ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಂದಾಲ್ ಮರು ಆಯ್ಕೆ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಭಾರತೀಯ ಮೂಲದ  ಬಾಬಿ ಜಿಂದಾಲ್ ಅವರು ಲೂಸಿಯಾನದ ಗವರ್ನರ್ ಆಗಿ ಎರಡನೆಯ ಅವಧಿಗೆ ಆಯ್ಕೆ ಆಗಿದ್ದಾರೆ.

40ರ ಹರೆಯದ ಜಿಂದಾಲ್ ಅವರು 9 ಅಭ್ಯರ್ಥಿಗಳನ್ನು ಎದುರಿಸಬೇಕಾಗಿತ್ತು. ಒಟ್ಟಾರೆ ಶೇ 68ರಷ್ಟು ಮತಗಳನ್ನು ಪಡೆದಿರುವ ಜಿಂದಾಲ್ ಪಾಲಿಗೆ ವಿಜಯಲಕ್ಷ್ಮಿ ಮತ್ತೊಮ್ಮೆ ಒಲಿದಿದ್ದಾಳೆ.

2007ರಲ್ಲಿ ಮೊದಲ ಸಲ ಗವರ್ನರ್ ಆಯ್ಕೆಯ ಚುನಾವಣೆಗೆ ಕಣಕ್ಕಿಳಿದಾಗ ಶೇ 54ರಷ್ಟು ಮತಗಳನ್ನು ಪಡೆದಿದ್ದರು. ಆಗ ಅಮೆರಿಕದ ಅತಿ ಕಿರಿಯ ವಯಸ್ಸಿನ ಗವರ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಡೆಮಾಕ್ರಟ್ ಪಕ್ಷದ ಟಾರಾ ಹೊಲಿಸ್ ಅವರಿಗೆ ಶೇ 18ರಷ್ಟು ಮತಗಳು ಸಿಕ್ಕಿವೆ. ಉಳಿದವರಿಗೆಲ್ಲ ಕೇವಲ ಒಂದಂಕಿಯಷ್ಟೇ ಮತಗಳು ಬಂದಿವೆ.  ಜಿಂದಾಲ್ 2012ರ ಜನವರಿಯಲ್ಲಿ 4 ವರ್ಷಗಳ ಅವಧಿಗಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT