ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಾಗಿದೆ, ಇನ್ನು ಮಾಡೋಲ್ಲ: ಶಾಸಕ

Last Updated 10 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಉಡುಪಿ: ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸೋದ್ಯಮ ಹೆಸರಿನಲ್ಲಿ ಇಂಥ ಅಹೋರಾತ್ರಿ ಉತ್ಸವಕ್ಕೆ ಇನ್ನೆಂದೂ ಅವಕಾಶ ನೀಡುವುದಿಲ್ಲ. ವಿದೇಶಿಯರನ್ನು ಇಲ್ಲಿಗೆ ಕರೆಸುವುದೂ ಇಲ್ಲ~....

ಹೀಗೆ ವಚನ ನೀಡಿದಂತೆ ನುಡಿದವರು ಉಡುಪಿ ಶಾಸಕ ರಘುಪತಿ ಭಟ್, ನಗರದಲ್ಲಿನ ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಅವರು, `ಮೊದಲ ಬಾರಿಗೆ ಇಂಥದ್ದೊಂದು ಉತ್ಸವಕ್ಕೆ ಅನುಮತಿ ನೀಡಲಾಗಿತ್ತು. ನಾವು ಧನಾತ್ಮಕವಾಗಿಯಷ್ಟೇ ಯೋಚಿಸಿದ್ದೆವು. ಉತ್ಸವದ ಬಗ್ಗೆ ನಮಗಾಗಲೀ, ಜಿಲ್ಲಾಡಳಿತಕ್ಕಾಗಲೀ ಸ್ಪಷ್ಟಕಲ್ಪನೆ ಇರಲಿಲ್ಲ. ಉತ್ಸವದಲ್ಲಿ ಅತಿರೇಕಗಳು ನಡೆಯುತ್ತಿವೆ ಎನ್ನುವ ಸುದ್ದಿ ಬಂದಾಗಲೇ ನಮಗೆ ಅರಿವಾಗಿದ್ದು~ ಎಂದು ತಪ್ಪು ಒಪ್ಪಿಕೊಂಡರು.

`ಈ ಎಲ್ಲ ಬೆಳವಣಿಗೆಗಳಿಂದಾಗಿ ವಿದೇಶಿಯರನ್ನು ಕರೆಯಿಸಿ ನಿಭಾಯಿಸುವುದು ಸಾಧ್ಯವಿಲ್ಲ ಎಂದು ನಮಗೂ ಅರ್ಥವಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಸ್ಥಳೀಯ ಕಲಾವಿದರನ್ನೇ ಕರೆಯಿಸಿ ಉತ್ಸವವನ್ನು ದ್ವೀಪದಲ್ಲಿ ಆಯೋಜಿಸುತ್ತೇವೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT