ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗ ಜಲಪಾತ ವೀಕ್ಷಣೆಗೆ ‘ಕಾಂಟಿಲಿವರ್‌’

Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಶಿರಸಿ (ಉತ್ತರ ಕನ್ನಡ): ವಿಶ್ವವಿಖ್ಯಾತ ಜೋಗ ಜಲ ಪಾತ ನೋಡಲು ಇನ್ನು ಮುಂದೆ ಹರಸಾಹಸ ಮಾಡಿ ಸಹಸ್ರಾರು ಮೆಟ್ಟಿಲು ಇಳಿಯಬೇಕಾಗಿಲ್ಲ. ಕಾಂಟಿ­ಲಿವರ್‌ (ಚಾಚು ತೊಲೆ) ಮೇಲೆ ನಿಂತು ಜಲಪಾತದ ಸೌಂದರ್ಯ, ಶರಾವತಿ ನದಿ ಕಣಿವೆ, ಹಸಿರು ಕಾನನದ ವಿಹಂಗಮ ನೋಟ ಆಸ್ವಾದಿಸಬಹುದು.

ಅರಣ್ಯ ಇಲಾಖೆ  ರೂ 4.65 ಕೋಟಿ ವೆಚ್ಚದಲ್ಲಿ ಇಂತಹ ಯೋಜನೆ­ಯೊಂದನ್ನು ರೂಪಿಸಿದೆ. ಸಿದ್ದಾಪುರ ತಾಲ್ಲೂಕಿನ ಮಾವಿನಗುಂಡಿ ಸಮೀಪ ಬ್ರಿಟಿಷ್‌ ಬಂಗ್ಲೆ ಪಕ್ಕದಲ್ಲಿ ದಕ್ಷಿಣ ಭಾರತದಲ್ಲೇ ಅಪರೂಪವಾದ ಕಾಂಟಿಲಿವರ್ ವೀಕ್ಷಣಾ ಸ್ಥಳ ನಿರ್ಮಾಣ­ವಾಗಲಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ. ಮೊದ ಲನೇ ಹಂತದಲ್ಲಿ ರೂ 1.5 ಕೋಟಿ ವೆಚ್ಚ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೆಆರ್‌ಐಡಿಎಲ್‌ (ಕರ್ನಾಟಕ ಗ್ರಾಮೀಣ ಮೂಲ­ಸೌಕರ್ಯ ಅಭಿವೃದ್ಧಿ ನಿಯಮಿತ) ಕಾಮಗಾರಿ ಕೈಗೆತ್ತಿಕೊಳ್ಳಲಿದೆ.

ಭದ್ರವಾದ ಕಂಬಗಳನ್ನು ಆಧರಿಸಿ ಗುಡ್ಡದ ತುದಿ ಯಲ್ಲಿ ಉಕ್ಕಿನ ಕಾಂಟಿಲಿವರ್‌ ನಿರ್ಮಾಣ ಮಾಡಲಾ­ಗುತ್ತದೆ. ಯಂತ್ರ ಆಧಾರಿತ ಈ ಚಾಚುತೊಲೆ ನೆಲ ದಿಂದ ಸುಮಾರು 40 ಅಡಿ ಮುಂದಕ್ಕೆ ಹೋಗಿ ನಿಲ್ಲು ತ್ತದೆ.

ಕಾಂಟಿ ಲಿವರ್‌ ಪ್ಲಾಟ್‌ಫಾರ್ಮ್‌ ಮೇಲೆ ನಿಂತಾಗ ಎಡಭಾಗದಲ್ಲಿ ಜೋಗ ಜಲಪಾತದ ಪ್ರಪಾತ, ಕೆಳಗೆ ಶರಾವತಿ ಕಣಿವೆ ಹಾಗೂ ಸುತ್ತಲಿನ ನಿತ್ಯಹರಿದ್ವರ್ಣ ಕಾಡನ್ನು ವೀಕ್ಷಿಸಲು ಅವಕಾಶವಾಗು ತ್ತದೆ. ಯೋಜನೆ ಪ್ರಕಾರ ಮೂರು ಸ್ತರಗಳ ವೀಕ್ಷಣಾ ಗ್ಯಾಲರಿ ನಿರ್ಮಾಣವಾಗಲಿದ್ದು, ಪ್ರಕೃತಿ ಸೌಂದರ್ಯ ವನ್ನೂ ಸವಿಯಬಹುದು.

ಗುಡ್ಡದ ತುದಿಯಲ್ಲಿ ವೀಕ್ಷಣಾ ಸ್ಥಳ ನಿರ್ಮಾಣ ಗೊಳ್ಳಲಿರುವುದರಿಂದ ಬೆಂಗಳೂರಿನ ಇಓ ಎಂಜಿನಿ ಯರಿಂಗ್‌ ಕಂಪೆನಿ ಮೂಲಕ ಮಣ್ಣು ಪರೀಕ್ಷೆ ನಡೆಸ ಲಾಗಿದ್ದು, ಸಕಾರಾತ್ಮಕ ಫಲಿತಾಂಶ ದೊರೆತಿದೆ.  

‘ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿ ಯಲ್ಲಿದ್ದರೂ ಇದಕ್ಕೆ ಉತ್ತರ ಕನ್ನಡದ ನಂಟಿದೆ. ಬ್ರಿಟಿಷ್‌ ಬಂಗ್ಲೆಯ ಸ್ಥಳದಿಂದ ಜೋಗ ವೀಕ್ಷಣೆ ಮಾಡುವ ಪ್ರವಾಸಿಗರಿಗೆ ರೋಚಕ ಅನುಭವ ದೊರ ಕಿಸಿಕೊಡುವ ಉದ್ದೇಶದಿಂದ ಈ ಯೋಜನೆ ರೂಪಿಸ ಲಾಗಿದೆ. ಚಾಚು ತೊಲೆ ನೆಲದಿಂದ ಮುಂದಕ್ಕೆ ಚಾಚಿ ಹೋಗುವುದರಿಂದ ಜಲಪಾತ ಹಾಗೂ ಪರಿಸರ ವೀಕ್ಷಣೆ ಪ್ರವಾಸಿಗರಿಗೆ ಭಯಮಿಶ್ರಿತ ಖುಷಿ ನೀಡಲಿದೆ. ಮುಂದಿನ ಮಳೆಗಾಲದ ಹೊತ್ತಿಗೆ ಕಾಮಗಾರಿ ಪೂರ್ಣ ಗೊಳಿಸುವ ಗುರಿಯಿದೆ’ ಎಂದು ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಧಿಕಾರಿ ಯತೀಶಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT