ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲರ್ ಎದುರು ರೂಪಾಯಿ ಮೌಲ್ಯ ತಿಂಗಳಲ್ಲೇ ಕನಿಷ್ಠ

Last Updated 4 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಸತತ ಕುಸಿತ ಕಾಣುತ್ತಿರುವ ಷೇರುಪೇಟೆ ಹಾದಿಗೇ ಬಂದಿರುವ ರೂಪಾಯಿ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಗುರುವಾರ 44 ಪೈಸೆ ಮೌಲ್ಯ ಕಳೆದುಕೊಂಡಿತು. 1 ಡಾಲರ್‌ಗೆ ರೂ.54.87ರಷ್ಟು ಕಡಿಮೆ ವಿನಿಮಯ ಮೌಲ್ಯ ಪಡೆಯಿತು. ಇದು ಕಳೆದೊಂದು ತಿಂಗಳಲ್ಲಿಯೇ ರೂಪಾಯಿಯ ಕನಿಷ್ಠ ಮಟ್ಟದ ವಿನಿಮಯ ಬೆಲೆಯಾಗಿದೆ.

ಚಾಲ್ತಿ ಖಾತೆ ಕೊರತೆ ಹೆಚ್ಚಳವೂ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ. ಸದ್ಯದ ಅವಧಿಗೆ 1 ಡಾಲರ್ ಎದುರು ರೂ.54.50ರಿಂದ 55.30ರವರೆಗೂ ಏರಿಳಿತ ಕಾಣಲಿದೆ ಎಂದು `ಕೊಟಕ್ ಸೆಕ್ಯುರಿಟೀಸ್'ನ ವಿನಿಮಯ ವಿಶ್ಲೇಷಕ ಅನಿಂದ್ಯ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT