ಟಾಟಾ ಸಮೂಹದ ಅಂಗಸಂಸ್ಥೆಯಾಗಿರುವ ಟಾಟಾ ಸನ್ಸ್, ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಉತ್ತರಾಧಿಕಾರಿ ಶೋಧನಾ ಸಮಿತಿ ರಚಿಸಿತ್ತು. 2012ರ ಡಿಸೆಂಬರ್‌ಗೆ 75 ವರ್ಷದವರಾಗಲಿರುವ ರತನ್ ಟಾಟಾ ಸೇವಾ ನಿವೃತ್ತಿ ಆಗಲಿದ್ದಾರೆ. ತಮ್ಮ ನಿವೃತ್ತಿ ನಂತರ ಬಹುಶಃ ವಿದೇಶಿ ಪ್ರಜೆಯೊಬ್ಬರು ನೇಮಕಗೊಳ್ಳುವ ಸಾಧ್ಯತೆಗಳು ಇವೆ ಎಂದು ಸ್ವತಃ ಟಾಟಾ ಅವರೇ ಈ ಹಿಂದೆ ಇಂಗಿತ ವ್ಯಕ್ತಪಡಿಸಿದ್ದರು.