ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಸೆರೆನಾಗೆ ಪ್ರಶಸ್ತಿ

Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಬ್ರಿಸ್ಬೇನ್‌ (ರಾಯಿಟರ್ಸ್‌): ಅಮೆರಿಕದ ಸೆರೆನಾ ವಿಲಿಯಮ್ಸ್‌ ಇಲ್ಲಿ ನಡೆಯು ತ್ತಿರುವ ಬ್ರಿಸ್ಬೇನ್‌ ಇಂಟರ್‌ನ್ಯಾಷನಲ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಸೆರೆನಾ 6-4, 7-5 ರಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ ಜಯ ಸಾಧಿಸಿದರು.

ಮೊದಲ ಸೆಟ್ಅನ್ನು ಸುಲಭವಾಗಿ ಗೆದ್ದುಕೊಂಡ ಸೆರೆನಾ ಎರಡನೇ ಸೆಟ್‌ನಲ್ಲಿ 2-4 ರಲ್ಲಿ ಹಿನ್ನಡೆ ಅನುಭವಿ ಸಿದ್ದರು. ಆ ಬಳಿಕ ಎಚ್ಚರಿಕೆಯ ಆಟವಾಡಿ ಪಂದ್ಯ ತಮ್ಮದಾಗಿಸಿ ಕೊಂಡರು. ಮುಂಬರುವ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಗೆ ನಾನು ಸಜ್ಜಾಗಿದ್ದೇನೆ ಎಂಬುದನ್ನು ಸೆರೆನಾ ಈ ಗೆಲುವಿನ ಮೂಲಕ ತೋರಿಸಿಕೊಟ್ಟರು.
ಫೆಡರರ್‌-ಹೆವಿಟ್‌ ಪೈಪೋಟಿ: ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಮತ್ತು ಆಸ್ಟ್ರೇಲಿಯದ ಲೇಟನ್‌ ಹೆವಿಟ್‌ ಇದೇ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಪರಸ್ಪರ ಪೈಪೋಟಿ ನಡೆಸುವರು.

ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಫೆಡರರ್‌ 6-3, 6-7, 6-3 ರಲ್ಲಿ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು ಮಣಿಸಿದರು. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಹೆವಿಟ್‌ 5-7, 6-4, 6-3 ರಲ್ಲಿ ಜಪಾನ್‌ನ ಕೀ ನಿಶಿಕೊರಿ ವಿರುದ್ಧ ಗೆದ್ದರು.

ಫೆಡರರ್‌ ಟೈಬ್ರೇಕರ್‌ನಲ್ಲಿ ಕೊನೆ ಗೊಂಡ ಎರಡನೇ ಸೆಟ್‌ಅನ್ನು ಎದುರಾ ಳಿಗೆ ಒಪ್ಪಿಸಿದರೂ, ನಿರ್ಣಾಯಕ ಸೆಟ್‌ ನಲ್ಲಿ ಉತ್ತಮ ಪ್ರದರ್ಶನ ತೋರಿದರು. ‘ಹೆವಿಟ್‌ ವಿರುದ್ಧದ ಫೈನಲ್‌ ಪಂದ್ಯ ಸವಾಲಿನಿಂದ ಕೂಡಿರಲಿದೆ’ ಎಂದು ಸ್ವಿಸ್‌ ಆಟಗಾರ ಪ್ರತಿಕ್ರಿಯಿಸಿದ್ದಾರೆ. ಇವರಿಬ್ಬರು ಇದುವರೆಗೆ ಒಟ್ಟು 26 ಸಲ ಪೈಪೋಟಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT