ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಫೈನಲ್‌ಗೆ ನಿಕ್ಷೇಪ್‌, ಸ್ನೇಹಲ್‌

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಗ್ರ ಶ್ರೇಯಾಂಕ ಹೊಂದಿ ರುವ ಕರ್ನಾಟಕದ ಬಿ.ಆರ್‌. ನಿಕ್ಷೇಪ್‌ ಮತ್ತು ಮಹಾರಾಷ್ಟ್ರದ ಸ್ನೇಹಲ್‌ ಮಾನೆ, ಆರ್‌.ಟಿ. ನಾರಾಯಣ್‌ ಸ್ಮಾರಕ ಎಐಟಿಎ ಟೆನಿಸ್‌ ಟೂರ್ನಿಯ 16 ವರ್ಷದೊಳಗಿನವರ ವಿಭಾಗದ ಸಿಂಗಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದರು.

ಕರ್ನಾಟಕ ಲಾನ್‌ ಟೆನಿಸ್‌ ಸಂಸ್ಥೆಯ ಕೋರ್ಟ್‌ನಲ್ಲಿ ಶನಿವಾರ ನಡೆದ ಬಾಲಕರ ವಿಭಾಗದ ಸೆಮಿಫೈನಲ್‌ ಸೆಣಸಾಟದಲ್ಲಿ ನಿಕ್ಷೇಪ್‌ 6–1, 4–6, 6–1ರಲ್ಲಿ ಕರ್ನಾಟಕದವರೇ ಆದ ಎಸ್‌್. ವಿಘ್ನೇಶ್‌ ಎದುರು ಗೆಲುವು ಸಾಧಿಸಿದರು.

ಎಐಟಿಎ ಶ್ರೇಯಾಂ ಪಟ್ಟಿಯ 16 ವರ್ಷದೊಳಗಿನವರ ವಿಭಾಗದಲ್ಲಿ ಅಗ್ರ ಸ್ಥಾನ ಹೊಂದಿರುವ ನಿಕ್ಷೇಪ್‌ ಮೊದಲ ಮತ್ತು ಮೂರನೇ ಸೆಟ್‌ನಲ್ಲಿ ಸುಲಭ ಗೆಲುವು ಪಡೆದರು. ಜೊತೆಗೆ, ಎರಡನೇ ಸೆಟ್‌ನಲ್ಲಿ ಹಿನ್ನಡೆ ಕಂಡರಾದರೂ ಸುಲಭವಾಗಿ ಸೋಲೊಪ್ಪಿಕೊಳ್ಳಲಿಲ್ಲ.

ಈ ವಿಭಾಗದ ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಮಹಾರಾಷ್ಟ್ರದ ರಿಯಾನ ಪಂಡೊಲೆ 4–6, 6–4, 7–6ರಲ್ಲಿ ಪಶ್ವಿಮ ಬಂಗಾಳದ ಸನಿಲ್‌ ಜಗಿತಿಯಾನಿ ಎದುರು ಗೆದ್ದರು. ಭಾನುವಾರ ಬೆಳಿಗ್ಗೆ 10.30ಕ್ಕೆ ಫೈನಲ್‌ ಪಂದ್ಯಗಳು ನಡೆಯಲಿವೆ.

ಮುಂಬೈಯಲ್ಲಿ ಹೋದ ವಾರ ನಡೆದ ಸಿಸಿಐ ಅಂತರರಾಷ್ಟ್ರೀಯ ಐಟಿಎಫ್ ಟೂರ್ನಿಯಲ್ಲಿ ನಿಕ್ಷೇಪ್‌ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದರು.

ಪ್ರಶಸ್ತಿ ಘಟ್ಟಕ್ಕೆ ಸ್ನೇಹಲ್‌: ಬಾಲಕಿಯರ ವಿಭಾಗದ ನಾಲ್ಕರ ಘಟ್ಟದ ಪೈಪೋಟಿ ಯಲ್ಲಿ ಸ್ನೇಹಲ್‌ 6–0, 6–1ರಲ್ಲಿ ಗುಜ ರಾತ್‌ನ ವೈದೇಹಿ ಚೌಧರಿ ಮೇಲೂ, ತಮಿಳುನಾಡಿನ ಆರ್‌. ಎ. ಅಭಿನಿಕಾ 6–0, 6–0ರಲ್ಲಿ ಮಹಾರಾಷ್ಟ್ರದ ಶಿವಾನಿ ಎಸ್‌. ವಿರುದ್ಧವೂ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT