ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಹ್ರಾಡೂನ್: ನದಿಗೆ ಬಸ್ ಉರುಳಿ 15 ಸಾವು

Last Updated 4 ಸೆಪ್ಟೆಂಬರ್ 2011, 11:35 IST
ಅಕ್ಷರ ಗಾತ್ರ

ಡೆಹ್ರಾಡೂನ್ (ಪಿಟಿಐ):  ಇಲ್ಲಿನ ಗುಡ್ಡಗಾಡು ಪ್ರದೇಶದಲ್ಲಿನ ಟ್ಯೂನಿ ಮಾರ್ಕೆಟ್ ಎಂಬಲ್ಲಿ ಭಾನುವಾರ ಬಸ್ಸೊಂದು ಉಕ್ಕಿ ಹರಿಯುತ್ತಿದ್ದ  ಯಮುನಾ ನದಿಯ ಉಪನದಿ ಟೋನ್ಸ್ ನದಿಯಲ್ಲಿ ಬಿದ್ದ ಪರಿಣಾಮ ಕನಿಷ್ಠ 15 ಜನರು ಮೃತಪಟ್ಟಿದ್ದಾರೆ. ಈ ಅಪಘಾತದಲ್ಲಿ ಎಂಟು ಮಂದಿ ಕಾಣೆಯಾಗಿದ್ದಾರೆ.

ಇದುವರೆಗೆ 15 ಶವಗಳು ಪತ್ತೆಯಾಗಿವೆ. ‘ಕಾಣೆಯಾದ ಎಂಟು ವ್ಯಕ್ತಿಗಳ ಶೋಧ ಕಾರ್ಯ ಚುರುಕಿನಿಂದ  ನಡೆದಿದೆ ಎಂದು  ಜಿಲ್ಲಾಧಿಕಾರಿ ಕುರ್ವೆ ಅವರು ತಿಳಿಸಿದ್ದಾರೆ. ಇದುವರೆಗೆ ನದಿಯಲ್ಲಿ ಬಿದ್ದ ಬಸ್ಸಿನ ಸುಳಿವು ದೊರೆತಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಗಾಯಗೊಂಡಿರುವ 12 ಮಂದಿಯನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ  ಬಸ್ ಕಟ್ಯಾಲ್ ನಿಂದ ಡೆಹ್ರಾಡೂನ್‌ಗೆ ತೆರಳುತ್ತಿತ್ತು. ಚಾಲಕನು ಬಸ್ಸನ್ನು ಕಡಿದಾದ ತಿರುವಿನಲ್ಲಿ ಚಾಲನೆ ಮಾಡುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT