ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ-ಕೆಟಗಿರಿ ಸಾಚಾತನ ಪ್ರಕಟವಾಗಲಿ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಮುಖ್ಯಮಂತ್ರಿಗಳ ವಿವೇಚನಾ ಕೋಟಾದಲ್ಲಿ (ಜಿ-ಕೆಟಗಿರಿ) ನಿವೇಶನ ಪಡೆದ ರಾಜ್ಯದ ಕಾನೂನು ಸಚಿವ ಸುರೇಶ್‌ಕುಮಾರ್ ರಾಜೀನಾಮೆ ಕೊಡಬೇಕಾಗಿ ಬಂದ ಸಂದರ್ಭ ಮತ್ತು ರಾಜೀನಾಮೆ ವಿಷಯದಲ್ಲಿ ಮುಖ್ಯವಾಗಿ ಪ್ರತಿಪಕ್ಷಗಳ ಪ್ರಮುಖರ ಹೇಳಿಕೆಗಳನ್ನು ಗಮನಿಸಿದಾಗ ಈ ರಾಜ್ಯದಲ್ಲಿ ಜನಪ್ರತಿನಿಧಿಗಳು ಎನಿಸಿಕೊಂಡವರು ಎಂಥ ದುರದೃಷ್ಟಕರ ಪ್ರಸಂಗಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆನ್ನುವುದು ಸ್ಪಷ್ಟವಾಗುತ್ತದೆ.

ವಿವೇಚನಾ ಕೋಟಾದ ಅಡಿಯಲ್ಲಿ ನಿವೇಶನ ಪಡೆದಿರಬಹುದಾದ ಪ್ರತಿಪಕ್ಷಗಳವರೂ ಹಾಗೆ ಪಡೆಯುವ ವೇಳೆ, ಎಂದರೆ ನಿವೇಶನಕ್ಕೆ ಅರ್ಜಿ ಸಲ್ಲಿಸುವಾಗ, ಅದರೊಡನೆ ಸಲ್ಲಿಸಿದ ಪ್ರಮಾಣ ಪತ್ರದ ಸತ್ಯಾಸತ್ಯತೆಯ ಬಗೆಗೆ ಈಗ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯಬೇಕು.
 
ಸುರೇಶ್‌ಕುಮಾರ್ ಪ್ರಕರಣದಲ್ಲಿ ಕಾನೂನಿನ ಸೂಕ್ಷಾಂಶಗಳು ಇರುವಂತಿವೆ; ತಾಂತ್ರಿಕ ಲೋಪಗಳಾಗಿದ್ದಿರಲೂಬಹುದು. ಒಂದು ವೇಳೆ ಪ್ರಕರಣ ನ್ಯಾಯಾಲಯದ ಮುಂದೆ ಬಂದರೆ ಈ ಎಲ್ಲವೂ ಅಲ್ಲಿ ವಾದ-ಪ್ರತಿವಾದಗಳಲ್ಲಿ ಕಾಣಿಸಿಕೊಳ್ಳುತ್ತವೆ; ಇದು ಬೇರೆ ವಿಷಯ. ಆದರೆ ನಮಗೆ, ಸಾರ್ವಜನಿಕರಿಗೆ, ತಿಳಿಯಬೇಕಾಗಿರುವುದು ಜಿ-ಕೆಟಗಿರಿಯಲ್ಲಿ ನಿವೇಶನ ಪಡೆದಿರುವ 165 ಶಾಸಕರು, ಮಂತ್ರಿಗಳು ಮತ್ತಿತರ ಗಣ್ಯವ್ಯಕ್ತಿಗಳು ನಿವೇಶನವನ್ನು ನ್ಯಾಯಯುತವಾಗಿಯೇ ಪಡೆದರು ಮತ್ತು ಹಾಗೆ ಪಡೆದ ಮೇಲಷ್ಟೆ ಅವರು ನಿವೇಶನದಂಥ ಸ್ಥಿರಾಸ್ತಿಯ ಒಡೆಯರಾದುದು ಪಾಪ, ಎನ್ನುವುದು. ಒಬ್ಬರ ವಿಷಯದಲ್ಲಿ ಈಗ ಹರಿಹಾಯ್ದಿರುವವರು ಇತರರದ್ದನ್ನೂ ಬಹಿರಂಗಗೊಳಿಸಬೇಕು.
-ಸಾಮಗ ದತ್ತಾತ್ರಿ, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT