ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾನಿಷ್ಕ್ `ಇನರ' ಸಂಗ್ರಹ ಬಿಡುಗಡೆ

ಚೆಲ್ಲಾಪಿಲ್ಲಿ
Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಜ್ಯೂವೆಲರಿ ಬ್ರಾಂಡ್ ತಾನಿಷ್ಕ್ `ಇನರ' ವಜ್ರಾಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ.

ಹೊಸ ತಲೆಮಾರಿನ ವಜ್ರಾಭರಣ ಸಂಗ್ರಹ ಇದಾಗಿದೆ. ಅರೇಬಿಕ್ ಪದ `ಇನರ' ಹೊಳಪು ಅಥವಾ ಬೆಳಕಿನ ಸಂಕೇತವಾಗಿದೆ. ಇನರದ `ಕಾಸ್ಮಿಕ್ ಸ್ವಿರ್ಲ್ಸ್', `ಮೆಟರ್ ಶವರ್' ಮತ್ತು `ಸ್ಟಾರ್ ಬ್ರುಸ್ಟಸ್' ಗಮನ ಸೆಳೆಯುತ್ತದೆ.

120ಕ್ಕೂ ಹೆಚ್ಚು ಶೈಲಿಗಳ ಇನರ ಸಂಗ್ರಹ ನೆಕ್ಲೇಸ್, ಬಳೆ, ಕಿವಿಯೋಲೆ, ಮತ್ತು ಕಾಕ್‌ಟೈಲ್ ರಿಂಗ್‌ಗಳನ್ನು ಹೊಂದಿದೆ. ಬೆಲೆ ರೂ2 ಲಕ್ಷದಿಂದ ರೂ6 ಲಕ್ಷ.

`ಸಂಶೋಧನಾತ್ಮಕ ವಿನ್ಯಾಸದ ಸಂಗ್ರಹವನ್ನು ಪರಿಚಯಿಸಲು ಸಂತಸವಾಗುತ್ತಿದೆ. ನೈಜ ವಜ್ರಗಳಿಂದ ಕಸೂತಿ ಮಾಡಲಾಗಿದ್ದು, ಈ ಸಂಗ್ರಹ ಸಂಪ್ರದಾಯ ಮತ್ತು ಆಧುನಿಕ ಅಲಂಕಾರದ ಸಮ್ಮಿಲನವಾಗಿದೆ.

ವಜ್ರಾಭರಣ ಇಂದು ಪ್ರತಿ ಮಹಿಳೆಯ ಸೌಂದರ್ಯದ ಪ್ರತಿರೂಪವಾಗಿದೆ. ಭಾರತೀಯ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಸಂಗ್ರಹ ರೂಪಿಸಲಾಗಿದೆ' ಎಂದು ತಾನಿಷ್ಕ್ ಚಿಲ್ಲರೆ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ಸಂದೀಪ್ ಕುಲ್ಹಳ್ಳಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT