ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಎಲ್‌ವಿ ಪತನಕ್ಕೆ ಕನೆಕ್ಟರ್ ಕಾರಣ

Last Updated 30 ಡಿಸೆಂಬರ್ 2010, 11:15 IST
ಅಕ್ಷರ ಗಾತ್ರ

ಚೆನ್ನೈ (ಐಎಎನ್‌ಎಸ್): ರಾಕೆಟ್ ಹೊತ್ತಿದ್ದ ಉಪಗ್ರಹದ ತೂಕ ಪೂರ್ವನಿಗದಿಗಿಂತ 90 ಕೆ.ಜಿ.ಯಷ್ಟು ಹೆಚ್ಚಾಗಿದ್ದುದೇ ರಾಕೆಟ್ ಸ್ಫೋಟಗೊಂಡು ಬೀಳಲು ಕಾರಣವೆಂಬ ವಿಶ್ಲೇಷಣೆಗಳನ್ನು ಇದೇ ವೇಳೆ ಅವರು ತಿರಸ್ಕರಿಸಿದ್ದಾರೆ.

‘ರಾಕೆಟ್‌ನ ಎರಡು ಹಾಗೂ ಮೂರನೇ ಹಂತದ ನಡುವೆ 10 ಕನೆಕ್ಟರ್‌ಗಳನ್ನು ಅಳವಡಿಸಿದ್ದ ಜಾಗದಲ್ಲೇ ಅಧಿಕ ತೂಕವನ್ನೂ ಇರಿಸಿದ್ದುದು ಕನೆಕ್ಟರ್‌ಗಳು ಕಿತ್ತುಬರಲು ಕಾರಣವಾಗಿರಬಹುದು. ಈ ಕುರಿತು ವಿವರ ಅಧ್ಯಯನ ನಡೆಸಿದರೆ ಹೆಚ್ಚಿನ ಸಂಗತಿಗಳು ಹೊರಬೀಳಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮನುಷ್ಯನಿಗೆ ಬೆನ್ನುಮೂಳೆ ಎಷ್ಟು ಮುಖ್ಯವೋ ರಾಕೆಟ್‌ನಲ್ಲಿ ಕನೆಕ್ಟರ್‌ಗಳು ಕೂಡ ಅಷ್ಟೇ ಮುಖ್ಯ. ರಾಕೆಟ್‌ನ ವಿವಿಧ ಹಂತಗಳ ಮಧ್ಯೆ ಆಜ್ಞಾ ಸಂಕೇತಗಳನ್ನು ರವಾನಿಸುವ ಪ್ರಮುಖ ಕಾರ್ಯ ಈ ಕನೆಕ್ಟರ್‌ಗಳ ಮೂಲಕ ನಡೆಯುತ್ತದೆ. ಕನೆಕ್ಟರ್‌ಗಳು ಕಿತ್ತು ಹೋದರೆ ಮನುಷ್ಯನ ಬೆನ್ನುಮೂಳೆಯೇ ಮುರಿದು ಹೋದಂತೆ’ ಎನ್ನುತ್ತಾರೆ ಇಸ್ರೊ ನಿವೃತ್ತ ವಿಜ್ಞಾನಿ ಆರ್.ವಿ.ಪೆರುಮಾಳ್.

ಆಗಸಕ್ಕೆ ಚಿಮ್ಮಿದ 47 ಸೆಕೆಂಡುಗಳ ಕಾಲ ರಾಕೆಟ್ ಸುಗಮವಾಗಿಯೇ ಮೇಲಕ್ಕೇರಿತು. 47ರಿಂದ 50 ಸೆಕೆಂಡುಗಳ  ಅವಧಿಯಲ್ಲಿ ಕಾಣಿಸಿಕೊಂಡ ತೊಂದರೆಯಿಂದ 10 ಕನೆಕ್ಟರುಗಳು ಕಿತ್ತು ಬಂದವಲ್ಲದೆ ರಾಕೆಟ್ ನಿಯಂತ್ರಣ ಕಳೆದುಕೊಂಡಿತು ಎಂದು ಇಸ್ರೊ ಕೂಡ ಈ ಮುನ್ನವೇ ಹೇಳಿತ್ತು.

ಈ ರಾಕೆಟ್‌ನಲ್ಲಿ ತೊಂದರೆ ಕಾಣಿಸಿಕೊಳ್ಳುವ ಹೊತ್ತಿಗೆ ಸುಮಾರು 100 ಟನ್‌ಗಳಷ್ಟು ಇಂಧನ ಹೊತ್ತಿ ಉರಿದಿತ್ತು. ಹೀಗಾಗಿ ರಾಕೆಟ್‌ನ ಭಾರ ನಿಗದಿಗಿಂತ ನಾಲ್ಕು ಟನ್‌ಗಳಷ್ಟು ಹೆಚ್ಚಾಗಿದ್ದುದು ನಗಣ್ಯ; ತೂಕ ಹೆಚ್ಚಳವೇ ರಾಕೆಟ್ ವಿಫಲಗೊಳ್ಳಲು ಕಾರಣ ಎಂಬುದನ್ನು ಒಪ್ಪಲಾಗದು ಎಂಬುದು ಅವರ ವಿವರಣೆ.

ಜಿಎಸ್‌ಎಲ್‌ವಿ ಮಾದರಿಯ ರಾಕೆಟ್‌ಗೆ ನಿಗದಿಯಾಗಿರುವ ಮಾನದಂಡದ ಪ್ರಕಾರ ಅದರ ಎತ್ತರ 49 ಮೀಟರ್ ಹಾಗೂ ತೂಕ ಗರಿಷ್ಠ 414 ಟನ್ ಇರಬೇಕು. ಆದರೆ ಡಿ.25ರಂದು ವಿಫಲಗೊಂಡ ರಾಕೆಟ್ 51 ಮೀಟರ್ ಹಾಗೂ 418 ಟನ್‌ಗಳಷ್ಟು ಭಾರ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT