರಭಾಕರ ರಾವ್, ಲಕ್ಷ್ಮೀನರಸಿಂಹ ರಾವ್, ಅವರ ಆಪ್ತ ಸೂರ್ಯಪ್ರಕಾಶ ರಾವ್ ಅವರ ಹೆಸರಿದೆ. ಇವರು ರೆಡ್ಡಿ ಬಳಗದ ಪರವಾಗಿ ಸಿಬಿಐ ನ್ಯಾಯಾಧೀಶರಿಗೆ ಲಂಚದ ಆಮಿಷ ಒಡ್ಡಲು ಮಧ್ಯವರ್ತಿಗಳಾಗಿದ್ದರು. ಇವರ ಪ್ರಯತ್ನ ವಿಫಲವಾಗಿದ್ದರೂ ಜಾಮೀನಿಗಾಗಿ ಅಕ್ರಮ ಮಾರ್ಗ ಹಿಡಿದಿದ್ದು ಮತ್ತು ಅದಕ್ಕೆ ಸಂಚು ನಡೆಸಿದ ಆರೋಪ ಹೊರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT