ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್: ಸೋಮದೇವ್‌ಗೆ ನಿರಾಸೆ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಸಿಡ್ನಿ (ಪಿಟಿಐ): ಭಾರತದ ಸೋಮದೇವ್‌ ದೇವವರ್ಮನ್ ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎಟಿಪಿ ಅಪಿಯಾ ಅಂತರರಾಷ್ಟ್ರೀಯ ಅರ್ಹತಾ ಟೂರ್ನಿಯ ಸಿಂಗಲ್ಸ್‌ನಲ್ಲಿ ಪರಾಭವಗೊಂಡಿದ್ದಾರೆ.

ಭಾನುವಾರ ನಡೆದ ಅರ್ಹತಾ ಹಂತದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಮದೇವ್ 6–2, 2–6, 3–6 ರಲ್ಲಿ ಜಾನ್‌ ಲೆನ್ನಾರ್ಡ್‌ ಸ್ಟಫ್‌ ಎದುರು  ಸೋಲು ಕಂಡು ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.

ವಿಶ್ವ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 90 ನೇ ಸ್ಥಾನ ಹೊಂದಿರುವ ಸೋಮದೇವ್ ಮಿಂಚಿನ ಆಟ ಪ್ರದರ್ಶಿಸುವ ಮೂಲಕ ಮೊದಲ ಸೆಟ್‌ಅನ್ನು ನಿರಾಯಾಸವಾಗಿ ಗೆದ್ದುಕೊಂಡರು.

ಆದರೆ ನಂತರದ ಸೆಟ್‌ಗಳಲ್ಲಿ ಎದುರಾಳಿ ಆಟಗಾರ ಒಡ್ಡಿದ ಸವಾಲಿಗೆ ಪ್ರತಿರೋಧ ತೋರುವಲ್ಲಿ ವಿಫಲರಾದ ಅವರು ಸುಲಭವಾಗಿ ಶರಣಾಗುವ ಮೂಲಕ ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT