ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಕಾಲುವೆಗುಂಟ ಆಂಧ್ರಕ್ಕೆ ನೀರು

Last Updated 9 ಜುಲೈ 2013, 9:57 IST
ಅಕ್ಷರ ಗಾತ್ರ

ಬಳ್ಳಾರಿ:  ತುಂಗಭದ್ರಾ ಜಲಾಶಯದ ಎಡದಂಡೆಯ ಮೇಲ್ಮಟ್ಟ ಹಾಗೂ ಕೆಳ ಮಟ್ಟದ ಕಾಲುವೆಗಳಗುಂಟ ಸೋಮವಾರ ಮಧ್ಯಾಹ್ನದಿಂದ ಆಂಧ್ರಪ್ರದೇಶದ ಪಾಲಿನ ನೀರನ್ನು ಹರಿಬಿಡಲಾಗುತ್ತಿದೆ.

ಮೇಲ್ಮಟ್ಟದ ಕಾಲುವೆಗುಂಟ 1270 ಕ್ಯೂಸೆಕ್, ಕೆಳಮಟ್ಟದ ಕಾಲುವೆಗುಂಟ 920 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ಸೋಮವಾರ ತುಂಗಭದ್ರಾ ಜಲಾಶಯದಲ್ಲಿ 52.104 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಒಳಹರಿವಿನ ಪ್ರಮಾಣ 66267 ಕ್ಯೂಸೆಕ್ ಇದೆ. ಬಲದಂಡೆಯ ಎರಡು ಈ ಕಾಲುವೆಗಳ್ಲ್ಲಲದೆ, ನದಿಗುಂಟ 500 ಕ್ಯೂಸೆಕ್, ರಾಯ, ಬಸವ, ವಿಜಯನಗರ ಕಾಲುವೆಗುಂಟ 100 ಕ್ಯೂಸೆಕ್ ಸೇರಿದಂತೆ ಒಟ್ಟು 2790 ಕ್ಯೂಸೆಕ್ ಹೊರ ಹರಿವು ಇದೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.

ಇದೇ 9ರಂದು ಮಂಗಳವಾರ ಮುನಿರಾಬಾದ್‌ನಲ್ಲಿ ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿದ ನಂತರ ಕರ್ನಾಟಕದ ಪಾಲಿನ ನೀರನ್ನು ಹರಿಬಿಡುವ ನಿರ್ಧಾರ ಹೊರಬೀಳಲಿದೆ. ಸಭೆಯ ನಂತರ ಎಡದಂಡೆ ಕಾಲುವೆಗುಂಟ ರಾಯಚೂರು, ಕೊಪ್ಪಳ ತಾಲ್ಲೂಕಿನ ರೈತರಿಗೆ ಹಾಗೂ ಬಲದಂಡೆಯ ಈ ಎರಡೂ ಕಾಲುವೆಗಳ ಮೂಲಕ ಹೊಸಪೇಟೆ, ಬಳ್ಳಾರಿ ಮತ್ತು ಸಿರುಗುಪ್ಪ ತಾಲ್ಲೂಕುಗಳ ರೈತರ ಪಾಲಿನ ನೀರು ಹರಿಸುವ ಸಾಧ್ಯತೆ ಇದೆ.

ನೀರಾವರಿ ಸಲಹಾ ಸಮಿತಿ ಸಭೆ ಇಂದು
ಬಳ್ಳಾರಿ: ತುಂಗಭದ್ರಾ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆಯು ಇದೇ 9ರಂದು ಬೆಳಿಗ್ಗೆ 11ಕ್ಕೆ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನ ತುಂಗಭದ್ರಾ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸಮಿತಿಯ ಸದಸ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳು  ಆಗಮಿಸಿ ಸಲಹೆ, ಸೂಚನೆ ನೀಡಬೇಕು ಎಂದು ಸಮಿತಿ ಕಾರ್ಯದರ್ಶಿ ಹಾಗೂ ಮುನಿರಾಬಾದ್ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಎಸ್. ಎಚ್. ಮಂಜಪ್ಪ ತಿಳಿಸಿದ್ದಾರೆ.

2013ನೇ ಸಾಲಿನ ಮುಂಗಾರು ಹಂಗಾಮಿಗೆ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ವಿವಿಧ ಕಾಲುವೆಗಳಿಗೆ ನೀರನ್ನು ಹರಿಬಿಡುವ ಕುರಿತು ಹಾಗೂ  ಅಧಿಸೂಚನೆ ಹೊರಡಿಸುವ ಬಗ್ಗೆ ಚರ್ಚಿಸಲಾಗುವುದು.

ಜಿಲ್ಲೆಯಲ್ಲಿ 61.6 ಮಿ.ಮೀ. ಮಳೆ
ಬಳ್ಳಾರಿ: ಜಿಲ್ಲೆಯಾದ್ಯಂತ ಜುಲೈ 7ರ ಬೆಳಿಗ್ಗೆಯಿಂದ 8ರ ಬೆಳಗಿನವರೆಗೆ ಒಟ್ಟು  61.6 ಮಿಲಿಮೀಟರ್ ಮಳೆಯಾಗಿದೆ.

ಬಳ್ಳಾರಿ ತಾಲ್ಲೂಕಿನಲ್ಲಿ 4.6 ಮಿ.ಮೀ, ಹಡಗಲಿಯಲ್ಲಿ 1.2,  ಹಗರಿ ಬೊಮ್ಮನಹಳ್ಳಿಯಲ್ಲಿ 1.6, ಹೊಸಪೇಟೆಯಲ್ಲಿ 26.8, ಕೂಡ್ಲಿಗಿಯಲ್ಲಿ 1, ಸಂಡೂರುರಿನಲ್ಲಿ 15.4, ಸಿರುಗುಪ್ಪ ತಾಲೂಕಿನಲ್ಲಿ 11 ಮಿ.ಮೀ ಮಳೆ ಸುರಿದಿದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ವಾಗೇಶ್ ಶಿವಾಚಾರ್ಯ ತಿಳಿಸಿದ್ದಾರೆ.

ಸಿರುಗುಪ್ಪ ತಾಲ್ಲೂಕಿನಲ್ಲಿ ಜುಲೈ 6ರಿಂದ 7ರ ಬೆಳಗಿನವರೆಗೆ 24.4 ಮಿ.ಮೀ. ಮಳೆಯಾಗಿದೆ. ಜುಲೈ ತಿಂಗಳಲ್ಲಿ ಇದುವರೆಗೆ ಒಟ್ಟು 175.9 ಮಿ.ಮೀ. ಮಳೆಯಾಗಿ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT