ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಹೆಚ್ಚಿದ ಮಳೆ ಅಬ್ಬರ

Last Updated 3 ಆಗಸ್ಟ್ 2013, 12:29 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಶುಕ್ರವಾರವೂ ಮುಂದುವರಿದಿದೆ. ಜಿಲ್ಲೆಯಲ್ಲಿ ಒಟ್ಟು 2608 ಮಿ.ಮೀ. ಮಳೆ ಬಿದ್ದಿದೆ.

ಚಿಕ್ಕಮಗಳೂರಿನಲ್ಲಿ 16.2 ಮಿ.ಮೀ. ಮಳೆಯಾಗಿದೆ.

ವಸ್ತಾರೆ 33.4, ಜೋಳದಾಳಿನಲ್ಲಿ 41, ಆಲ್ದೂರು 60.2, ಕೆ.ಆರ್.ಪೇಟೆ 18.2, ಅತ್ತಿಗುಂಡಿ 31.3, ಸಂಗಮೇಶ್ವರ ಪೇಟೆಯಲ್ಲಿ 45, ಭೈರವಳ್ಳಿ 50.4, ಕಳಸಾಪುರ 4.4, ಮಳಲೂರು 18 ಹಾಗೂ ದಾಸರಹಳ್ಳಿಯಲ್ಲಿ 8.6, ತಾಲ್ಲೂಕಿನ ಸರಾಸರಿ 29.7 ಮಿ.ಮೀ. ಮಳೆಯಾಗಿದೆ.

ಕಡೂರು ಪಟ್ಟಣದಲ್ಲಿ 6.6 ಮಳೆಯಾಗಿದ್ದು, ಕಡೂರು ತಾಲ್ಲೂಕಿನ ಯಗಟಿ 1.2, ಸಿಂಗಟಗೆರೆ 12.8, ಪಂಚನಹಳ್ಳಿ 4.8, ಸಖರಾಯಪಟ್ಟಣ 7.8, ಗಿರಿಯಾಪುರ 12, ಬೀರೂರು 13.2, ಎಮ್ಮೆದೊಡ್ಡಿ 18 ತಾಲ್ಲೂಕಿನ ಸರಾಸರಿ 9.6 ಮಿ.ಮೀ. ಮಳೆಯಾಗಿದೆ.    
ಕೊಪ್ಪದಲ್ಲಿ 110.4 ಮಳೆಯಾಗಿದ್ದು, ತಾಲ್ಲೂಕಿನ ಹರಿಹರಪುರ 127, ಜಯಪುರದಲ್ಲಿ 87.5, ಕಮ್ಮರಡಿ 156.4, ಹಾಗೂ ಬಸರೀಕಟ್ಟೆ 119.1, ತಾಲ್ಲೂಕಿನ ಸರಾಸರಿ 120.1 ಮಿ.ಮೀ. ಮಳೆಯಾಗಿದೆ.

ಮೂಡಿಗೆರೆಯಲ್ಲಿ 112.7 ಮಳೆಯಾಗಿದ್ದು, ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ 266.6, ಜಾವಳ್ಳಿ 126, ಗೋಣಿಬೀಡಿನಲ್ಲಿ 130 ಹಾಗೂ ಕಳಸದಲ್ಲಿ 178.6, ತಾಲ್ಲೂಕಿನ ಸರಾಸರಿ 162.8 ಮಿ.ಮೀ. ಮಳೆಯಾಗಿದೆ.

ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ 61, ಮೇಗರಮಕ್ಕಿ 42, ಹಾಗೂ ಎನ್.ಆರ್.ಪುರದಲ್ಲಿ 48, ತಾಲ್ಲೂಕಿನ ಸರಾಸರಿ 50.3 ಮಳೆಯಾಗಿದೆ.

ಶೃಂಗೇರಿ ತಾಲ್ಲೂಕಿನ ಕಿಗ್ಗಾದಲ್ಲಿ 89.5, ಕೆರೆಕಟ್ಟೆಯಲ್ಲಿ 133.2, ಹಾಗೂ ಶೃಂಗೇರಿಯಲ್ಲಿ 120.4, ತಾಲ್ಲೂಕಿನ ಸರಾಸರಿ 114.4 ಮಳೆಯಾಗಿದೆ.

ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ 20, ಅಜ್ಜಂಪುರ 25.4, ಶಿವನಿ 26.2, ಬುಕ್ಕಾಂಬುದಿ 30.3, ಲಿಂಗದಹಳ್ಳಿ 19.6, ತಣೀಗೆಬೈಲು-43, ಉಡೆವ-29.8, ತ್ಯಾಗದಬಾಗಿ 23.6, ಹುಣಸಘಟ್ಟದಲ್ಲಿ 32.2, ರಂಗೇನಹಳ್ಳಿಯಲ್ಲಿ 22.4, ತರೀಕೆರೆಯಲ್ಲಿ 24 ಮಳೆಯಾಗಿದೆ. ತಾಲ್ಲೂಕಿನ ಸರಾಸರಿ 27 ಮಳೆಯಾಗಿದೆ. ಜಿಲ್ಲೆಯಲ್ಲಿ 2608 ಮಿಮೀ. ಮಳೆಯಾಗಿದ್ದು, ಸರಾಸರಿ ಶೇ 56.7ರಷ್ಟು ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT