ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುನೇಜಾ ಆಕರ್ಷಕ ಶತಕ

ಕ್ರಿಕೆಟ್‌: ಭಾರತದ ದಿಟ್ಟ ಉತ್ತರ
Last Updated 4 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿಶಾಖಪಟ್ಟಣ (ಪಿಟಿಐ):  ಮನ್‌ಪ್ರೀತ್‌ ಜುನೇಜಾ (ಬ್ಯಾಟಿಂಗ್‌ 178) ಗಳಿಸಿದ ಅಜೇಯ ಶತಕ ಮತ್ತು ವಾಸುದೇವನ್‌ ಜಗದೀಶ್‌ (91)  ತೋರಿದ ಉತ್ತಮ ಆಟದ ನೆರವಿನಿಂದ ಭಾರತ ‘ಎ’ ತಂಡ ಎರಡನೇ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ‘ಎ’ ತಂಡಕ್ಕೆ ತಕ್ಕ ಉತ್ತರ ನೀಡಿದೆ.

ಡಾ. ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಬುಧವಾರದ ಆಟದ ಅಂತ್ಯಕ್ಕೆ ಆತಿಥೇಯ ತಂಡ 124 ಓವರ್‌ಗಳಲ್ಲಿ 7 ವಿಕೆಟ್‌ಗೆ 408 ರನ್‌ ಗಳಿಸಿತ್ತು. 29 ರನ್‌ಗಳ ಹಿನ್ನಡೆಯಲ್ಲಿರುವ ಭಾರತ ಇನಿಂಗ್ಸ್‌ ಮುನ್ನಡೆ ಸಾಧಿಸುವ ಕನಸು ಕಾಣುತ್ತಿದೆ. ಆದರೆ ಗುರುವಾರ ಅಂತಿಮ ದಿನವಾಗಿದ್ದು, ಪಂದ್ಯ ನೀರಸ ಡ್ರಾದಲ್ಲಿ ಕೊನೆಗೊಳ್ಳುವ ಸಾಧ್ಯತೆಯೇ ಅಧಿಕ.

ಭಾರತ ಎರಡು ವಿಕೆಟ್‌ಗೆ 94 ರನ್‌ಗಳಿಂದ ಆಟ ಮುಂದುವರಿಸಿತ್ತು. ಜಗದೀಶ್‌ ಮತ್ತು ಜುನೇಜಾ ಕ್ರಮವಾಗಿ 40 ಹಾಗೂ 43 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದ್ದರು. ಮೂರನೇ ದಿನವೂ ಇವರು ತಮ್ಮ ಬ್ಯಾಟಿಂಗ್‌ ವೈಭವ ತೋರಿದರು. ಮೂರನೇ ವಿಕೆಟ್‌ಗೆ 197 ರನ್‌ಗಳ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು.

ಶತಕಕ್ಕೆ ಒಂಬತ್ತು ರನ್‌ಗಳು ಬೇಕಿದ್ದಾಗ ಜಗದೀಶ್‌ ಔಟಾದರು. 200 ಎಸೆತಗಳನ್ನು ಎದುರಿಸಿದ ಕೇರಳದ ಈ ಬ್ಯಾಟ್ಸ್‌ಮನ್‌ ಒಂಬತ್ತು ಬೌಂಡರಿ ಗಳಿಸಿದರು. ಬಳಿಕ ಬಂದ ನಾಯಕ ಅಭಿಷೇಕ್‌ ನಾಯರ್‌ (57)ಅವರು ಜುನೇಜಾಗೆ ಉತ್ತಮ ಸಾಥ್‌ ನೀಡಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 88 ರನ್‌ಗಳನ್ನು ಕಲೆಹಾಕಿದರು.

ಆ ಬಳಿಕ ಭಾರತ ಕೆಲವೊಂದು ವಿಕೆಟ್‌ಗಳನ್ನು ಕಳೆದು­ಕೊಂಡಿ­ತಾ­ದರೂ, ಜುನೇಜಾ ಮಾತ್ರ ಏಕಾಗ್ರತೆ ಕಳೆದುಕೊಳ್ಳಲಿಲ್ಲ. ಗುಜರಾತ್‌ನ ಯುವ ಬ್ಯಾಟ್ಸ್‌ಮನ್‌ ಒಟ್ಟು 336 ಎಸೆತಗಳನ್ನು ಎದುರಿಸಿದ್ದು, 19 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದ್ದಾರೆ. ಇನಿಂಗ್ಸ್‌ನ ಉದ್ದಕ್ಕೂ ಎಚ್ಚರಿಕೆಯ ಆಟವಾಡಿದ ಅವರು ಎದುರಾಳಿ ಬೌಲರ್‌ಗಳಿಗೆ ತಲೆನೋವಾಗಿ ಕಾಡಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ ‘ಎ’: 121.1 ಓವರ್‌ಗಳಲ್ಲಿ 437  ಭಾರತ ‘ಎ’: 124 ಓವರ್‌ಗಳಲ್ಲಿ 7 ವಿಕೆಟ್‌ಗೆ 408 (ವಾಸುದೇವನ್‌ ಜಗದೀಶ್‌ 91, ಮನ್‌ಪ್ರೀತ್‌ ಜುನೇಜಾ ಬ್ಯಾಟಿಂಗ್‌ 178, ಅಭಿಷೇಕ್‌ ನಾಯರ್‌ 57, ಜಲಜ್‌ ಸಕ್ಸೇನಾ 20, ಡಗ್‌ ಬ್ರೇಸ್‌ವೆಲ್‌ 75ಕ್ಕೆ 3, ಟಾಡ್‌ ಆ್ಯಸಲ್‌ 96ಕ್ಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT