ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಸಿಎಸ್: ಮುಂದಿನ ವರ್ಷ 37,000 ಉದ್ಯೋಗಿಗಳ ಭರ್ತಿ

Last Updated 16 ಫೆಬ್ರುವರಿ 2011, 18:10 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂದಿನ ಹಣಕಾಸು ವರ್ಷದಲ್ಲಿ ‘ಕ್ಯಾಂಪಸ್  ನೇಮಕಾತಿ’ ಮೂಲಕ  37,000 ಉದ್ಯೋಗಿಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು ಎಂದು ಐಟಿ  ಮುಂಚೂಣಿ ಕಂಪೆನಿ ‘ಟಾಟಾ ಕನ್ಸಲ್ಟನ್ಸಿ’  ತಿಳಿಸಿದೆ.

2012ರಲ್ಲಿ ದೇಶದ 171 ಶೈಕ್ಷಣಿಕ ಸಂಸ್ಥೆಗಳಿಂದ  37,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಯೋಜನೆ ಇದೆ ಎಂದು ‘ಟಿಸಿಎಸ್’ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಜೋಯೇಂದ್ರ ಮುಖರ್ಜಿ ತಿಳಿಸಿದ್ದಾರೆ.

ಕಳೆದ ವರ್ಷ ‘ಟಿಸಿಎಸ್’ ಕ್ಯಾಂಪಸ್ ನೇಮಕಾತಿ ಮೂಲಕ 27,000 ಉದ್ಯೋಗಿಗಳನ್ನು ಭರ್ತಿ ಮಾಡಿಕೊಂಡಿತ್ತು. ಕಳೆದ ಮೂರು ತ್ರೈಮಾಸಿಕ ಅವಧಿಗಳಲ್ಲಿ ಕಂಪೆನಿಯ ಸಾಧನೆ ಉತ್ತಮವಾಗಿದ್ದು, ಉದ್ಯೋಗಿಗಳ ಬೇಡಿಕೆ ಹೆಚ್ಚಿದೆ. ಹೊಸ ನೇಮಕಾತಿ ಮೂಲಕ ಸಂಸ್ಥೆಗೆ ಸೇರ್ಪಡೆಯಾಗುವ ಉದ್ಯೋಗಿಗಳನ್ನು ದೇಶಿ ಮತ್ತು ವಿದೇಶಿ ಕಚೇರಿಗಳಲ್ಲಿ ನೇಮಿಸಲಾಗುವುದು ಎಂದು  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT