ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈ ಭಾರತ ಜನನಿಯ ತನುಜಾತೆ... ಜಯ ಹೇ ಕರ್ನಾಟಕ ಮಾತೆ...

Last Updated 4 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಕವಿ ಕುವೆಂಪು ರಚಿಸಿದ ‘ಜೈ ಭಾರತ ಜನನಿಯ ತನುಜಾತೆ...’ ನಾಡಗೀತೆಗೆ ಮೂರ್ತ ರೂಪ ನೀಡಿದ್ದು ಶುಕ್ರವಾರ ಇಲ್ಲಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿರುವ ‘ನಾಡಪ್ರಭು ಕೆಂಪೇಗೌಡ ಸಭಾಂಗಣ’ದ ಎದುರು ನಡೆದ ಧ್ವಜಾರೋಹಣ ಸಮಾರಂಭ.

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ದಿನವಾದ ಶುಕ್ರವಾರ ಬೆಳಿಗ್ಗೆ 8.30ಕ್ಕೆ ರಾಷ್ಟ್ರಧ್ವಜ ಆರೋಹಣ ನಡೆಸಿದಾಕ್ಷಣ ಮೊಳಗಿದ್ದು ರಾಷ್ಟ್ರಗೀತೆ ಜನಗಣ ಮನ...’ ಇದರ ಜೊತೆಗೆ  ವಾದ್ಯ ವೃಂದದವರ ಸಾಥ್.

ನಂತರ ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಅಶ್ವತ್ಥನಾರಾಯಣ ಅವರು ನಾಡ ಧ್ವಜಾರೋಹಣ ನಡೆಸಿದಾಗ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ...’ ಸುಶ್ರಾವ್ಯವಾಗಿ ಮೊಳಗಿತು. ವಾದ್ಯಗೋಷ್ಠಿಯ ಶ್ರುತಿ ಇದರೊಂದಿಗೆ ಮೇಳೈಸಿತ್ತು. ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ಅವರು ಕಸಾಪ ಧ್ವಜಾರೋಹಣ ನಡೆಸಿದರು. ಕನ್ನಡ ತಾಯಿ ಭುವನೇಶ್ವರಿಯ ಸಮ್ಮೇಳನಕ್ಕೆ ಸಮಸ್ತ ಕನ್ನಡಿಗರನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT