ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾನಾದಲ್ಲಿ ನವಿಲಿನ ಹೆಜ್ಜೆ ಗುರುತು!

Last Updated 15 ಅಕ್ಟೋಬರ್ 2012, 5:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಭಾನುವಾರ ಮುಸ್ಸಂಜೆ ಸವಾಯಿ ಗಂಧರ್ವ ಸಭಾಂಗಣದ ಭೂಮಿಕೆಯ ಮೇಲೆ ನವಿಲಿನ ಹೆಜ್ಜೆ ಗುರುತುಗಳು ಮೂಡಿದವು!! ಭರತನಾಟ್ಯ, ಫ್ಯೂಜನ್ ನೃತ್ಯ ಪ್ರಕಾರಗಳನ್ನು ಅಸ್ವಾದಿಸಿದ ನೃತ್ಯ ರಸಿಕರು ಮನದುಂಬಿ ತಲೆದೂಗಿದರು.

ನಗರದ ಶಿವಶಕ್ತಿ ಕಲಾ ಕೇಂದ್ರದ 35ನೇ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ `ತರಾನಾ-2012~ ನೃತ್ಯ ಕಾರ್ಯಕ್ರಮದಲ್ಲಿ ಪುಟಾಣಿ ನೃತ್ಯ ಕಲಾವಿದರು, ಹಿರಿಯ ವಿದ್ವನ್ಮಣಿಗಳು ಮನೋಜ್ಞವಾಗಿ ನರ್ತಿಸಿ ಪ್ರೇಕ್ಷಕರ ಮನ ಮುಟ್ಟಿದರು. ಕೇವಲ ಶಾಸ್ತ್ರೀಯ ನೃತ್ಯಕ್ಕೆ ಸೀಮಿತವಾಗದ ಕಾರ್ಯಕ್ರಮ ವೈವಿಧ್ಯಮಯ ಪ್ರಕಾರಗಳಿಂದ ಗಮನ ಸೆಳೆಯಿತು. ಭರತನಾಟ್ಯದ ಇಂಪಿತ್ತು. ಜಾನ ಪದದ ತಂಪಿತ್ತು. ಒಡಿಸ್ಸಿಯ ಸುಂದರ ಸ್ಪರ್ಶವಿತ್ತು.

ಶಿವಶಕ್ತಿ ಕಲಾಕೇಂದ್ರದ ಮುಖ್ಯಸ್ಥೆ ವಿದುಷಿ ಊರ್ಮಿಳಾ ಬಿ. ಪಾತ್ರಾ ಅವರು ಸಂಯೋಜಿಸಿ, ನರ್ತಿಸಿದ `ಫ್ಯೂಜನ್ ನೃತ್ಯ~ ಪ್ರೇಕ್ಷಕರ ಮೈನವಿರೇಳಿಸಿತು. ವೇಗದ ಹೆಜ್ಜೆಗಳು ಪ್ರೇಕ್ಷಕರ ಹೃದಯ ಬಡಿತವನ್ನು ಇಮ್ಮಡಿಗೊಳಿಸಿದವು.

ಊರ್ಮಿಳಾ ಪಾತ್ರಾ, ತಮ್ಮ ಅರವತ್ತರ ವಯಸ್ಸಿನಲ್ಲೂ ವಿದ್ವತ್ತಿನ ಹೆಜ್ಜೆ ಇಟ್ಟರು. ಸುಂದರ ವಸ್ತ್ರ ವಿನ್ಯಾಸದಿಂದ ಗಮನ ಸೆಳೆದ ಸಹ ನರ್ತಕಿಯರ ಆಗಮನ (ಎಂಟ್ರಿ)ವೇ ವಿಶೇಷವಾಗಿತ್ತು. ನವಿಲು ಗರಿ ಬಿಚ್ಚುವಂತೆ ರಂಗದ ಮೇಲೆ ಕಲಾವಿದರು ಬಿಚ್ಚಿಕೊಂಡರು. ಬಾನ್ಸುರಿ ಮಾಧುರ‌್ಯದ ಆಳಕ್ಕೆ, ನೃತ್ಯ ಮೇಳಕ್ಕೆ ಪ್ರೇಕ್ಷಕರು ಚಪ್ಪಾಳೆಗಳ ಮಳೆಗರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT