ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟರ್ಕಿ ಭೂಕಂಪ: ಹೆಚ್ಚುತ್ತಿರುವ ಸಾವಿನ ಸಂಖ್ಯೆ

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪಾಟ್ನೋಸ್ (ಟರ್ಕಿ), (ಎಪಿ): ಟರ್ಕಿಯಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ನೆಲಸಮಗೊಂಡ ಕಟ್ಟಡದ ಅಡಿಯಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

ಇದೇ ವೇಳೆ ಭಾನುವಾರ ಸಂಭವಿಸಿದ ಭೂಕಂಪದಲ್ಲಿ ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 217ಕ್ಕೆ ಏರಿದೆ.
ನೂರಕ್ಕೂ ಹೆಚ್ಚು ರಕ್ಷಣಾ ತಂಡಗಳು ಕಟ್ಟಡಗಳಡಿ ಸಿಲುಕಿಕೊಂಡವರನ್ನು ರಕ್ಷಿಸುವ ಸಲುವಾಗಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದವಲ್ಲದೆ ನಿರಾಶ್ರಿತರಿಗಾಗಿ ಶಿಬಿರಗಳನ್ನು, ಆಸ್ಪತ್ರೆಗಳನ್ನು ತೆರೆದಿವೆ. ಇದೇ ವೇಳೆ ನಿವಾಸಿಗಳು ಕೂಡ ತಮ್ಮ ಮನೆಮಂದಿಗಾಗಿ ಹುಡುಕಾಟ ನಡೆಸಿದರು. ಪ್ರಬಲ ಭೂಕಂಪಕ್ಕೆ ಇಟ್ಟಿಗೆಯಿಂದ ಕಟ್ಟಿದ ಗ್ರಾಮದ ಮನೆಗಳು ಮತ್ತು ನಗರದ ಕಾಂಕ್ರೀಟ್ ಕಟ್ಟಡಗಳು ನೆಲಕ್ಕುರುಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣ ರಕ್ಷಿಸಿದ ಮೊಬೈಲ್: ಇದೇ ವೇಳೆ ಅವಶೇಷಗಳಡಿ ಸಿಲುಕಿಕೊಂಡಿದ್ದ ಮೂವರಲ್ಲಿ ಒಬ್ಬಾತ ತನ್ನ ಮೊಬೈಲ್ ಫೋನ್‌ನಿಂದ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ತಾನೂ ಬದುಕುಳಿದನಲ್ಲದೆ ಇತರ ಮೂವರ ಪ್ರಾಣ ರಕ್ಷಣೆಗೂ ಕಾರಣನಾದ.

ಯಲ್ಸಿನ್ ಅಕಾಯ್ ಎಂಬಾತ ಕರೆ ನೀಡಿದ ಪರಿಣಾಮ ನೆಲಸಮಗೊಂಡಿದ್ದ ಆರು  ಮಹಡಿ ಕಟ್ಟಡದ ಅವಶೇಷಗಳ ಅಡಿಯಿಂದ ಆತನನ್ನು ರಕ್ಷಿಸಲಾಗಿದ್ದು ಆತನ ಕಾಲಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಲ್ಸಿನ್ ಜತೆಗೆ ಇಬ್ಬರು ಮಕ್ಕಳು ಸೇರಿದಂತೆ ಮೂವರನ್ನು ಅದೇ ಅವಶೇಷಗಳಡಿಯಿಂದ ಭೂಕಂಪ ಸಂಭವಿಸಿದ 20 ಗಂಟೆಗಳ ಬಳಿಕ ರಕ್ಷಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಶೇಷಗಳಡಿ ಸಿಲುಕಿಕೊಂಡಿರುವವರಿಗಾಗಿ ರಾತ್ರಿಯಿಡೀ ಜನರೇಟರ್ ಬೆಳಕಿನ ಸಹಾಯದಿಂದ ಹುಡುಕಾಟ ನಡೆಸಲಾಗಿತ್ತು. ಜತೆಗೆ ಕ್ರೇನ್ ನೆರವಿನಿಂದ ಕಾಂಕ್ರೀಟ್ ಹಲಗೆಗಳನ್ನು ಸರಿಸಿಯೂ ಹುಡುಕಾಟ ನಡೆಸಲಾಗಿತ್ತು. ಅವಶೇಷಗಳಡಿಯಲ್ಲಿ  ಇನ್ನೂ ಹೆಚ್ಚಿನ ಜನರು ಸಿಲುಕಿಕೊಂಡಿರುವುದರಿಂದ  ಸಾವಿನ ಸಂಖ್ಯೆ ಏರುವ ಸಾಧ್ಯತೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT