ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟನ್ನರ ಸ್ವಾಯತ್ತತೆಗೆ ಕರೆ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಧರ್ಮಶಾಲ (ಐಎಎನ್‌ಎಸ್): ಟಿಬೆಟನ್ನರ ಧಾರ್ಮಿಕ ಗುರು ದಲೈಲಾಮ ಪ್ರತ್ಯೇಕತಾವಾದಿ ಅಲ್ಲ ಎಂದು ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರುದ್ಧ ಹೋರಾಟ ನಡೆಸುತ್ತಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು ಹೇಳಿದ್ದಾರೆ.

`ಅವರ (ದಲೈಲಾಮ) ಬಳಿ ಸೇನೆ ಇಲ್ಲ. ಜನರಿಗೆ ಬಂದೂಕು ನೀಡಿ ನಿಯಂತ್ರಿಸುವ ಶಕ್ತಿಯೂ ಇಲ್ಲ~ ಎಂದು ಟುಟು ಚೀನಾಗೆ ಸಂದೇಶ ನೀಡಿದ್ದಾರೆ.

`ನಿಮ್ಮನ್ನು (ಚೀನಾ ನಾಯಕರು) ಬೇಡಿಕೊಳ್ಳುತ್ತೇವೆ. ಟಿಬೆಟ್ ಜನರಿಗೆ ಸ್ವಾಯತ್ತತೆ ನೀಡಿ. ನಿಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವೂ ಇದೆ.  ದಲೈಲಾಮ ಮತ್ತು ಟಿಬೆಟ್ ಜನರ ಬೇಡಿಕೆಯನ್ನು ಈಡೇರಿಸಿ~ ಎಂದು ಮನವಿ ಮಾಡಿದರು. `ನಾವೀಗ ನೈತಿಕ ಜಗತ್ತಿನಲ್ಲಿದ್ದೇವೆ. ಹಾಗಾಗಿ ಅನ್ಯಾಯ ಮಾಡಲು ಯಾರಿಗೂ ಹಕ್ಕಿಲ್ಲ. ದಬ್ಬಾಳಿಕೆಗೆ ಅವಕಾಶ ನೀಡಬೇಡಿ~ ಎಂದೂ ಹೇಳಿದರು.

`ಸ್ವಾಯತ್ತ ಟಿಬೆಟ್‌ಗೆ ಭೇಟಿ ನೀಡಬೇಕು ಎನ್ನುವ ಹಂಬಲ ಇದೆ. ಆ ಅವಕಾಶಕ್ಕಾಗಿ ಕಾಯುತ್ತೇನೆ~ ಎಂದು ಟಿಬೆಟನ್ನರನ್ನು ಕುರಿತು ಹೇಳಿದರು.

ದೀರ್ಘಕಾಲದ ಸ್ನೇಹಿತರಾದ ದಲೈಲಾಮ ಅವರನ್ನು ಭೇಟಿ ಮಾಡುವ ಸಲುವಾಗಿಯೇ ಟುಟು ಇಲ್ಲಿಗೆ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT