ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಂಬರೀಕರಣಕ್ಕೆ ಚಾಲನೆ

Last Updated 20 ಅಕ್ಟೋಬರ್ 2012, 4:50 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಬಡಾನಿಡಿಯೂರು ಗ್ರಾಮದ ಹಂಪನಕಟ್ಟೆಯಿಂದ ಮಾರಿಗುಡ್ಡೆ ಪೌಂಜಿಗುಡ್ಡೆ ರಸ್ತೆಯ ಡಾಂಬರೀಕರಣ ಕಾಮಗಾರಿ ಮತ್ತು ಹಂಪನಕಟ್ಟೆ ವಿಜಯಾ ಬ್ಯಾಂಕಿನ ಎದುರಿನಿಂದ ಬಲಕ್ಕೆ ರೈಸ್‌ಮಿಲ್‌ನಿಂದ ಮಾರಿಗುಡ್ಡೆ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಈಚೆಗೆ ಚಾಲನೆ ನೀಡಿದರು.

ಹಂಪನಕಟ್ಟೆಯಿಂದ ಮಾರಿಗುಡ್ಡೆ ಪೌಂಜಿಗುಡ್ಡೆ ಕಾಮಗಾರಿ 15 ಲಕ್ಷ ರೂಪಾಯಿ ವೆಚ್ಚದಲ್ಲಿ ಮತ್ತು ಹಂಪನಕಟ್ಟೆ ರಸ್ತೆಯ ಕಾಮಗಾರಿಗೆ 20 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಮುಖ್ಯಮಂತ್ರಿ ಅವರ ವಿಶೇಷ ಯೋಜನೆಯಡಿ ಮಂಜೂರಾಗಿರುವ ಒಟ್ಟು 35 ಲಕ್ಷ ರೂಪಾಯಿಯಲ್ಲಿ ಈ ಕಾಮಗಾರಿ ಮಾಡಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ತಾಲ್ಲೂಕು ಪಂಚಾಯಿತಿ ಸದಸ್ಯರಾದ  ಶೋಭಾ ಎಸ್. ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಪಂಚಾಯಿತಿ ಸದಸ್ಯ ಉಮೇಶ್ ಪೂಜಾರಿ, ಬಡಾನಿಡಿಯೂರು ಯುವಕ ಮಂಡಲದ ಅಧ್ಯಕ್ಷ ಅಮಿತ್ ಎಸ್. ಕಾಂಚನ್, ಅರುಣ್ ಸನಿಲ್, ನಿರಂಜನ್ ಶೆಟ್ಟಿ, ಉದಯ ಕುಮಾರ್, ಅಶೋಕ್, ಕಿರಣ್, ಇರ್ಫಾನ್, ಅಲ್ವಿನ್ ಫರ್ನಾಂಡಿಸ್, ಗುತ್ತಿಗೆದಾರ ಜೀವನ್ ಶೆಟ್ಟಿ, ಗಣೇಶ್ ಪುತ್ರನ್, ಅಟೋ ಚಾಲಕ-ಮಾಲೀಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT