ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳ ಕಂದನಿಗೂ ಹಲ್ಲು

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಕೆಲವು ಮಕ್ಕಳಿಗೆ ಹುಟ್ಟಿದಾಗಲೇ ಹಲ್ಲುಗಳು ಇರುತ್ತವೆ! ಇದಕ್ಕೆ ಹುಟ್ಟು ಹಲ್ಲುಗಳು ಅಥವಾ ನೇಟಲ್ ಎಂದು ಕರೆಯುತ್ತಾರೆ. ಇನ್ನು ಕೆಲವು ಹಲ್ಲುಗಳು ಮಕ್ಕಳು ಹುಟ್ಟಿದ 30 ದಿನಗಳಲ್ಲಿ ಹುಟ್ಟುತ್ತವೆ. ಅವಕ್ಕೆ ನಿಯೋ ನೇಟಲ್ ಹಲ್ಲುಗಳು ಎನ್ನುತ್ತಾರೆ.
ಸಾಮಾನ್ಯವಾಗಿ ಹುಟ್ಟು ಹಲ್ಲುಗಳು ಕೆಳಗಡೆ ದವಡೆಯ ಬಾಚಿ ಹಲ್ಲುಗಳಾಗಿ ಇರುತ್ತವೆ. ಇವು ಹಾಲು ಹಲ್ಲುಗಳ ರೀತಿ ಕಂಡುಬಂದರೂ ವಾಸ್ತವದಲ್ಲಿ ಅವು ಹಾಲು ಹಲ್ಲುಗಳಲ್ಲ.

ಇಂತಹ ಹಲ್ಲುಗಳಲ್ಲಿ ಎನಾಮಲ್ ಎಂದು ಕರೆಯುವ ಮೇಲಿನ ಪದರ ಮತ್ತು ಎರಡನೇ ಪದರವಾದ ಡೆಂಟೈನ್ (ದಂತದ್ರವ್ಯ) ಮೃದುವಾಗಿ ಇದ್ದು, ಬೇರಿನ ಬೆಳವಣಿಗೆ ಆಗಿರುವುದಿಲ್ಲ. ಬೇರುಗಳು ಇಲ್ಲದ ಕಾರಣ ಹಲ್ಲುಗಳು ಸಡಿಲವಾಗಿ ಮಗು ಆಹಾರವನ್ನು ನುಂಗುವ ಸಾಧ್ಯತೆ ಹೆಚ್ಚು. ಅಲ್ಲದೆ ತಾಯಿಗೆ ಹಾಲುಣಿಸಲು ಸಹ ಕಷ್ಟವಾಗುತ್ತದೆ. ಆದ್ದರಿಂದ ನಿಮ್ಮ ಮಗುವಿಗೆ ಈ ರೀತಿಯ ಹುಟ್ಟು ಹಲ್ಲುಗಳು ಕಂಡುಬಂದರೆ ತಕ್ಷಣ ದಂತ ವೈದ್ಯರನ್ನು ಕಂಡು ಸಲಹೆ ಪಡೆಯಿರಿ.

ಹುಟ್ಟು ಹಲ್ಲುಗಳ ಬಗ್ಗೆ ಕೆಲವು ಮೂಢನಂಬಿಕೆಗಳಿವೆ. ಏನೆಂದರೆ, ಹುಟ್ಟು ಹಲ್ಲು ಇರುವ ಮಗುವಿಗೆ ಅದೃಷ್ಟ ಬರುತ್ತದೆ, ಮಗುವಿನ ಅಜ್ಜಿ--– ತಾತನಿಗೆ ಒಳ್ಳೆಯದಾಗುವುದಿಲ್ಲ ಇತ್ಯಾದಿ. ಆದರೆ ಇಂತಹ ನಂಬಿಕೆಗಳಲ್ಲಿ ಯಾವುದೇ ಹುರುಳಿಲ್ಲ. ಹುಟ್ಟು ಹಲ್ಲುಗಳು ಯಾವ ಕಾರಣದಿಂದ ಬಂದಿವೆ ಎಂದು ಅರಿಯುವುದು ಮುಖ್ಯ.

ಅಕಾಲ ಹಲ್ಲಿಗೆ ಕಾರಣ?
1. ವಂಶ ಪಾರಂಪರ್ಯ 

2. ಪೌಷ್ಟಿಕಾಂಶದ ಕೊರತೆ

3. ಸತ್ವಯುತ ಆಹಾರದ ಕೊರತೆ

4. ರೋಗದ ಸೋಂಕು

5. ಹಲ್ಲುಗಳ ಮೊಳಕೆ ದವಡೆಯು ತುಂಬಾ ಮೇಲಿನ ಜಾಗದಲ್ಲಿ ಇದ್ದಾಗ

6. ಸೋಟಸ್ ಸಿಂಡ್ರೋಮ್ ಕಂಡುಬಂದರೆ

7. ಎಲ್ಲಿಸ್ ವಾನ್ ಕ್ರೆವೆಲ್ಡ್ ಸಿಂಡ್ರೋಮ್ ಕಂಡುಬಂದಾಗ

8. ಹಲ್ಲಿನ ಮೊಳಕೆ ಮತ್ತು ಮೂಳೆಯಲ್ಲಿ ಆಗುವ ಬೆಳವಣಿಗೆ ವ್ಯತ್ಯಾಸದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT