ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಡೊ: ಕರ್ನಾಟಕದ ಸಂಗೀತಾಗೆ ಬೆಳ್ಳಿ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಆಗಿರುವ ಕರ್ನಾಟಕದ ಬಿ.ಆರ್. ಸಂಗೀತಾ ಅವರು ಲೆಬೆನಾನ್‌ನ ಬೆರಟ್‌ನಲ್ಲಿ ನಡೆದ ಏಷ್ಯನ್ ಯುವ ಮತ್ತು ಜೂನಿಯರ್ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ 63 ಕೆ.ಜಿ. ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸ್ಪರ್ಧಿಗಳು ಒಂದು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಎರಡು ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಲಿಕ್ಮಾಂಬಾ ಸುಶೀಲಾ ದೇವಿ ಅವರು 54 ಕೆ.ಜಿ. ವಿಭಾಗದಲ್ಲಿ ಸ್ವರ್ಣ ಪದಕ ಪಡೆದರು. ಅಷ್ಟೇ ಅಲ್ಲ `ಶ್ರೇಷ್ಠ ಜೂಡೊ ಸ್ಪರ್ಧಿ~ ಎನ್ನುವ ವಿಶೇಷ ಬಹುಮಾನವನ್ನು ಕೂಡ ಅವರು ತಮ್ಮದಾಗಿಸಿಕೊಂಡರು ಎಂದು ಇಲ್ಲಿಗೆ ಬಂದ ವರದಿಗಳು ತಿಳಿಸಿವೆ.

ಹಾಕಿ: ಕೊಡಗಿನ ಕೂರ್ಗ್ ತಂಡಕ್ಕೆ ರೋಚಕ ಜಯ
ಬೆಂಗಳೂರು:
ಉತ್ತಮ ಪ್ರದರ್ಶನ ನೀಡಿದ ಕೊಡಗಿನ ಕೂರ್ಗ್ ಬ್ಲೂಸ್ ಹಾಕಿ ಕ್ಲಬ್ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಎ~ ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.
ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕೂರ್ಗ್ ಬ್ಲೂಸ್ ತಂಡ 1-0ಗೋಲುಗಳಿಂದ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) `ಬಿ~ ತಂಡವನ್ನು ಮಣಿಸಿತು.ವಿಜಯಿ ತಂಡದ ಇ.ಕೆ. ಕೆರ್ಕೆಟಾ 56ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. 

ಹಾಕಿ ಪಂದ್ಯಗಳ ನೇರ ಪ್ರಸಾರ
ಬೆಂಗಳೂರು:
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 20ರಿಂದ ನಡೆಯಲಿರುವ ಲ್ಯಾನ್ಸೊ ಹಾಕಿ ಅಂತರರಾಷ್ಟ್ರೀಯ ಸೂಪರ್ ಸರಣಿಯ ನೇರ ಪ್ರಸಾರ ವೀಕ್ಷಿಸುವ ಅವಕಾಶ ಈ ಸಲ ಭಾರತದ ಅಭಿಮಾನಿಗಳಿಗೆ ಸಿಗಲಿದೆ. ಭಾರತ ಪುರುಷ ಹಾಗೂ ಮಹಿಳಾ ತಂಡದ ಪಂದ್ಯಗಳನ್ನು ನೇರವಾಗಿ `ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್~ ವಾಹಿನಿಯಲ್ಲಿ ವೀಕ್ಷಿಸಬಹುದು.

ಇತ್ತೀಚಿಗೆ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ನೋಡುವ ಅವಕಾಶ ಭಾರತ ಪ್ರೇಕ್ಷಕರಿಗೆ ಲಭಿಸಿರಲಿಲ್ಲ. ಆದ್ದರಿಂದ ಈ ಸಲದ ಹಾಕಿ ಸರಣಿ ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ ಎಂದು ಹಾಕಿ ಆಸ್ಟ್ರೇಲಿಯಾದ ಸಿಇಒ ಮಾರ್ಕ್ ಆ್ಯಂಡರಸನ್ ಹೇಳಿದ್ದಾರೆ.

ಭಾರತ ತಂಡದಲ್ಲಿ ಮೃದುಲಾ
ಬೆಂಗಳೂರು:
ಕರ್ನಾಟಕದ ವಿ. ಮೃದುಲಾ ಅಕ್ಟೋಬರ್ 6ರಿಂದ ಇಂಡೋನೇಷ್ಯಾದಲ್ಲಿ ನಡೆಯಲಿರುವ 7ನೇ ಏಷ್ಯನ್ ಏಜ್ ಗ್ರೂಪ್ ವಾಟರ್ ಪೋಲೋ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ನಗರದ ಕುಮಾರನ್ಸ್ ಕಾಲೇಜಿನಲ್ಲಿ ಮೃದುಲಾ ವ್ಯಾಸಂಗ ಮಾಡುತ್ತಿದ್ದಾರೆ.  ಈ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ತಂಡ ಫಿನಾ ವಾಟರ್ ಪೋಲೊ ವಿಶ್ವಕಪ್‌ಗೆ ಅರ್ಹತೆ ಪಡೆಯಲಿದೆ. ಆದ್ದರಿಂದ ಭಾರತಕ್ಕೆ ಇದು ಮುಖ್ಯವೆನಿಸಿದೆ. ಭಾರತ ತಂಡ ಮಂಗಳವಾರ ಇಂಡೋನೇಷ್ಯಾಕ್ಕೆ ಪ್ರವಾಸ ಬೆಳಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT